Friday 11 December 2015


 ಬಾನು ಮುಷ್ತಾಕ್                       ಆರ್.ಪಿ.ಎಲ್. ಕ್ವಾರ್ಟರ್ಸ್ ರಸ್ತೆ                                                
   ಬಿ.ಎಸ್ಸಿ., ಎಲ್.ಎಲ್.ಬಿ,.                       ಹಾಸನ -573201    
ನ್ಯಾಂiÀi ವಾದಿ                         ಮೊಬೈಲ್ : 9448220339
    8453868111                                                                        
***************************************************************                                                                                                                                                                               ದಿನಾಂಕ:  11/12/2015  
:: ವ್ಯಕ್ತಿ ವಿವರ ::

           ಹೆಸರು               :      ಬಾನು ಮುಷ್ತಾಕ್
           ಜನ್ಮ ದಿನಾಂಕ               :   03-04-1948
      ಜನ್ಮ ಸ್ಥಳ                   :   ಹಾಸನ

           ವಿದ್ಯಾರ್ಹತೆ           :      ಬಿ.ಎಸ್.ಸಿ.,ಎಲ್.ಎಲ್.ಬಿ.,
           ತಂದೆ                :      ಎಸ್.ಎ. ರೆಹಮಾನ್
           ತಾಯಿ               :      ಅಖ್ತರ್ ಬಾನು
           ಪತಿ                  :      ಮುಷ್ತಾಕ್  ಮೊಹಿದ್ದೀನ್
           ಮಕ್ಕಳು           :      ಸಮೀನ ಮೆರಾಜ್, ಲುಬ್ನ ಹಿಜಾಬ್
                                      ಆಯಿಷಾ ನರ್ಗೀಸ್,
                                      ತಾಹೇರ್‍ಮುಷ್ತಾಕ್.

ಸಾರ್ವಜನಿಕ ಸೇವೆಯ ವಿವರಗಳು :
                                           
 1) ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ  
                   ಸದಸ್ಯೆಯಾಗಿ ಆಯ್ಕೆ.
  2) ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ  ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ
                 ಅಧ್ಯಕ್ಷೆಯಾಗಿ.

 3) ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿ.
             
 4) ಹಾಸನ ನಗರ ಗ್ರಂಥಾಲಯ ಸಮಿತಿಯ  ಸದಸ್ಯೆಯಾಗಿ

 5) ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ  ಮಂಡಳಿ ಸದಸ್ಯೆಯಾಗಿ ಸೇವೆ
    ಸಲ್ಲಿಸಿದ್ದು.

 6) ಹಾಸನದ ಜಿಲ್ಲಾ ಸಮತಾ ವೇದಿಕೆಯ  ಅಧ್ಯಕ್ಷೆಯಾಗಿ 1993ರಲ್ಲಿ
    ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದೇನೆ.

                                   ವೃತ್ತಿ                        :

 1) 1981-1990ರವರೆಗೆ ಲಂಕೇಶ್ ಪತ್ರಿಕೆಯ ಜಿಲ್ಲಾ  ವರದಿಗಾರ್ತಿಯಾಗಿ

 2) 1990ರಿಂದ ನ್ಯಾಯವಾದಿಯಾಗಿ ವೃತ್ತಿಯಲ್ಲಿ  ತೊಡಗಿಸಿ ಕೊಂಡಿದ್ದೇನೆ.

                         :: ಸಾಹಿತ್ಯ ಕ್ಷೇತ್ರ ::

1) ಕಥಾ ಸಂಕಲನಗಳು      :  * ಹೆಜ್ಜೆ ಮೂಡಿದ ಹಾದಿ (1990)
                           * ಬೆಂಕಿ ಮಳೆ         (1999)
                           * ಎದೆಯ ಹಣತೆ      (2004)
                           * ಸಫೀರಾ            (2006)
                           * ಬಡವರ ಮಗಳು ಹೆಣ್ಣಲ್ಲ (2014)
                           * ಇಬ್ಬನಿಯ ಕಾವು (2014 )
                           *ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ  (2014)
                           * ಹಸೀನಾ ಮತ್ತು ಇತರ ಕಥೆಗಳು ( 2015)
                         * ಆದಿಲ್‍ಶಾಹಿ ಚರಿತ್ರೆಯಾದ ತಾರೀಕ್-ಎ- ಫರಿಷ್ತಾ
                          ಗ್ರಂಥವನ್ನು  ಕನ್ನಡಕ್ಕೆ ಭಾಷಾಂತರಿಸಿದ್ದು ಪ್ರಕಟವಾಗಿರುತ್ತದೆ
                          (2015)
                         * ಕವನ ಸಂಕಲನ ‘ಒದ್ದೆ ಕಣ್ಣಿನ ಬಾಗಿನ’ (2015)
                        * ಪ್ರಬಂಧ ಸಂಕಲನ ‘ಹೂ ಕಣಿವೆಯ ಚಾರಣ’(2015)
                       3) ಸಂಗ್ರಹ
         
      1) ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಅನೇಕ
            ಕಥೆಗಳು  ಸೇರ್ಪಡೆಯಾಗಿವೆ.
     
                              ಅ) ಕಾಳೇಗೌಡ ನಾಗವಾರರವರ ಸಂಪಾದಕತ್ವದಲ್ಲಿ
                                   ‘ರಾಹಿಲ ಎಂಬ ಕನ್ಯೆಯ ಕಥೆ’(1984)
                              ಆ) ನಾ.ಡಿಸೋಜಾರವರ ಸಂಪಾದಕತ್ವದಲ್ಲಿ ‘ಸರಿದ
                                   ಕಾರ್ಮೋಡ’ ಎಂಬ ಕಥೆ(1987)
                              ಇ) ಅಮರೇಶ ನುಡಗೋಣಿ ಸಂಪಾದಕತ್ವದಲ್ಲಿ ‘ಒಮ್ಮೆ
                                   ಹೆಣ್ಣಾಗು ಪ್ರಭುವೆ’
                                    ಈ) ಪಾರಿವಾಳದ ರೆಕ್ಕೆಗಳು (2005)
                               
      2) 1999ರಲ್ಲಿ ಪ್ರಸಿಮ್ ಪ್ರಕಾಶನದವರು ಡಾ. ಆಮೂರರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಶತಮಾನದ    ಮಾಲಿಕೆಯ“ಅವಳ ಕತೆಗಳು’
   ಸಂಕಲನದಲ್ಲಿ ಸೇರ್ಪಡೆ  ‘ಸರಿದ ಕಾರ್ಮೋಡ’ ಎಂಬ ಕಥೆ.

     3)ಡಾ. ಆಮೂರರ ಸಂಪಾದಕತ್ವದಲ್ಲಿ ಅಂಕಿತಪ್ರಕಾಶನದ‘‘ಸ್ವಾತಂತ್ರ್ಯೋತ್ತರ  ಕನ್ನಡ ಕಥಾಲೋಕ”ದಲ್ಲಿ ಸೇರ್ಪಡೆ‘‘ದೇವರು ಮತ್ತು ಅಪಘಾತ”                                      ಎಂಬ ಕಥೆ (2004)

      4) ಚಲನಚಿತ್ರ       :    
 1) ‘ಕರಿನಾಗರಗಳು ‘ ಎಂಬ ಸಣ್ಣಕಥೆ  ‘‘ಹಸೀನಾ’’ಎಂಬ ಹೆಸರಿನ ಚಲನ                                                                                                                                                                                                                                                                                                       ಚಿತ್ರವಾಗಿದ್ದು,ಗಿರೀಶ್ ಕಾಸರವಳ್ಳಿಯವರು  ನಿರ್ದೇಶಕರು ಹಾಗೂ ತಾರಾರವರು        ನಿರ್ಮಾಪಕಿಯಾಗಿದ್ದಾರೆ.ಮತ್ತು ಮೇಲ್ಕಂಡ ಚಿತ್ರಕ್ಕೆ 3 ರಾಷ್ಟ್ರ ಪ್ರಶಸ್ತಿಗಳು ದೊರಕಿವೆ.      

 6) ಅನುವಾದ           :    
1) ‘ಪರಕೀಯ ಕಥೆ‘ ಹಿಂದಿ ಭಾಷೆಯಲ್ಲಿ  ಅನುವಾದಗೊಂಡಿದ್ದು, ಉತ್ತರ ಪ್ರದೇಶದ ಹಿಂದಿ ಅಕಾಡಮಿಯ  ಪ್ರಕಟಣೆಯಾದ ಇಂದ್ರಪ್ರಸ್ಥ ಭಾರತೀಯಲ್ಲಿ ಪ್ರಕಟವಾಗಿದೆ.
                                   
 2)“ಬೆಂಕಿ ಮಳೆ” ಕಥಾಸಂಕಲನದ  ಕಥೆಗಳು ಮಲಯಾಳಂ ಭಾಷೆಗೆ ಅನುವಾದಗೊಂಡಿದ್ದು ದೇಶಾಭಿಮಾನಿ  ಹಾಗೂ ಸ್ತ್ರೀ ಸಬದಮ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ಹಾಗೂ ಕಥಾಸಂಕಲನ  ಮಲಯಾಳಂನಲ್ಲಿ ಪ್ರಕಟವಾಗಿದೆ.

  3) ತಮಿಳು, ಪಂಜಾಬಿ, ಉರ್ದು, ಇಂಗ್ಲೀಷ್ ಭಾಷೆಗೆ ಅನೇಕ ಕಥೆಗಳು ಭಾಷಾಂತರಗೊಂಡಿವೆ

 
                        7) ಪ್ರಶಸ್ತಿ, ಪುರಸ್ಕಾರ  ಮತ್ತು ಬಹುಮಾನ   :  

 1) ‘ಒಮ್ಮೆ ಹೆಣ್ಣಾಗು ಪ್ರಭುವೆ’  ಪ್ರಜಾವಾಣಿಯಲ್ಲಿ ದಿನಾಂಕ: 30/11/97 ರಂದು ಪ್ರಕಟವಾದ ನನ್ನ  ಸಣ್ಣ ಕಥೆಗೆ ಸಂಭಾಷಣೆ ಬರೆದಿದ್ದು,  ಆಕಾಶವಾಣಿ ಬೆಂಗಳೂರು ವಾಣಿಜ್ಯಕೇಂದ್ರದವರ ಸಹಯೋಗದಿಂದ  ನಿರ್ಮಿಸಿದ ಸದರಿ ರೇಡಿಯೋ   ನಾಟಕಕ್ಕೆ 1999ರಇಂಟರ್ ನ್ಯಾಷನಲ್ ವಿಮೆನ್ ಫಾರ್  ರೇಡಿಯೋ ಅಂಡ್  ಟೆಲಿವಿಶನ್  ಬಹುಮಾನ ದೊರಕಿದೆ.

2) ನನ್ನ ಕವನ ‘ಅಮ್ಮನ ಸೀರೆ’ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು 1999ರ ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿವi  ಉದಯೋನ್ಮಖ ಕವಯತ್ರಿ ಬಹುಮಾನ ಪಡೆದಿದೆ.
3) ನೆಲಮನೆ ಪ್ರಕಾಶನದಿಂದ ಎರಡನೆ ಕಥಾಸಂಕಲನ ‘ಬೆಂಕಿಮಳೆ’
   ಪ್ರಕಟವಾಗಿದ್ದು, 2000ದ  ಇಸವಿಯ ಕರ್ನಾಟಕ ಲೇಖಕಿಯರ
   ಸಂಘದ ವತಿಯಿಂದ ಹೆಚ್.ವಿ. ಸಾವಿತ್ರಮ್ಮ ದತ್ತಿನಿಧಿ ಬಹುಮಾನ ದೊರಕಿದೆ.
                                         
 4) ಕನಾಟಕ ಸಾಹಿತ್ಯ ಅಕಾಡೆಮಿವತಿಯಿಂದ  1999ನೇ ಸಾಲಿನ ಸಣ್ಣಕಥೆ ಪ್ರಕಾರದ
    ಉತ್ತಮ ಕೃತಿಯೆಂದು ಪುಸ್ತಕ ಬಹುಮಾನ ದೊರಕಿದೆ.

 5) 2002ನೇ ಕರ್ನಾಟಕ ರಾಜ್ಯ ಪ್ರಶಸ್ತಿ  ಸಾಹಿತ್ಯಕ್ಕೆ ದೊರಕಿದೆ
 6) ಕರ್ನಾಟಕ ಸಾಹಿತ್ಯ ಅಕಾಡೆಮಿಯ  2004ರ ಸಾಲಿನ  ಗೌರವ ಪ್ರಶಸ್ತಿ ದೊರಕಿದೆ
 7) ಬೆಂಕಿಮಳೆ ಕಥಾ ಸಂಕಲನಕ್ಕೆ  ಇನ್ಫೋಸಿಸ್ ಸಾಹಿತ್ಯ ಪ್ರತಿಷ್ಠಾನದ  2002ರ ಸಾಲಿನ ಸುಧಾಮೂರ್ತಿ  ಪ್ರಶಸ್ತಿ ದೊರಕಿದೆ                                                                                                

 8)“ಶಾಶ್ವತೀ”ಯ ವತಿಯಿಂದ 2004ನೇ ವರ್ಷದ                          
    “ಕರ್ನಾಟಕ ಕಲ್ಪವಲ್ಲಿ” ಪ್ರಶಸ್ತಿ ದೊರಕಿದೆ.

 9) 2006ನೇ ಮಹಾಮಸ್ತಕಾಭಿಷೇಕದ ಅಖಿಲ ಭಾರತೀಯ ಜೈನ ಮಹಿಳಾ ಸಮ್ಮೇಳನದಪ್ರಶಸ್ತಿ   ದೊರೆಕಿದೆ.

  10) 2010ರ ಪದ್ಮಭೂಷಣ ಡಾ. ಬಿ. ಸರೋಜಾ ದೇವಿ  ಪ್ರಶಸ್ತಿ ದೊರಕಿದೆ
                   
 11) ದಾವಣೆಗೆರೆಯ ಬಸವ ಕೇಂದ್ರದಿಂದ 2013ರ ಶೂನ್ಯ ಪೀಠ  ಅಕ್ಕನಾಗಮ್ಮ ಪ್ರಶಸ್ತಿ ದೊರಕಿದೆ.

 12) ಮುಂಬೈ ಕರ್ನಾಟಕ ಸಂಘದ ವತಿಯಿಂದ 2014ರ ಡಾ||  ಸುನೀತ ಶೆಟ್ಟಿ ಸಾಹಿತ್ಯ ಪ್ರಶಸ್ತಿ
                   
    13) ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್‍ರವರ  ಕಛೇರಿಯಿಂದ 2014ರ ಜೀವ ಮಾನದ ಸಾಧನೆ ಪ್ರಶಸ್ತಿ

  14) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೊಯ್ಸಳ    ಮಹೋತ್ಸವದ ಸಂದರ್ಭದಲ್ಲಿ ಶತಮಾನೋತ್ಸವ ಗೌರವ   ಪ್ರಶಸ್ತಿಯನ್ನು ನೀಡಿರುತ್ತಾರೆ.(2015)


                     8) ಅಧ್ಯಯನ:
       
  1)   “ಬಾನುಮುಷ್ತಾಕ್ ಅವರ ಸಣ್ಣಕಥೆಗಳು” ವಿಷಯದ ಮೇಲೆ ಶ್ರೀದೇವಿ ಎಸ್
      ಪಾಟೀಲ್ ಎಂಬುವವರು  ಡಾ|| ನಿಜಲಿಂಗಪ್ಪ  ಮಟ್ಟಿಹಾಳರವರಮಾರ್ಗದರ್ಶನದಲ್ಲಿ ಸಂಶೋಧನೆ  ನಡೆಸಿದ್ದು,ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಸಾದರ   ಪಡಿಸಿ ಎಂ.ಫಿಲ್.ಪದವಿ ಪಡೆದಿರುತ್ತಾರೆ.

  2) 25ನೇ ಶತಮಾನದ ಕೊನೆಯ 25 ವರ್ಷಗಳ   ಕಥನ ಸಾಹಿತ್ಯದಲ್ಲಿ ಯಜಮಾನ್ಯ ಮತ್ತು ಸಾಂಸ್ಕøತಿಯ ಅನನ್ಯತೆಯ ನೆಲೆಗಳು ಎಂಬ ಮಹಾಪ್ರಬಂಧದಲ್ಲಿ ಡಾ|| ಸಬೀಹಾರವರ
ಮಾರ್ಗದರ್ಶನದಲ್ಲಿ ಸುಜಾತಾ. ಕೆ. ಎಂಬ ಸಂಶೋದಕಿಯು ಬಾನು ಮುಷ್ತಾಕ್ ಅವರ            ಸಾಹಿತ್ಯದಲ್ಲಿ ಯಜಮಾನ್ಯ ಮತ್ತು                                                 ಅನನ್ಯತೆಯ ನೆಲೆಗಳು ಎಂಬ ಭಾಗದ  ತೌಲನಿಕ ಅಧ್ಯಯನ ಮಾಡಿದ್ದು,    ಮಂಗಳೂರು ವಿಶ್ವವಿದ್ಯಾನಿಲಯದಿಂದ  ಪಿ.ಹೆಚ್.ಡಿ. ಪದವಿ ಪಡೆದಿರುತ್ತಾರೆ.

   3) ಮುಂಬಯಿಯ SPಂಖಖಔW  ಸಂಸ್ಥೆಯವರು   ಪ್ರಕಟಿಸಿರುವ    
    ಊಔಖಿ IS ಖಿಊಇ ಒಔಔಓ ಎಂಬ ಗ್ರಂಥದಲ್ಲಿ ನನ್ನ ಬದುಕು-ಬರಹವನ್ನು
                 ದಾಖಲಿಸಿದ್ದಾರೆ.
               
  4)  ಮಂಗಳೂರು ವಿಶ್ವವಿದ್ಯಾನಿಲಯದ 2006ರ  ಪದವಿ ತರಗತಿಯ ಪಠ್ಯ ಪುಸ್ತಕವಾದ
     “ಕೊಡಚಾದ್ರಿ”ಯಲ್ಲಿ ನನ್ನ ಕಥೆ “ನಮ್ಮೊಳಗಿನ ಜರೀನಾ” ಸೇರ್ಪಡೆಯಾಗಿದೆ.

  5) “ಒಮ್ಮೆ ಹೆಣ್ಣಾಗು ಪ್ರಭುವೆ” ಕಥೆಯು  ಗುಲ್ಬರ್ಗಾ ವಿಶ್ವ ವಿದ್ಯಾಲಯದ ಬಿ.ಎ.
   ಪ್ರಥಮ ವರ್ಷದ ಕನ್ನಡ ಸಾಮಾನ್ಯ ಪಠ್ಯಪುಸ್ತಕ “ಕಥಾಸಂಗಮ”ದಲ್ಲಿ ಮತ್ತು      
    ತುಮಕೂರು ವಿಶ್ವವಿದ್ಯಾಲಯಗಳ ಪದವಿ ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿದೆ.
 
    6)  ಬೆಂಗಳೂರು ವಿಶ್ವವಿದ್ಯಾಲದ ಪದವಿ ಪಠ್ಯಪುಸ್ತಕ ಸಾಹಿತ್ಯ -ಸಲ್ಲಾಪ-2ರಲ್ಲಿ
      ದೇವರು ಮತ್ತು ಅಪಘಾತ ಕಥೆ  ಸೇರ್ಪಡೆಯಾಗಿದೆ .

                       ಸಾಹಿತ್ಯಸೇವೆ (ಸಂಘ-ಸಂಸ್ಥೆಗಳಲ್ಲಿ)
     
  :   1)1997ರಿಂದ98ರವರೆಗೆಕರ್ನಾಟಕ  ಸಾಹಿತ್ಯ-ಅಕಾಡೆಮಿಯ ಸದಸ್ಯೆಯಾಗಿ
                               
     2) ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ  ಸಮಿತಿಯ ಸದಸ್ಯೆಯಾಗಿ
        3) ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ
                   ಸಮಿತಿಯ ಕಾರ್ಯಕಾರಿ ಸಮಿತಿಯ                                
ಸದಸ್ಯೆಯಾಗಿ

         4) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ                                  
                     ಸಮಿತಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿರುತ್ತೇನೆ

                      5) ಹಾಸನ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ                                                                                                                                                                                                                                                                                      
            ಅಧ್ಯಕ್ಷೆಯಾಗಿ 2008ನೇ ಇಸವಿಯಲ್ಲಿ
                         ಆಯ್ಕೆಯಾಗಿರುತ್ತೇನೆ.
                                                                       
                  6) ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಿಂದ              
       ನನ್ನ ಬದುಕು-ಸಾಧನೆಯ ಬಗ್ಗೆ
              ಸಾಕ್ಷ್ಯಚಿತ್ರವೊಂದು ಚಿತ್ರೀಕರಣವಾಗಿದೆ.

7) 2-11-12ರಿಂದ 4-11-12ರವರೆಗೆ ದೆಹಲಿಯ
                         ಇಂಡಿಯಾ ಹ್ಯಾಬಿಟಾಟ್ ಸೆಂಟರಿನಲ್ಲಿ ನಡೆದ  
                         ಸಮನ್ವಯ ಗ್ರೂಪಿನ ಭಾರತೀಯ ಭಾಷಾ
                         ಉತ್ಸವ ದಲ್ಲಿ ಭಾಗವಹಿಸಿರುತ್ತೇನೆ.

               8) ದೂರದರ್ಶನ ಚಂದನದಲ್ಲಿ ನನ್ನ ಕೃತಿಗಳ              
                  ಹಿನ್ನೆಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮ
                        ಪ್ರಸಾರಗೊಂಡಿದೆ.

9) 07/12/12ರಿಂದ 9/12/12ರವರೆಗೆ ನಡೆದ ಬೆಂಗಳೂರು ಲಿಟರೆರಿ ಫೆಸ್ಟಿವಲ್‍ನಲ್ಲಿ ಸಂವಾದ
                        ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ.
   
                       
               
   

ದಿನಾಂಕ: 11/12/2015                                (ಬಾನು ಮುಷ್ತಾಕ್)
ಸ್ಥಳ : ಹಾಸನ.                                         ವಕೀಲರು

Sunday 10 May 2015

ವಾಚನಾಭಿರುಚಿ ಕಮ್ಮಟ

                                       ಅತ್ಯಂತ ವೇಗದ ಬದುಕಿನ ಒತ್ತಡಕ್ಕೆ ಅನಗತ್ಯವಾಗಿ ಸಿಲುಕಿ ‘ನಮಗೆ ಟೈಮ್ ಇಲ್ಲಾ’ ಎಂಬ ಮಂತ್ರವನ್ನು ಬಾಯಿಪಾಠ ಮಾಡಿಕೊಂಡು ಎಲ್ಲೆಂದರಲ್ಲಿ ಢಿಕ್ಕಿ ಹೊಡೆಯುತ್ತಿರುವ ನಮ್ಮ ಹುಚ್ಚು ಆವೇಗಕ್ಕೆ ಎಲ್ಲವನ್ನೂ ನಾಶ ಮಾಡುವ ಶಕ್ತಿ ಇದೆ ಅಂತ ನನಗನಿಸಿದ್ದು ಇತ್ತೀಚೆಗೆ ಹೊಸನಗರದಲ್ಲಿ ವಾಚನಾಭಿರುಚಿ ಕಮ್ಮಟದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ . ಶಿವಮೊಗ್ಗದ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನನಗೆ ಅನೇಕ ಸಾರಿ ಆಹ್ವಾನ ಬಂದರೂ ಕೂಡಾ ಆಗೆಲ್ಲಾ ವಿಚಿತ್ರ ಅಡಚಣೆಗಳು ಅಡ್ಡಿ ಬರುತ್ತಿದ್ದು , ಅಲ್ಲಿಗೆ ಹೋಗಲಾಗುತ್ತಿರಲಿಲ್ಲ .  ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಂಜುನಾಥ್ ಮತ್ತು ಕಲೀಮುಲ್ಲಾ ರವರು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯೋಜಿತವಾದ ಮೇಲ್ಕಂಡ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದಾಗ ನನಗೆ ಯಾವ ಅಡಚಣೆಯೂ ಇರಲಿಲ್ಲ . ನಾನೇ ಯಾವುದಾದರೂ ಕೃತಕ ಅಡಚಣೆಯನ್ನು ಸೃಷ್ಟಿಸಿಕೊಳ್ಳಬೇಕಿತ್ತು . ಆದರೆ ಹಾಗೆ ಮಾಡಲು ಮನಸಾಗಲಿಲ್ಲ . ಒಳ್ಳೆಯದಾಯಿತು ; ಇಲ್ಲವಾದಲ್ಲಿ ಅತ್ಯಂತ ಪ್ರಶಾಂತ ಮತ್ತು ನೆಮ್ಮದಿಯ ಪರಿಸರದ ನಡುವೆ ಸರಳವಾಗಿ ನಡೆದ ವಿಭಿನ್ನ ಕಾರ್ಯಕ್ರಮವನ್ನು ಆಸ್ವಾದಿಸುವ ಅವಕಾಶ ನಾನು ಹುಡುಕಿ ಕೊಂಡು ಹೋದರೂ ನನಗೆ ಸಿಗುತ್ತಿರಲಿಲ್ಲ .
             ಆರಂಭದಲ್ಲಿ  ಶಿವಮೊಗ್ಗ ನಗರದಲ್ಲಿಯೇ ಅಂತ ನಾನು ತಿಳಿದಿದ್ದ ಕಾರ್ಯಕ್ರಮವು ಹೊಸನಗರದಲ್ಲಿ ನಡೆಯುತ್ತಿದೆ ಎಂದು ನನಗೆ ತಿಳಿದು ಬಂದಿದ್ದು ಕೆಲವು ದಿನಗಳ ನಂತರ ಕಲೀಮುಲ್ಲಾ ಬಹಳ ನಯ ನಾಜೂಕಿನಿಂದ ಸದರಿ ಕಾರ್ಯಕ್ರಮವು ಹೊಸನಗರದಲ್ಲಿ ನಡೆಯುತ್ತಿದೆ ಎಂದು ಹೇಳಿದಾಗ . ‘ಅದೆಲ್ಲಿದೆ ?’ ಎಂದು ಕೇಳಿದೆ., ‘ಶಿವಮೊಗ್ಗಕ್ಕೆ ಸಮೀಪ . . . ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ತಗಲುತ್ತೆ’ ಎಂದು ಹೇಳಿ ಮತ್ತೆ ಮುಂದುವರೆಸಿ ‘ಹಾಲಿ ಸುದ್ದಿಯಲ್ಲಿದೆಯಲ್ಲಾ ರಾಮಚಂದ್ರಪುರ ಮಠ  . . . ಅದೇ ರಾಘವೇಂದ್ರ ಸ್ವಾಮಿಯವರ ಮಠ . . . ಅದರ ಸಮೀಪ. ನಿಮಗೆ ಲ್ಯಾಂಡ್ ಮಾರ್ಕ್ ಹೇಳಿದೆ ಅಷ್ಟೇ ’ ಎಂದು ಮಗುಮ್ಮಾಗಿ ತಿಳಿಸಿದಾಗ ನಾನು ಬಹಳ ಸರಳವಾಗಿ ಅವರ ಮಾತನ್ನು ನಂಬಿದೆ.  ಆ ನಂತರ ಆ ಬಗ್ಗೆ  ಸುದ್ದಿಯೂ ಇಲ್ಲಾ ಮತ್ತು ಆಹ್ವಾನ ಪತ್ರಿಕೆಯೂ ಇಲ್ಲಾ . ಏಪ್ರಿಲ್ 26 ಎಂದು ನಾನು ಡೈರಿಯಲ್ಲಿ ಗುರುತು ಹಾಕಿದ ನೆನಪು . ಹೀಗಾಗಿ ನಾನು ಆತಂಕ ಮತ್ತು ಸಂತೋಷದ ನಿರೀಕ್ಷೆಯಲ್ಲಿ (ಸಂತೋಷ ಏಕೆಂದರೆ ಕಾರ್ಯಕ್ರಮ ರದ್ದಾಗಿದ್ದಲ್ಲಿ ನನ್ನ ಪಾಡಿಗೆ ನಾನು ಇರಬಹುದಲ್ಲಾ ಅಂತ ಅಂದರೆ ಕಾರ್ಯಕ್ರಮ ಪೂರ್ವ ವೇದನೆಗಳಿಂದ ಬಿಡುಗಡೆ ಪಡೆಯುವ ಖುಷಿ)ನಾನೇ ಖುದ್ದು ಫೋನ್ ಮಾಡಿ ‘ ಕಾರ್ಯಕ್ರಮ ಏನಾದರೂ ಕ್ಯಾನ್ಸಲ್ ಆಯಿತಾ ?’ಅಂತ ವಿಚಾರಿಸಿದರೆ , ನನ್ನ ಉತ್ಸಾಹವನ್ನು ಚಿವುಟಿ ಹಾಕಿದ ಕಲೀಮುಲ್ಲಾ ‘ಇಲ್ಲಾ. . .ಇಲ್ಲಾ  . . . ಕಾರ್ಯಕ್ರಮ ಖಂಡಿತವಾಗಿಯು ಇದೆ. ಈವೊತ್ತೇ ನಾನು ನಿಮಗೆ ಆಹ್ವಾನ ಪತ್ರಿಕೆಯನ್ನು ವಾಟ್ಸ್‍ಅಪ್‍ನಲ್ಲಿ ಕಳಿಸುತ್ತೇನೆ  ’ಎಂದು ಭರವಸೆಯನ್ನು ನೀಡಿ,
     ಇಷ್ಟೆಲ್ಲಾ ನಡೆಯುವ ವೇಳೆಗೆ ಹಿಂದಿನ ದಿನ ಹಾಜರಾದ ನಮ್ಮ ಕಾರಿನ ಚಾಲಕ ಸುಮಾರು ಹನ್ನರಡು ವರ್ಷ ವಯಸ್ಸಿನ ತನ್ನ ಮಗನ ಕೈ ಹಿಡಿದುಕೊಂಡು ಬಂದ. ಅವನು ಬಂದ ವರಸೆಯಲ್ಲಿಯೇ ನನಗೆ ‘ಏನೋ ದಾಲ್ ಮೇ ಕಾಲಾ ’ಇದೆ ಅಂತ ಅನಿಸತೊಡಗಿತು . ಈ ಕಾರ್ಯಕ್ರಮದ ಬಗ್ಗೆ ನಾನು ಅವನಿಗೆ ಸುಮಾರು ಒಂದು ತಿಂಗಳಿನಿಂದ ಪ್ರತಿ ಎರಡು ದಿನಕ್ಕೊಮ್ಮೆ ನೆನಪಿಸುತ್ತಿದ್ದೆ ಹಾಗೂ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳ ಬಾರದೆಂದು ತಾಕೀದು ಮಾಡುತ್ತಿದ್ದೆ. ಅವನು ಬಂದು ವಿಪರೀತ ವಿನಯವನ್ನು ಪ್ರದರ್ಶಿಸುತ್ತಾ  ತನ್ನ ಪತ್ನಿಯ ಸಂಬಂಧಿಗಳ ಮದುವೆ ಧಿಡೀರ್ ಅಂತಾ ನಿಗದಿಯಾಗಿದೆ. ಸಕುಟುಂಬ ಸಪರಿವಾರ ಸಮೇತ ತಾನು ಹೋಗದೆ ಇದ್ದಲ್ಲಿ , ತನ್ನ ಮರ್ಯಾದೆ ಹೋಗುವುದಂತೂ ಗ್ಯಾರಂಟಿ ಆದರೆ ಅದರ ಜೊತೆಯಲ್ಲಿ ಹೆಂಡತಿ ಕೂಡಾ ಶಾಶ್ವತವಾಗಿ ತನ್ನನ್ನು ತೊರೆದು ಹೋಗಬಹುದೆಂಬ ಭೀತಿ ತನಗಿದೆಯೆಂದು ಮನ ಮಿಡಿಯುವಂತೆ ಹೇಳಿದಾಗ ನನಗೂ ಒಳಗೊಳಗೆ ಭಯ ಆರಂಭವಾಯಿತು . ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಒಂದು ಮನೆಯನ್ನು ಮುರಿಯುವ ಸಾಧ್ಯತೆ ಇರುವುದನ್ನು ಮನಗೊಂಡು ,ನನ್ನ ಬಗ್ಗೆ ನನಗೇ ತಿರಸ್ಕಾರ ಶುರು ಆಯಿತು . ವಕೀಲಳಾಗಿಯೇ ಸಾಕಷ್ಟು ವಿಚ್ಛೇದನಗಳ ಮಿಥ್ಯಾರೋಪಗಳಿಂದ ಬಳಲಿ ಹೋಗಿರುವ ನಾನು ಮತ್ತೆ ರಿಸ್ಕ್ ತೆಗೆದುಕೊಳ್ಳುವುದು ಸೂಕ್ತವಲ್ಲವೆಂದು ತೀರ್ಮಾನ ಮಾಡಿದೆ.ಮತ್ತೆ ಸಾಕ್ಷಿ ನುಡಿಯುವ ಸಲುವಾಗಿ ತನ್ನ ಮೈನರ್ ಮಗನನ್ನೂ ಕೂಡಾ ಜೊತೆಗೆ ಕರೆ ತಂದಿದ್ದಾನೆ.  ಹೀಗಾಗಿ ನಾನೇನೂ ಮಾತನಾಡದೆ , ಅವನನ್ನೇ ನೋಡುತ್ತಾ ಆಲೋಚನೆ ಮಾಡುವ ಸಲುವಾಗಿ ಒಂದು ಸಾರಿ ಕತ್ತನ್ನು ಬಲಗಡೆ ತಿರುಗಿಸಿದ್ದೇ ಮಹಾ ಸಂಕೇತ ಅಂತ ಪರಿಭಾವಿಸಿಕೊಂಡು  , ‘ನಾನು ಹೇಳಲಿಲ್ಲವಾ ? ದೀದೀ ( ಅಂದರೆ ನಾನು) ಅಂತಾ ಕೆಟ್ಟ ಹೆಂಗಸು ಅಲ್ಲಾ ಅಂತಾ . .  ನಿನ್ನ ತಾಯಿ ನಂಬುವುದೇ ಇಲ್ಲವಲ್ಲಾ ’ಎಂದು ಹೇಳುತ್ತಾ  ಕಣ್ಣೊರೆಸಿಕೊಂಡು ಮಗನ ಕೈಹಿಡಿದು ನಿಧಾನವಾಗಿ ನಡೆದು ಹೋದ. . . . . . ತನ್ನ ರಜೆಯನ್ನು ತಾನೇ ಸ್ಯಾಂಕ್ಷನ್ ಮಾಡಿಕೊಂಡ ಗೆಲುವಿನಲ್ಲಿ . ನನಗೆ ಮತ್ತೊಮ್ಮೆ ಕೆಟ್ಟ ಸಂತೋಷವಾಯಿತು .ಇದೀಗ ನನಗೆ ನಿಜವಾಗಿಯೂ ಸದವಕಾಶ . ನೆನಪಿರಲಿ ಅದು ನೆಪವಲ್ಲ .ಇಟ್ ಈಸ್‍ಎ ವ್ಯಾಲಿಡ್ ರೀಝನ್’ ಎಂದು ನನಗೆ ನಾನೇ ಸಮಾದಾನ ಪಡಿಸಿಕೊಂಡು ಕಲೀಮುಲ್ಲಾಗೆ ಮತ್ತು ಮಂಜುನಾಥ್‍ಗೆ ಫೋನ್ ಮಾಡಿ ನನ್ನ ತೊಂದರೆಯನ್ನು ಮನ ಮಿಡಿಯುವಂತೆ ಸಾದರ ಪಡಿಸಿ ಆ ಕಾರ್ಯಕ್ರಮದಿಂದ ಕೈ ತೊಳೆದುಕೊಳ್ಳೋಣವೆಂದು ನಿರ್ಧರಿಸಿದೆ.
      ಬದಲಿಗೆ ಫೋನ್ ಮಾಡಿದ್ದು ಬಸವರಾಜ್ ಎಂಬ ನಮ್ಮ ಆಪತ್ಬಾಂಧವನಿಗೆ . ಹೀಗೆ ಹೀಗೆ ಆಗಿದೆ. ‘ಶಿವಮೊಗ್ಗಕ್ಕೆ ಹೋಗಲು ಒಂದುಟ್ರೇನ್ ಟಿಕೆಟ್ ಬುಕ್ ಮಾಡಿಸಿ ಕೊಡಪ್ಪಾ ’ ಎಂದು ಕೇಳಿದರೆ ಆತ ನಕ್ಕು ಬಿಟ್ಟ. ಮತ್ತು ಹಾಸನದಿಂದ ಎಲ್ಲಿಗೂ ಟ್ರೇನ್ ಅನುಕೂಲತೆ ಇಲ್ಲದಿರುವ ವಿಷಯ ನನಗೆ ಸ್ವತಃ ಅನೇಕ ವರ್ಷಗಳಿಂದ ಗೊತ್ತಿದ್ದರೂ ಜನ ಸಾಮಾನ್ಯರ ತೊಂದರೆಗೆ ನಾನು ಸ್ಪಂದಿಸದೆ , ಅಟ್ ಲೀಸ್ಟ್ ಒಂದು ಲೇಖನವನ್ನಾದರೂ ಈ ಬಗ್ಗೆ ಬರೆಯದೆ,ಅತ್ಯಂತ ನಿರ್ಲಕ್ಷ್ಯಪೂರ್ವಕವಾಗಿ  ನಡೆದುಕೊಂಡಿರುವ ಬಗ್ಗೆ ಎತ್ತಿ ಆಡಿದ. ನಾನೇನೂ ಶಾಸಕಿಯಾಗಿರಲಿಲ್ಲ ಅಥವಾ ಪಾರ್ಲಿಮೆಂಟ್ ಸದಸ್ಯೆಯೂ ಆಗಿರಲಿಲ್ಲ . ಆದರೂ ಅವರೆಲ್ಲರ ಪರವಾಗಿ ನಾನು ಜವಾಬ್ದಾರಿಯನ್ನು ಹೊತ್ತುಕೊಂಡು ಸ್ವಲ್ಪ ಸಾಮಾಜಿಕ ಮುಜುಗರ ಮತ್ತು ನಾಚಿಕೆಯನ್ನು ತಂದುಕೊಂಡುಅದನ್ನು ವ್ಯಕ್ತ ಪಡಿಸಿದೆ. ಆದರೆ ಅವನು ನಿರ್ದಯವಾಗಿ ನಾನು ಕಾರಿನಲ್ಲಿ ಸುತ್ತಾಡುತ್ತಾ ಬಡವರನ್ನು ಮರೆತಿದ್ದು , ಈಗ ತೊಂದರೆಗೆ ಸಿಲುಕಿದ್ದರಿಂದ ಮಾತ್ರ ಅವನನ್ನು ನೆನಪಿಸಿಕೊಂಡಿದ್ದು ಕೂಡಾ ಒಳ್ಳೆಯ ಬೆಳವಣಿಗೆಯಲ್ಲಾ ಎಂದು ನನಗೆ ಮನದಟ್ಟು ಮಾಡಿದ. ಹೀಗೆ ಆರೋಪಗಳು ನನಗೆ ಸುತ್ತಿಕೊಳ್ಳುತ್ತಿರುವುದನ್ನು  ಕಂಡು ನನಗೆ ಗಾಬರಿಯಾಗಿ ‘ಹೋಗಲಿ ನನ್ನ ಕಾರಿಗೆ ಯಾರಾದರೂ ಬದಲಿ ಡ್ರೈವರ್ ಆಗಿ ಒಂದು ದಿನ ಮಾತ್ರ ಕೆಲಸಕ್ಕೆ ಬರಲು ಸಾಧ್ಯವೇ ’ ಎಂಬ ನನ್ನ ಪ್ರಶ್ನೆಗೆ ಒಲ್ಲದ ಮನಸ್ಸಿನಿಂದ ‘ಆಗಲಿ….  ನೋಡ್ತೀನಿ ’ ಎಂದಷ್ಟೇ ಹೇಳಿದ . ಆದರೆ ನನಗೆ ಒಳ ಮನಸ್ಸಿನಲ್ಲೇ ಜಾÐನೋದಯವಾದಂತೆಯೇ ಅವನು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ .
               ಆದರೂ ಮರಳಿ ಪ್ರಯತ್ನ ಮಾಡು ಎಂಬಂತೆ ನನ್ನ ಫೋನಿನಲ್ಲದ್ದ ಹಲವಾರು ಚಾಲಕರ ನಂಬರಿಗೆ ಫೋನ್ ಮಾಡತೊಡಗಿದೆ. ಎಲ್ಲರೂ ಒಂದಲ್ಲ ಒಂದು ಚಾಲನೆಯಲ್ಲಿ ಸಕ್ರಿಯವಾಗಿ ತೊಡಗಿರುವರು ಎಂಬ ಉತ್ತರ ದೊರಕಿದ ನಂತರ ನನಗೆ ನನ್ನ ವೃತ್ತಿಯ ಬಗ್ಗೆ ಅಪನಂಬಿಕೆ ಮೂಡತೊಡಗಿತು . ನಾನಾದರೋ ಚಾಲಕ ವೃತ್ತಿಯ ಬಗ್ಗೆ ಯಾಕೆ ಒಂದು ಕೈ ನೋಡಬಾರದು ಎಂದು ಮೂಡಿದ ಆಲೋಚನೆಯನ್ನು  ಮೂಲದಲ್ಲಿಯೇ ಹೊಸಕಿ ಹಾಕಿ ಹದಿನೈದನೇ ಸಂಖ್ಯೆಯ ನಂಬರಿಗೆ ಫೋನ್ ಮಾಡಿದಾಗ ಆನಂದ ಬಾಷ್ಪ ಸುರಿಸುವುದೊಂದೇ ಬಾಕಿ . ‘ಬೆಳಿಗ್ಗೆ ಏಳು ಗಂಟೆಗೆ ಬರ್ತೀನಿ ಮೇಡಮ್’ ಎಂದು ಹೇಳಿದವ ಅದರಂತೆ ನಡೆದುಕೊಂಡ. ನಮ್ಮ ಪಯಣ ಶಿವಮೊಗ್ಗದತ್ತ ಸಾಗಿತು . ಬೆಳಗಿನ ಸುಖ ನಿದ್ರೆಯನ್ನು ತೊರೆದು ಬೆಳ್ಳಂಬೆಳಗ್ಗೆ ಹೊರಟ ನನಗೆ ಅಷ್ಟೇನೂ ಹಿತವೆನಿಸಲಿಲದಲ. ಹೀಗಾಗಿ ನಾನು ಹಿಂದಿನ ಸೀಟಿನಲ್ಲಿ ಮುದುಡಿಕೊಂಡು ಮಲಗಿ ಬಿಟ್ಟೆ. ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯವರಾದ ಮಧುಸೂಧನ್ ತಮ್ಮ ಕಾರಿನಲ್ಲಿ ವಸುಧೇಂದ್ರರವರ ಜೊತೆಯಲ್ಲಿ ಕಾಯುತ್ತಿದ್ದರು . ನಮ್ಮ ಕಾರು ಹೈವೇಗೆ ಬಂದ ತಕ್ಷಣ ಹೊಸನUರ 80 ಕಿ. ಮೀ ಎಂಬ ಮೈಲಿಗಲ್ಲನ್ನು ಕಂಡ ತಕ್ಷಣ ,ನನಗೆ ಗಾಬರಿಯಾಯಿತು. ಆದರೆ , ವಸುಧೇಂದ್ರರೊಡನೆ ನಡೆದ ಮಾತುಕಥೆಯಲ್ಲಿ ಮತ್ತು ಮಧುಸೂದನರವರ ಸಂಯೋಜಿತ ಚಾಲನೆಯಲ್ಲಿ ನಮಗೆ ದೂರ ಕ್ರಮಿಸಿದ್ದೇ ತಿಳಿಯಲಿಲ್ಲ .
     ನಡು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರಾಮಚಂದ್ರಾಪುರದ ಮಠದ ಗೋಶಾಲೆಯನ್ನು ದಾಟಿ ದಿಬ್ಬ ಹತ್ತಿ ಏರಿ ಇಳಿಯುತ್ತಾ ಕೊನೆಗೆ ಮುಟ್ಟಿದ್ದು ಗಣೇಶ ಮೂರ್ತಿಯವರ ತೋಟವನ್ನು . ಮಧುಸೂದನ್‍ರವರು ತೋಟದಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದಾಗಲೇ ಇದೆಂಥ ವ್ಯವಸ್ಥೆ ಎಂದು ಕುತೂಹಲ ಗರಿಗೆದರಿತ್ತು. ತೋಟದೊಳಗೆ ಕಾಲಿಡುತ್ತಿದ್ದಂತೆ ಹಸನ್ಮುಖಿಯರಾದ (ಕೃತಕ ನಗೆಯ ಗಗನಸಖಿಯರಂತೆ ಅಲ್ಲ ) ಆಯುರ್ವೇದ ಕಾಲೇಜಿನ ವಿದ್ಯಾರ್ಥಿ / ವಿದ್ಯಾರ್ಥಿನಿಯರ ತಂಡ ಇನ್ನಷ್ಟು ಮತ್ತಷ್ಟು ತಿನ್ನಿ ಎಂದು ಒತ್ತಾಯದಿಂದ ನೀಡಿದ ಅದೇ ತೋಟದ ಕಲ್ಲಂಗಡಿ ಹಣ್ಣನ್ನು ತಿಂದು ಮಜ್ಜಿಗೆಯನ್ನು ಕುಡಿದು ವೇದಿಕೆಯತ್ತ ನಡೆದೆವು. ವಿಶಾಲವಾಗಿ ಹರಡಿದ್ದ ಬಸರಿ ಮರದ ಕೆಳಗೆ ಅವರೆಲ್ಲ ಸೇರಿದ್ದರು . ಅದರ ಬಲಿಷ್ಠ ಕೊಂಬೆಗಳು ಚಪ್ಪರದಂತೆ ಚಾಚಿದ್ದು ಎಲೆಗಳು ವಿರಳವಾಗಿದ್ದ ಕಡೆಗಳಲ್ಲಿ ಬಿಸಿಲು ಎದೆ ಸೆಟೆಸಿಕೊಂಡು ನುಸುಳಿ ಉದ್ಧಟತನವನ್ನು ಮೆರೆಯುತ್ತಿತ್ತು. ಉಳಿದಂತೆ ಆ ಮರ ಕೂಡಾ ಅಪಾರ ಸಂತೋಷದಿಂದ ಆಗಾಗ್ಗೆ ತಲೆಯಾಡಿಸುತ್ತಾ ಒಮ್ಮೊಮ್ಮೆ ಮುಗುಳು ನಗೆಯನ್ನು ಬೀರುತ್ತಾ ಮತ್ತೊಮ್ಮೆ ಗಜ ಗಾಂಭೀರ್ಯದಿಂದ ಸುತ್ತಲೂ ಅವಲೋಕಿಸುತ್ತಿತ್ತು. ನಮ್ಮನ್ನು ನೋಡಿ ಒಂದು ಕ್ಷಣ ತಡೆದು , ‘ಏ. . . ಯಾರಿದ್ದೀರಿ ಅಲ್ಲಿ ಅವರಿಗೊಂದು ಕುರ್ಚಿ ಹಾಕ್ರಪ್ಪಾ ’ ಎಂದಿತು . ಸುಮಾರು ನೂರಾಐವತ್ತು ಜನರಿರ ಬಹುದಾ ? ನಾನು ಸುತ್ತಲೂ ಕಣ್ಣಾಡಿಸಿ ಸರಸರನೆ ಲೆಕ್ಕ ಹಾಕಿದೆ. ನನಗೆ ಈ ರೀತಿಯ ಲೆಕ್ಕಾಚಾರವೇ ಅಭ್ಯಾಸವಾಗಿ ಬಿಟ್ಟಿದೆಯಲ್ಲಾ . . .ಛೇ  . . ಎಂತಾ ಹಾಳು ಮನಃಸ್ಥಿತಿ ಎಂದು ಹಳಿದುಕೊಂಡೆ. ಅಲ್ಲಿದ್ದವರೆಲ್ಲಾ ಸಾಹಿತ್ಯಾಸಕ್ತರಾಗಿದ್ದರು .ವಿದ್ಯಾವಂತರು , ಸಂಗೀತಗಾರರು, ಸಾಹಿತಿಗಳು ವಿದ್ಯಾರ್ಥಿಗಳು ಹಾಗೂ ಸಹೃದಯರ ಗುಂಪು ಅಲ್ಲಿ ನೆರೆದಿತ್ತು .ಅವರೆಲ್ಲಾ ಎಲ್ಲ ಹಮ್ಮುಬಿಮ್ಮುಗಳನ್ನು ತೊರೆದು ಅಲ್ಲಿ ಹಾಸಿದ್ದ ಜಮಖಾನೆಯ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಆರಾಮವಾಗಿ ಕುಳಿತಿದ್ದರು . ಅಲ್ಲಿ ಕುಳಿತವರೊಡನೆ ನಾನು ಕೂಡಾ ಅವರಷ್ಟೇ ಆರಾಮವಾಗಿ ಕುಳಿತು ಮನದ ಗಂಟುಗಳನ್ನು ಸಡಲಿಸಿಕೊಂಡು ಹೊರೆಯನ್ನು ಕಿತ್ತೆಸೆಯೋಣವೆಂದೆನಿಸಿದರೂ ದೈಹಿಕ ಅನಾನುಕೂಲತೆಯ ದೆಸೆಯಿಂದ ಕುರ್ಚಿಯನ್ನೇ ಆಶ್ರಯಿಸ ಬೇಕಿತ್ತು . ಅಲ್ಲಿಗೆ ಬಂದ ತಕ್ಷಣ ನನ್ನ ಅನಾನುಕೂಲತೆಯನ್ನು ಗಮನಿಸಿ ಕುರ್ಚಿ ಹಾಕಲು ಆದೇಶ ಮಾಡಿದ ಮರದತ್ತ ತಿರುಗಿ ‘ಥ್ಯಾಂಕ್ಸ್ ’ಎಂದು ಒಂದು ಕಿರು ನಗೆಯನ್ನು ಬೀರೋಣವೆಂದು ಅದರತ್ತ ತಿರುಗಿದರೆ , ಎಲ್ಲೆಲ್ಲೂ ಆ ಮರವೇ ರಾರಾಜಿಸುತ್ತಿತ್ತು. ಮೇಲೆ ಕೊಂಬೆ ಕೊಂಬೆಗಳನ್ನು ಹರಡಿ ಶಿಸ್ತಿನ ಸಿಪಾಯಿಯಂತೆ ನಿಂತುಕೊಂಡಿತ್ತು .ಅಗೋ  ಅಲ್ಲಿ ನೋಡಿದರೆ  ಅಗಲವಾದ ಬಾಳೆ ಗಿಡದ ಕಾಂಡದ ಮೇಲೆ ಚಿಕ್ಕ ಕಾಂಡ ಅದರ ಮೇಲೆ ಮತ್ತೊಂದು ಚಿಕ್ಕ ಕಾಂಡ ಅದರ ಮೇಲೆ ಹಿತ್ತಾಳೆಯ ಪಾತ್ರೆಯಲ್ಲೊಂದು ದೀಪ ಬೆಳಗುತ್ತಿತ್ತು. ವೇದಿಕೆಯ ಬಲಭಾಗದಲ್ಲೊಂದು ಪೋಡಿಯಮ್ . ಬಾಳೆ ಕಂದುಗಳನ್ನು ಅರೆ ವೃತ್ತಾಕಾರದಲ್ಲಿ ಜೋಡಿಸಿ ನಾರಿನಿಂದ ಬಿಗಿ ಮಾಡಲಾಗಿತ್ತು . ಎರಡು ಎಳೆಯ ಈ ಕಂದುಗಳ ಮೇಲೆ ಕಲಾತ್ಮಕವಾಗಿ ಕಡ್ಡಿಗಳನ್ನು ಜೋಡಿಸಿ ಮೈಕ್, ಮೊದಲಾದ ವಸ್ತುಗಳನ್ನ ಇಡಲು ಸ್ಥಳಾವಕಾಶವನ್ನು ಮಾಡಲಾಗಿತ್ತು . ಡಾ. ಹಾಲಮ್ಮ ಲಂಕೇಶರ ಅವ್ವ-1 ಮತ್ತು ಅವ್ವ-2ರ ವಿಶ್ಲೇಷಣೆಯನ್ನು ತಮ್ಮದೇ ಲಹರಿಯಲ್ಲಿ ವಿಸ್ತøತವಾಗಿ ಮಾಡುತ್ತಿದ್ದರು .ಎಲ್ಲರೂ ಎಷ್ಟು ಆರಾಮವಾಗಿ ಕುಳಿತು ಕೇಳಿ ಸಂವಾದದಲ್ಲಿ ಭಾಗವಹಿಸುತ್ತಿದ್ದರೆಂದರೆ ನನ್ನ ಗ್ರಹಿಕೆಗೆ ನಿಲುಕದಷ್ಟು ಅವರೆಲ್ಲಾ ತಂಪಾಗಿದ್ದರು . ಬಹುಶಃ ನನ್ನ ಮರು ಪ್ರಯಾಣದ ಕುರಿತು ಆಗಾಗ್ಗೆ ಒಂದಿಷ್ಟು ಕಸಿವಿಸಿಯಾಗುತ್ತಿದ್ದುದು ನನಗೆ ಮಾತ್ರವೇನೋ .
           ಮಧ್ಯಾಹ್ನದ ಊಟಕ್ಕೆ ಸಿದ್ಧವಾಗಿದ್ದ ಅಡಿಗೆ ಸಹಜವಾಗಿಯೇ ಅಲ್ಲಿನ ಸಂಸ್ಕøತಿಯನ್ನು ಬಿಂಬಿಸುತ್ತಿತ್ತು .ಗಣೇಶ ಮೂರ್ತಿ ಮತ್ತು ಅವರ ಕುಟುಂಬವು ಎಲ್ಲರನ್ನು ಉಪಚರಿಸುತ್ತಾ ಮದುವೆ ಮನೆಯ ಗಂಡಿನವರಿಗಿಂತಲೂ ಹೆಚ್ಚಾಗಿ ಪ್ರತಿಯೊಬ್ಬರನ್ನೂ ಆದರಿಸುತ್ತಾ ಸ್ವತಃ ಹಸಿದ ಹೊಟ್ಟೆಯಲ್ಲಿದ್ದರೂ ಸಂತೃಪ್ತಿಯನ್ನು ಅನುಭವಿಸುತ್ತಿದ್ರು . ಇದೆಂತಹ ಸಾಹಿತ್ಯಸೇವೆ! ಅಥವಾ ಇದೇ ನಿಜವಾದ ಸಾಹಿತ್ಯಸೇವೆಯೇ. ಕನ್ನಡದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಚರ್ಚೆ ವಿಷಯ ನಿರೂಪಣೆ ಮೊದಲಾದವು ಇದ್ದೇ ಇರುತ್ತವೆ. ಆದರೆ ಅಂತರಂಗದ ಪ್ರೀತಿಯಿಂದ ತೊಡಗಿಸಿಕೊಂಡು ಸಾಹಿತ್ಯದ ಸೊಗಡು ಮತ್ತು ಹೃದಯದ ಭಾಷೆ ಸಂವಾದಿಯಾದಾಗ ಉಂಟಾಗುವ ಪ್ರಭಾವ ಹಾಗು ಪರಿಸರವೇ ಸಂಪೂರ್ಣವಾಗಿ ಭಿನ್ನವಾಗುತ್ತದೆ. ಮತ್ತು ಈ ರೀತಿಯ ಮೇಳೈಕೆ ಉಂಟಾದಾಗ ನಮ್ಮ ಇಬ್ಬಂದಿತನ ಮತ್ತು ಊಸರವಳ್ಳಿತನ ಮಾಯವಾಗುತ್ತದೆ. ಹಾಗಾದಾಗ ಮಾತ್ರ ಅನ್ನದ ಭಾಷೆ, ಚಿನ್ನದ ಭಾಷೆ ಮತ್ತು ಹೃದಯದ ಭಾಷೆ , ಎಂಬ ಛಿದ್ರೀಕರಣ ತೊಲಗಿ ಕನ್ನಡದ ಸಮಗ್ರತೆಯ ಬಗ್ಗೆ ಆಲೋಚಿಸುವ ಮನಸ್ಸುಗಳು ಸೃಷ್ಟಿಯಾಗುತ್ತವೆ. ಮತ್ತು ಇಂತಹದೊಂದು ಧೀ ಶಕ್ತಿ ಬಹುಶಃ ನಮ್ಮ ಗ್ರಾಮಾಂತರ ಭಾಗದಿಂದ ,ತೀರಾ ಕಾಲುದಾರಿಗಳಿರುವ ತೋಟದ ಮನೆಗಳಿಂದ ಮತ್ತು ಜನಪದರ ದೃಡ ಸಂಕಲ್ಪ ದಿಂದ ಮಾತ್ರ ಸಾದ್ಯ ಎಂದು ಆ ಗಳಿಗೆಯಲ್ಲಿ ನನಗೆ ಅನಿಸಿತು.
     ಆ ಸಂದರ್ಭದ ಇನ್ನೊಂದು ಅನಿಸಿಕೆ ಎಂದರೆ  ಸದರಿ ಕಾರ್ಯಕ್ರಮದ ಪ್ರಾಯೋಜಕರಾದ ಗಣೇಶ ಮೂರ್ತಿ ಯವರು ಸುಮಾರು 150ರಿಂದ200 ಮಂದಿ ಸಾಹಿತ್ಯಾಸಕ್ತರನ್ನು  ಎರಡು ದಿನಗಳ ಕಾಲ ತಮ್ಮ ಮನೆಯಲ್ಲಿ  ಆತಿಥ್ಯವನ್ನು ನೀಡುವ ಅಗತ್ಯವೇನಿತ್ತು? ಮದುವೆ ಮುಂಜಿಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಚೆಲ್ಲುವವರು ಒಂದು ಕನ್ನಡದ ಪುಸ್ತಕವನ್ನು ಖರೀದಿಸಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಕನ್ನಡದ ಅಳಿಲು ಸೇವೆಗಾಗಿ ಸಂತೋಷದಿಂದ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಧನ್ಯರಾದ ಗಣೇಶ ಮೂರ್ತಿ ಮತ್ತು ಅವರ ಕುಟುಂಬದವರ ಬಗ್ಗೆ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಆದುದರಿಂದ ನನ್ನ ಅನಿಸಿಕೆಗಳನ್ನು ಕಾಣಿಸುತ್ತಿದ್ದೇನೆ. ನಿಷ್ಕಾಮವಾದ ಇತಹ ಪ್ರೀತಿ ಕನ್ನಡಿಗರಲ್ಲಿ ಮೂಡಿದಾಗ ಮಾತ್ರ ಕನ್ನಡಕ್ಕೆ ಭವಿಷ್ಯವಿದೆ. ಕನ್ನಡದ ಅಭಿಮಾನವೆಂದರೆ ತಮ್ಮ ಸ್ವಂತಹಣವನ್ನು ಖರ್ಚು ಮಾಡಿ ಕನ್ನಡದ ಬಗ್ಗೆ ಸಂಭ್ರಮಿಸುವುದು ಮತ್ತು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸೇರಿಸುವುದು.


ಮೇಣದ ಬತ್ತಿಯ ಬೆಳಕು


ಇದು ಹೀಗೆಯೇ ಆಗುವುದೆಂದು ನನಗೆ ಗೊತ್ತಿತ್ತು
ಕೋಲಾಹಲಗಳು ಸಮೃದ್ಧಿಯ ಸಂಕೇತವಲ್ಲವೆಂದು
ನೀವು ಅಲವತ್ತುಗೊಂಡರೂ ಮುಖವಾಡಗಳು
ಬಣ್ಣ ಕಳಚಿ ಬೀಳಲೇ ಬೇಕಲ್ಲಾ !

ಸುತ್ತು ಬಳಸು ಸಾಕಿನ್ನು ನೇರ
ವಿಷಯಕೆ ಬಾ ಎನ್ನುವಿರಿ
ಎಷ್ಟು ಸಾರಿ ಬರಬೇಕು ?
ನಿರ್ಭಯಾ ನಿರ್ಭಯಾ ಎಂದು
ಕೂಗುತಲಿದೆ ಬಂಧನದ ಹಕ್ಕಿ
ಮೇಣದ ಬತ್ತಿಗಳ ಬೆಳಕ ನಂದಿಸಲು
ಎಷ್ಟು ಹೊತ್ತು?

ಶಕ್ತಿ ಮಿಲ್ಸ್‍ನ ಅವಶೇಷಗಳ ಅಂಚಿನಲಿ
ಅಲೆಮಾರಿ ಜಾನುವಾರುಗಳು ಉರಿಬಿಸಲಿನ
ಬೇಹುಗಾರಿಕೆಗೆ ನಡು ಹಗಲಿನ ಅಮಾವಾಸ್ಯೆ
ಪುಡಿ ರಕ್ಕಸರ ಕಾಲ್ತುಳಿತದಡಿ ಕರಗಿ ಹೋದ
ಜೀವದುಂಬಿದ ಹಸಿ ಮಣ್ಣು

ಶಾಂತಂ ಪಾಪಮ್ ಅನಬೇಡಿ
‘ಅವರಿಗೆ’ ತೀವ್ರ ಅನಾರೋಗ್ಯ
ಪಾಪ! ಅವರಿಗೇ ಗೊತ್ತಿರಲಿಲ್ಲ
ತಾವು ರೋಗದ ಗೂಡೆಂದು
ನೀರಿಲ್ಲದ ಮಾಗಿಯ ಮೋಡವೆಂದು
ಪತನ ಹೊಂದಿದ ಬೂದಿಯಂಕಣವೆಂದು

ಕೂಗಿ ಕೂಗಿ ಹೇಳುತ್ತಿದ್ದಾರವರು
ಅವರ ಎಲ್ಲಾ ಪಾಟ್ರ್ಸಗಳೂ ಶಿಥಿಲ
ಜೀವಚ್ಛವವೆಂದು . . .ನಾನಲ್ಲ
ಅವರೇ ಸರ್ಟಿಫಿಕೇಟ್ ಒದಗಿಸುತ್ತಿದ್ದಾರೆ
ಬೇಟದಾಟದ ಬಿಸಿಲುಗುದುರೆ ಏರಿ
ಬ್ಯಾಂಡು ಬಾಜಾ ಇಲ್ಲದ ಬೀಜಪ್ರಸಾರ

ಗೆಲ್ಲಿನ ತುಂಡು ಒಂದಿಷ್ಟು ಚಿಗುರಿ
ನಿಮಿರಿದರೂ ಬೆರಳ ಮೇಲೆ ಎಣಿಕೆ
ನಿಮ್ಮ ಲೆಕ್ಕಾಚಾರಕ್ಕಿಷ್ಟು ಬೆಂಕಿ ಬೀಳ

ಮೊದಲು ಹೀಗಿರಲಿಲ್ಲಾ
ಜಿಮ್ ಪ್ರೇರಿತ ಒಳ್ಳೆಯ ಆರೋಗ್ಯ
ಹೈ ಸ್ಟೇಟಸ್ ಮುಗುಳುನಗೆಯ ಪ್ರಭೆ
ಎಲ್ಲಾಇತ್ತು ನೋವಿನ ನಿಶಿದ್ಧ ಕಾರ್ಯ ಕೂಡಾ
ನಿಲುವಂಗಿಯಮರೆಯಲಿ ನೆಲ ಕಚ್ಚುತ್ತಿತ್ತು
ನಿಡು ದಾರಿ  ಎಗ್ಗಿಲ್ಲದೆ ನೇವರಿಸುತ್ತಾ ಸಾಗುತ್ತಿತ್ತು.

ಅವರ ಮೇಲೆ ಎಫ್‍ಐಆರ್ ಆಯ್ತಲ್ಲಾ
ಕೂಡಲೇ ಎದೆ ಹಿಡಿದುಕೊಂಡರು
ಪಾಪದ ರುಚಿ ಹತ್ತಿದ್ದ ಬೂದಿ
ಮುಚ್ಚಿದ ಕೆಂಡಗಳು ಮಿನುಗಿದವು
ಮೊದಲೇ ಟೈಗಂಟನ್ನು ಬಿಗಿಯಾಗಿ ಕಟ್ಟಿದ್ದಲ್ಲಿ
ಈ ಗತಿಯಾಗುತ್ತಿರಲಿಲ್ಲ

ಈಗ ಸರ್ಕಾರಿ ಆಸ್ಪತ್ರೆಯ ಹೈಪೈ ವಾರ್ಡಿನ
ಸ್ಪೆಷಲ್ ಹಾಸಿಗೆಯಲಿ ಪವಡಿಸುತಿದಾರೆ
ಎಲ್ಲಾ ಪ್ರಕ್ರಿಯೆಗಳು ಮಲಗುವವರೆಗೂ
ಅವರು ಎದ್ದೇಳಲ್ಲಾ !

ಅಮ್ಮನ ಸೀರೆ


        ಅಮ್ಮ
        ಆಗ ಹೀಚು ಮೊಗ್ಗಾಗಿದ್ದಳಂತೆ
        ಕುಂಟಬಿಲ್ಲೆ ಆಡಿ ಆಗ ತಾನೇ ಮರಳಿದ್ದಳಂತೆ
        ಬೆವರಿನ್ನೂ ಹಣೆಯ ಮೇಲಿಂದೊಣಗಿರಲಿಲ್ಲ
        ಮಂಡಿಯ ಮೇಲಿನ ಗಾಯವಿನ್ನೂ ಮಾಯ್ದಿರಲಿಲ್ಲವಂತೆ

        ಹಣ್ಣಾದ ಹಾಗಲಕಾಯಿ ಬೀಜದ ಉಜ್ವಲ ಕೆಂಪು
        ಬಣ್ಣದ ಸೀರೆಯಲ್ಲಿ ಸುತ್ತಿ,ಮಾವ ಆವಳನೆತ್ತಿಕೊಂಡು
        ನೆಹರು ಕಾಲರಿನ ಗುಲಾಬಿಯಂತೆ ಅಪ್ಪನಿಗೆ ಅಂಟಿಸಿದಾಗ
        ಅವಳಿಗಿಂತ ಸೀರೆಯೇ ಭಾರವಾಗಿತ್ತಂತೆ

        ಗುಲ್‍ಮೊಹರಿನ ಕಿಡಿಗಳು ಅರಳಿದಾಗ ವಸಂತ ಕಿರಣಗಳು
        ಕುಲುಕುಲು ನಕ್ಕಾಗ ಅವಳು ಏನೋ ನೆನಪಾದಂತೆ
        ಸೀರೆಯ ಹರವುತ್ತಾ ಹುಡುಕುವಳು ಮರುಭೂಮಿಯಲಿ
        ಒರತೆಯ ;ಉಡಲಿಲ್ಲ ಯಾರೊಬ್ಬರ ಮದುವೆ ಮುಂಜಿಗೂ

        ಒಡಲ ತುಂಬಾ ಅಡ್ಡಡ್ಡ-ಉದ್ದುದ್ದ ಗೆರೆಗಳು
        ಚೌಕುಳಿಯೊಳಗೆ ಬುಟ್ಟಾಗಳು ಅರಳದೇ ಅಲ್ಲಲ್ಲೇ
        ಮುದುಡಿದ ಕನಸುಗಳು ;ಸೆರಗಿನ ಸರಿಗೆಯಲ್ಲಿ
        ನೂರಾರು ವಾರೆ ಬಳ್ಳಿಗಳು ಅಪ್ಪಿ ತೊಡರಿದವೇ ?

        ತಾನು ಕುಡಿಸಿದ ಹಾಲೋ ತನ್ನೆದೆಯ ಬೆಚ್ಚನೆಯ
         ಮಿಡಿತವೋ ಎಂಬಷ್ಟು ಸಹಜ ಪ್ರೀತಿಯಿಂದ ದಾಟಿಸಲು ,
         ತೊಡಿಸಲು ನನಗೆ ಸಿದ್ಧಳಾಗಿಒಂದು ದಿನ ಬಿಡಿಸಿದಾಗ
        ಬರದ ಭೂಮಿಯ ಸೀಳುಗಳು ಅವಳ ಆತ್ಮದಂತೆ

        ಅವಳ ಹೂಮನದ ಸ್ಫಟಿಕತೆಗೆ ಸೋತು ಉಡಲು
        ಒಡ್ಡಿಕೊಂಡರೆ,ಕಣ್ಣಕೊನೆಯ ಶಲಾಕೆಯ ಅವಳು
        ಬೆರಳ ತುದಿಯಲ್ಲಿ ಕೊಸರಿ,ಅದನು ಉಂಡೆ ಮಾಡಿ
        ಚೆಂಡಾಟವಾಡುತ್ತಾ ನಾವಿಬ್ಬರೂ ನಕ್ಕಿದ್ದು ಗೆಳತಿಯರಂತೆ







Monday 27 April 2015

ಕಾವ್ಯ ಮತ್ತು ಕ್ರಾಂತಿ

                                                                                                                               •    ಬಾನು ಮುಶ್ತಾಕ್
   ಕಾವ್ಯ  ಎಂಬುದು ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಧಾರ್ಮಿಕ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾವ್ಯವು  ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ. ಮೌಖಿಕ ಪರಂಪರೆಯ ಭಾಗವಾಗಿ ಧಾರ್ಮಿಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ತಲೆತಲಾಂತರದಿಂದ ಅಸ್ತಿತ್ವ ಕಂಡುಕೊಂಡ ಕಾವ್ಯವು ಬರಹದ ಮೂಲಕ ತನ್ನ ಗುರುತನ್ನು ಇನ್ನಷ್ಟು ಸಶಕ್ತವಾಗಿ ಮೂಡಿಸಿದೆ.
    ನಾವು ಹಾಡುತ್ತೇವೆ . ..  . ಆದರೆ ಎಂತಹ ಹಾಡುಗಳನ್ನು  ? ಸಂತೋಷದ ಮದುವೆ, ಮುಂಜಿ, ಹುಟ್ಟು ಪ್ರೇಮದ ಕಾವ್ಯಗಳು ಮನುಷ್ಯನ ಭಾವಗಳಿಗೆ ಅನುಸಾರವಾಗಿ ಅಭಿವ್ಯಕ್ತಿಗೊಂಡು ಅಜರಾಮವಾಗಿವೆ. ಹಾಗೆಯೆ ವಿಫಲ ಪ್ರೇಮದ ವಿಷಾದ ಗೀತೆಗಳು , ಮUಳÀನ್ನು ಬೀಳ್ಕೊಡುವಾÀಗಿನ ದುಃಖ ಗೀತೆಗಳು, ತವರಿನ ವ್ಯಾಮೋಹದ ಮೋಹಕ ಸಾಲುಗಳು, ಸಾವಿನ ದುರಂತ , ವಿರಹ ವೇದನೆಯ ಆರ್ತತೆ    ಯನ್ನು ವ್ಯಕ್ತಪಡಿಸುವ ಶೋಕ ಗೀತೆಗಳು  ಇವೆಲ್ಲವೂ ನಮ್ಮ ಪರಂಪರೆಯ ಅವಿüಭಾಜ್ಯ ಅಂಗವಾಗಿವೆ. ಮನುಷ್ಯ ಜೀವಿಯ ಎಲ್ಲಾ ಭಾವಗಳು ಮತ್ತು ಎಲ್ಲಾ ಸನ್ನಿವೇಶಗಳಿಗೆ ಸಂವಾದಿಯಾಗುವ ಹಾಡುಗಳು. ಅರ್ಥಾತ್ ಭಾವಕ್ಕೆ ಅನುಗುಣವಾದ ಕಾವ್ಯವು ನಮ್ಮ ಸಂಪ್ರದಾಯವಾಗಿದೆ. ಕ್ರಮೇಣ ರಾಗ , ತಾಳ , ಲಯ ಛಂದಸ್ಸಿನ ಆಭರಣಗಳಿಂದ ಮುಕ್ತಗೊಂಡ ಕಾವ್ಯವು ತನ್ನ ನೆಲೆಗಳನ್ನು ವಿಸ್ತರಿಸತೊಡಗಿತು. ವೈಯಕ್ತಿಕತೆಗಳನ್ನು ಮೀರಿ ಸಾಮಾಜಿಕ ಸಂದರ್ಭಗಳಿಗೆ ದನಿಯನ್ನು ಒದಗಿಸಿತು.
    ಚಳುವಳಿಗಳು ಹಾಗೂ ಜಗತ್ತಿನ ಕ್ರಾಂತಿಗಳಿಗೆ ಪೂರಕವಾಗಿ ಕಾವ್ಯವೆಂಬುದು ವಿಭಿನ್ನ ಗಂಟಲಿನ ಅಭಿವ್ಯಕ್ತಿಯಾಯಿತು. ಗಡಿಗಳನ್ನು ಮೀರಿದ ಕಾವ್ಯ ಎಲ್ಲಾ ಬಂಧನಗಳ ಸರಪಳಿಗಳನ್ನು ತುಂಡರಿಸುವ ಸಾಧನವಾಯಿತು. ಹಾಗೂ ಕ್ರಾಂತಿಯ ರಣಕಹಳೆಗೆ ದನಿಗಳನ್ನು ಒದಗಿಸಿತು. ಅಷ್ಟೆ ಅಲ್ಲದೆ ಪ್ರಭುತ್ವದ ಸವಾಲುಗಳಿಗೆ ಎದೆಯೊಡ್ಡುವ ಸ್ಪಷ್ಟತೆ ಮತ್ತು ತಾತ್ವಿಕತೆ ಕಾವ್ಯದ ಶಕ್ತಿಯಾಗಿದೆ. ಹೀಗೊಂದು ಸಂದರ್ಭ . .. . ಸಮಕಾಲೀನ ಇರಾನ್ ದೇಶದ ಸಾಮಾಜಿಕ ಸಂದರ್ಭವನ್ನು ಗಮನಿಸಿಬಹುದು. ಸೈಯದ್ ಹುಸೇನ್ ಮೌಸಮಿ ಎಡ ಪಂಥೀಯ ಚಿಂತಕ , ಕವಿ ಮತ್ತು ವಾತು ಶಿಲ್ಪಿ . ಅಧಿಕಾರದ ಹಾವು-ಏಣಿಯಾಟದಲ್ಲಿ ಇರಾನಿನ ಪ್ರಧಾನ ಮಂತ್ರಿಯಾಗಿದ್ದ ಆತನನ್ನು ಬಲಪಂಥೀಯ ಗುಂಪು ಉದ್ದೇಶ ಪೂರ್ವಕವಾಗಿ ಮೂಲೆ ಗುಂಪು ಮಾಡಿತು. ಆತ ಇಪ್ಪತ್ತು ವರ್ಷಗಳ ಕಾಲ ರಾಜಕೀಯವಾಗಿ ಅಜ್ಞಾತÀವಾಸವನ್ನು ಅನುಭವಿಸಿದ. ಆದರೆ ಆ ಎರಡು ದಶಕಗಳ ಅವಧಿ ಆತನ ಸಾಲಿಗೆ ಸೃಜನ ಶೀಲ ಪರ್ವವಾಗಿತ್ತು. ಆತ ಆ ಕಾಲವನ್ನು ವಾಸ್ತು ಶಿಲ್ಪಿಯಾಗಿ ಮತ್ತು ಕವಿಯಾಗಿ ತನ್ನನ್ನು  ತೊಡಗಿಸಿಕೊಂಡ .  ಆ ನಂತರ ರಾಜಕೀಯ ಪಲ್ಲಟಗಳ ಕ್ಷೋಭೆಯಲ್ಲಿ ಆತ ಇರಾನಿನ ಜನತೆಯ ಒತ್ತಾಸೆಗೆ ಮಣಿದು 2009ನೇ ಇಸವಿಯಲ್ಲಿ ಇರಾನಿನ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ .ಚುನಾವಣೆಯಲ್ಲಿ ವ್ಯಾಪಕವಾದ ಅಕ್ರಮ ನಡೆಯಿತು ಹಾಗೂ ಮೌಸಮಿ ಅಧ್ಯಕ್ಷಿಯ ಚುನಾವಣೆಯಲ್ಲಿ  ಸೋಲನ್ನು ಅನುಭವಿಸಿದ. ಆದರೆ ಇರಾನಿನ ಜನತೆ ಆತನ ಸೋಲನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಜನತೆ ರಸ್ತೆಗೆ ಇಳಿಯಿತು. ಪ್ರತಿಭಟನೆ ಮುಖ್ಯ ಉದ್ದೇಶವಾಯಿತು. ಜೀವನದ ಹಂಗುತೊರೆದ ಜನತೆ ಪ್ರಭುತ್ವದ ವಿರುದ್ಧ ಸೆಟೆದು ನಿಂತಿತು. ಪ್ರಭುತ್ವವು ಮೌಸವಿಗೆ ಮರಣ ದಂಡನೆ ವಿಧಿಸಿತು. ಆಗ ಅವನ ಬೆಂಬಲಿಗರಾದ ಅಪಾರ ಸಂಖ್ಯೆಯ ಕ್ರಾಂತಿಕಾರಿ ಮಹಿಳೆಯರು ತಮ್ಮ ಮನೆಗಳ ಟೆರೆಸೀನ ಮೇಲೆ ಹÀತ್ತಿ ದೃಢವಾಗಿ ನಿಂತರು ಮತ್ತು ತಮ್ಮ ದನಿಗೆ ಪ್ರತಿಭಟನೆಯ ನೈತಿಕ ದೃಢತೆಯ ,ಸ್ವಾಭಿಮಾನದ, ತಾತ್ವಿಕತೆಯ ಮತ್ತು ಸಾಮಾಜಿಕ ನ್ಯಾಯದ ಶಕ್ತಿಯನ್ನು ತುಂಬಿದರು. ಮತ್ತು ಕ್ರಾಂತಿಯ ಕವನಗಳನ್ನು ನಿರಂತರವಾಗಿ ಹಾಡಿದರು. ರಸ್ತೆಗಳಲ್ಲಿ  ದಿಗ್ಬಂಧನ , ರಕ್ತಪಾತ ಮತ್ತು “`ಅಲ್ಲಾಹೋ ಅಕ್ಬರ್ ಎಂಬ ಘೋಷಣೆ ಮೊಳಗುತ್ತಿತ್ತು. ಅಪಾರ ಭಯ, ಸಾವು ನೋವು ಮತ್ತು ಮಿಲಿಟರಿಯ ದೌರ್ಜನ್ಯದ ನಡುವೆ ಟೆರೇಸ್ ಮೇಲಿನಿಂದ ಕ್ರಾಂತಿಕಾರಿ ಮಹಿಳೆಯರ ಕಾವ್ಯ ಗುಡುಗುತ್ತಿತ್ತು.
ತೋಳಗಳೇ , ತಿಳಿದುಕೊಳ್ಳಿ
ತಂದೆ ಸತ್ತರೆ ನಮ್ಮ ಬುಡಕಟ್ಟಿನಲ್ಲಿ
ಅವನ ಬಂದೂಕು ಉಳಿಯುತ್ತದೆ.
 ಆ ಗುಂಪಿನ ಎಲ್ಲಾ ಗಂಡಸರು ಸತ್ತರೂ
ಮರದ ತೊಟ್ಟಿಲಿನಲ್ಲಿ ಚಿಗುರು ಅರಳುತ್ತಿರುತ್ತದೆ.       
    ಸಾಂಸ್ಕøತಿಕ ರಾಜಕಾರಣದ ಹುನ್ನಾರಗಳನ್ನು ಬಹಿರಂಗಪಡಿಸುವ ಹಾಗೂ ಪರಂಪರೆ ಮತ್ತು ಸಮಕಾಲೀನತೆಗೆ ಸ್ಪಂದಿಸುವ ಧ್ವನಿಗಳು, ನೋವು ಮತ್ತು ಆಕ್ರೋಶಗಳ ದ್ರವ್ಯವನ್ನು ಉರುವಲಾಗಿ ಬಳಸಿ ಎದೆತಟ್ಟಿ ಮೊಳಗುತ್ತಿದ್ದವು. ಖಾಸಗಿತನ ಮತ್ತು ಸಾರ್ವಜನಿಕತೆಯು ಪರಸ್ಪರ ನಂಬಿಕೆ, ಮೌಲ್ಯಗಳು , ಬದುಕಿನ ಭದ್ರತೆ ಹಾಗೂ ಬಾಂಧವ್ಯಗಳು ಹುಡಿಯಾಗಿ ಮಣ್ಣುಗೂಡುತ್ತಿದ್ದ ಅತಂತ್ರಸ್ಥಿತಿಯಲ್ಲಿಯೂ ತನ್ನ ಭಾವೋತ್ಕರ್ಷವನ್ನು ಯಶಸ್ವಿಯಾಗಿ ಸಂವಹನಗೊಳಿಸಿದ ಹಾಗೂ ಪ್ರಭುತ್ವದ  ಕ್ರೌರ್ಯದ ರಕ್ತಸಿಕ್ತ ಗೆರೆಗಳನ್ನು ಬಯಲಿಗೆಳೆದ ಇರಾನಿ ಮಹಿಳೆ ಗಾಢವಿಷಾದದ ನಡುವೆಯೂ ತಣ್ಣಗಿನ ದನಿಯನ್ನು ಉಳಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾದ ಅಸೀಮ ಸೃಜನಶೀಲ ಕ್ರಿಯೆಯಾಗಿದೆ. ಸಾವು ಮುಖಾಮುಖಿಯಾದಾಗಲೂ  ತನ್ನ ಅನಿವಾರ್ಯ ರಾಜಕೀಯ ಪ್ರಜ್ಞೆಯನ್ನು  ಉಳಿಸಿಕೊಂಡದ್ದು ಮತ್ತು ಕಾವ್ಯದ ಅಭಿವ್ಯಕ್ತಿಯ ಹೊಸ ಸಾಧ್ಯತೆಯಾಗಿ ಪ್ರಭುತ್ವದ ವಿರುದ್ಧ ಜೀವದ ಹಂಗು ತೊರೆದು ಹೋರಾಡುವ ಸಂದರ್ಭವಾಗಿ ಟೆರೇಸ್ ಕಾವ್ಯ ವಿಶ್ವದ ಸಾಹಿತಿಕ ಚರಿತ್ರೆಯಲ್ಲಿ ತನ್ನ ಐತಿಹಾಸಿಕ ಹೆಜ್ಜೆಗಳನ್ನು ಮೂಡಿಸಿತು. ಕ್ರಾಂತಿಯ ಸೆಲೆಯನ್ನು ಹಿಡಿದಿಟ್ಟುಕೊಳ್ಳುವ ಸಂದರ್ಭದ ತಲ್ಲಣಗಳನ್ನು ಇರಾನಿ ಮಹಿಳೆ ಸಶಕ್ತವಾಗಿ ಹೀಗೆ ಅಭಿವ್ಯಕ್ತಿಗೊಳಿಸಿದ್ದಾಳೆ.
    ನಮ್ಮ ರಕ್ತವನ್ನು ಹರಿಸಲು ನಮ್ಮ
 ಗಂಟಲು ಹರಿಯಲು ನಮ್ಮನ್ನು ಯಾಕೆ
 ಆಹ್ವಾನಿಸಿದಿರಿ ಸಂಭsÀ್ರಮದ ಪಾರ್ಟಿಗೆ
    ಹೀಗೆ ಎಲ್ಲಾ ನೋವು ಹಿಂಸೆ ಮತ್ತು ಯಾತನೆಯನ್ನು ತನ್ನ ಕಾವ್ಯದ ವಸ್ತು ವಿಷಯವಾಗಿ ಶೋಧನೆ ಮಾಡಲು ಆಕೆ ಉತ್ಸುಕಳಾಗಿದ್ದಾಳೆ. ಮತ್ತು ಯಾವ ಮುಲಾಜು ಕೂಡ ಇಲ್ಲದೆ , ಆಕೆ ಪ್ರಭುತ್ವಕ್ಕೆ ಸವಾಲನ್ನೆಸೆಯುತ್ತಾಳೆ ಹಾಗೂ ಕ್ರಾಂತಿಯ ಸಾಧ್ಯತೆಯನ್ನು ನಿರ್ಮಮಕಾರದಿಂದ ನೋಡುವ ಅಜಾÐತ ಕವಯತ್ರಿಯು ಬಿಸಿಲು ಬೆಳದಿಂಗಳನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಸ್ಥಿತಿಗೆ ತಲುಪಿದ್ದು , ಹೀಗೆಂದು ತನ್ನ ಟೆರೇಸಿನ ಮೇಲಿನಿಂದ ಹಾಡುತ್ತಾಳೆ ;
ನನಗೆ ಮಾಯದ ಗಾಯ ಬೇಕು
ಆ ಗಾಯವು ಚೀರಾಡ ಬೇಕು
ನಮ್ಮೆಲ್ಲರ ನಿದ್ದೆ ಕಸಿಯ ಬೇಕು
ವ್ರಣವಾಗಿ ಕಾಡಬೇಕು
      ಇನ್ನೂ ಕೆಲವು ಮಹಿಳೆಯರು ತಮ್ಮ ಗಾಢ ವಿಷಾದದ ನಡುವೆಯೂ ಉಳಿಸಿಕೊಂಡ ಅಪಾರ ಆಶಾವಾದವನ್ನು , ಮತ್ತು ಮುಂಬರುವ ದಿನಗಳಲ್ಲಿ ತನಗೆ ದಕ್ಕಬೇಕಾದ ಪಾಲನ್ನು ನಿರ್ವಂಚನೆಯಿಂದ ಪಡೆದುಕೊಳ್ಳಲು ಮಾನಸಿಕವಾಗಿ ಹೀಗೆ ತಯಾರಾಗಿದ್ದಾಳೆ
ನಮಗೆ ಮಳೆಯಲ್ಲಿ ನೆನೆಯಬೇಕಿದೆ
ಆ ಹನಿಗಳಲ್ಲಿ ನಮ್ಮ ಕಣ್ಣಿನ ಕಿಸರು
ಹರಿದುಹೋಗಬೇಕಿದೆ . ಇಡೀ ಜಗತ್ತನ್ನು
ವಿಭಿನ್ನ ನೋಟದಿಂದ ನೋಡ ಬೇಕಿದೆ
                     ***********


ಚೌಕಾಶಿ

                   
ಕೆಲವು ಅಜನ್ಮಸಿದ್ಧ ಹಕ್ಕುಗಳನ್ನು ನಮಗೆ ನಾವೇ ಘೋಷಿಸಿಕೊಂಡು ಬಿಟ್ಟಿರುತ್ತೇವೆ. ಅಂತಹದೊಂದು  ಆಜನ್ಮ ಸಿದ್ಧ ಹಕ್ಕನ್ನು ನಾನು ಬೀಬಿ ಎಂದು ಕರೆಯುವ ನಮ್ಮ ತಾಯಿ ಘೋಷಿಸಿಕೊಂಡಿದ್ದರು. ಅದೆಂದರೆ, ಚೌಕಾಸಿ ವ್ಯಾಪಾರ ಮಾಡೋದು. ಚೌಕಾಸಿ ಇಲ್ಲದೆ ವ್ಯಾಪಾರವೇ ಇಲ್ಲವೆಂಬುದು  ಬೀಬೀಯ ಅಭಿಮತವಾಗಿತ್ತು. ಹೀಗಾಗಿ ನಾನು ಕಣ್ಣು ಬಿಟ್ಟಾಗಿನಿಂದ ಚೌಕಾಸಿ ವ್ಯಾಪಾರದ ಪರಿಸರವೇ ಸುತ್ತಮುತ್ತಲೂ ಇತ್ತು. ಮತ್ತು ಕುಟುಂಬದ ಹಿತ ಕಾಯುವ ಸದ್ಗøಹಣಿಯ ಆದ್ಯ ಕರ್ತವ್ಯವೆಂದರೆ ಚೌಕಾಸಿ ವ್ಯಾಪಾರದ ಮೂಲಕ ಕುಟುಂಬದ ಆದಾಯವನ್ನು ಉಳಿತಾಯ ಮಾಡಿ, ಒಂದಿಷ್ಟು ಪುಟ್ಟ ಗಂಟನ್ನು ಆಪತ್ಕಾಲಕ್ಕೆಂದು ಕೂಡಿಡಬೇಕೆಂಬುದಾಗಿತ್ತು.
       ರೈತನ ಮಗಳಾದ ಬೀಬೀ ಸರ್ಕಾರೀ ನೌಕರರಾದ ನನ್ನ ತಂದೆಯನ್ನು ಮದುವೆ ಮಾಡಿಕೊಂಡ ನಂತರ ತಿಂಗಳ ಕೊನೆಯ ಪರದಾಟದ ದಿನಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಆದರೂ ನಮ್ಮ ತಂದೆಯ ವಿಪರೀತ ಔದಾರ್ಯದ ದೆಸೆಯಿಂದ ನಮ್ಮ ಮನೆ ಸದಾಕಾಲ ನೆಂಟರಿಷ್ಟರು ಮತ್ತು ಸ್ನೇಹಿತ ವರ್ಗದ ಕುಟುಂಬದವರಿಂದ ತುಂಬಿ ತುಳುಕುತ್ತಿತ್ತು. ನಾನು ಮತ್ತು ನನ್ನ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದರೂ ಕೂಡಾ ನಮ್ಮ ಮನೆಗೆ ಪ್ರತಿ ತಿಂಗಳ ಆರಂಭದಲ್ಲಿ ಒಂದು ಪಲ್ಲ ಸಣ್ಣಕ್ಕಿಯ ಮೂಟೆ ಬರುತ್ತಿತ್ತು. ಅನ್ನವೊಂದಿದ್ದರೆ ಚಟ್ನಿ ಜೊತೆಯಲ್ಲಾದರೂ ತಿನ್ನಬಹುದು ಮತ್ತು ತಿನ್ನಿಸಬಹುದು.(ನೆಂಟರಿಷ್ಟರಿಗೆ) ಎಂಬ ವಿಚಾರ ಬೀಬಿಗೆ ಇತ್ತು. ಹೀಗಾಗಿ ಮೊದಲೇ ಮೈಗೂಡಿಸಿಕೊಂಡಿದ್ದ ಚೌಕಾಸಿ ವ್ಯಾಪಾರ ಈಗ ಬೀಬಿ ನೆರವಿಗೆ ಬಂದಿತ್ತು. ನಾನು ನೋಡು ನೋಡುತ್ತಿದ್ದಂತೆಯೇ ಮೊಸರಿನ ಅಮ್ಮ, ಗಡಿಗೆ ತುಂಬ ಮೊಸರನ್ನು ಕುಕ್ಕೆಯಲ್ಲಿ ಹೊತ್ತು ತಂದು ಹುಸ್ಸೆಂದು ಕುಳಿತಾಗ ಬೀಬಿ ಪಾತ್ರೆ ತೆಗೆದುಕೊಂಡು ಹಾಜರಾಗುತ್ತಿದ್ದರು. ಅವರು ಚೌಕಾಸಿ ಸ್ವಭಾವದ ಅರಿವಿಂದ ಮೊಸರಿನ ಅಮ್ಮ ಗಟ್ಟಿ ಮೊಸರನ್ನು ಮುಚ್ಚಿಟ್ಟು ನೀರಿನಂತಹ ಮಜ್ಜಿಗೆಯ ಮಡಕೆಯನ್ನು ತೆರೆದಾಗ ಬೀಬಿ ಸುತಾರಾಂ ಒಪ್ಪುತ್ತಿರಲಿಲ್ಲ. ಮೊಸರಿನ ಅಮ್ಮ ಕೊನೆಗೂ ಅನಿವಾರ್ಯವಾಗಿ ಗಟ್ಟಿ ಮೊಸರನ್ನು ಅವರ ಪಾತ್ರೆಗೆ ಸುರಿದು ಆಮೇಲೆ ಹಣವನ್ನು ಸಿಕ್ಕಾಪಟ್ಟೆ ಚೌಕಾಸಿ ನಡೆದು ಆಕೆ ಆ ದುಡ್ಡನ್ನು ತನ್ನ ಸೊಂಟದ ಚೀಲ್ಕ್ಕೆ ಸಿಕ್ಕಿಸಿ, ತನ್ನ ಕಷ್ಟ-ಸುಖವನ್ನು ಹೇಳಿಕೊಳ್ಳಲಾರಂಭಿಸಿ, ಅದು ಮಗಿಯುವ ವೇಳೆಗೆ ಮೊಸರಿನ ಪ್ರಸಂಗಕ್ಕೆ ಸುಮಾರು ನಲವತ್ತೈದರಿಂದ  ಒಂದು ಗಂಟೆಯ ಕಾಲ ವಿನಿಯೋಗವಾಗುತ್ತಿತ್ತು. ಅಷ್ಟರೊಳಗೆ ಮೊಸರಿಮ್ಮ ತಾನು ತಿಂಡಿಯನ್ನು ಕೂಡಾ ಮಾಡದಏ ಬಂದಿರುವುದಾಗಿ ಚಾಕಚಕ್ಯತೆಯಿಂದ  ಸ್ಪಷ್ಟ ಪಡಿಸುತ್ತಿದ್ದಳು. ಆ ಮೇರೆಗೆ ಬೀಬಿಯ ಮನಸ್ಸು ಕರಗಿ ಒಳ ಬಂದು ತಟ್ಟೆ ಆಕಾರದ ಒಂದು ದೊಡ್ಡ ರೊಟ್ಟಿ ಅದರ ಮೇಲೆ ಒಂದಿಷ್ಟು ಪಲ್ಯ ಆಕೆಗೆ ನೀಡುತ್ತಿದ್ದರು. ಮೊಸರಮ್ಮ ತೃಪ್ತಿಯಾಗಿ ತಿಂದು ತೇಗಿ ಮುಂದಿನ ಮಾರಾಟಕ್ಕೆ ಹೋಗುತ್ತಿದ್ದಳು. ಹಬ್ಬಗಿಬ್ಬ ಆಗಿದ್ದರೆ, ಬಿರಿಯಾನಿ, ಪಾಯಸ, ಮೊಹರಂ ಆಗಿದ್ದರೆ. ಚೇಂಗಾ ಎಂಬ ಸಿಹಿ ಖಾದ್ಯ ಬುತ್ತಿ, ಇನ್ನೇನೋ ವೈವಿಧ್ಯಪೂರ್ಣ ಅಡುಗೆ ಇದ್ದು, ಮೊಸರಮ್ಮನ ನಿಯಮಿತ ಬರುವಿಗೆ ವಿಶೇಷ ಆಕರ್ಷಣೆಯನ್ನು ಒದಗಿಸುತ್ತಿತ್ತು. ಹೀಗಾಗಿ ಮೊಸರಮ್ಮ ನಮ್ಮ ಬೀಬಿಯ ಮನೆಯನ್ನು ಯಾವತ್ತೂ ತಪ್ಪಿಸಿಕೊಳ್ಳಲಿಲ್ಲ. ಹೀಗೆಯೇ ವರತ್ನ ರೂಪವಾಗಿ ಬರುತ್ತಿದ್ದ ಅನೇಕರಿದ್ದರು. ತರಕಾರಿ, ಹೂವು, ಬೆಣ್ಣೆ ಮೀನು ಮಾರಾಟ ಮಾಡುವವರು ಬಹುತೇಕ ಹೆಣ್ಣು ಮಕ್ಕಳೇ ಕುಕ್ಕೆಯನ್ನು ತಲೆಯ ಮೇಲಿಟ್ಟು, ನಿಯಮಿತವಾಗಿ ವರತ್ನೇ ಮನೆಗಳಿಗೆ ಹೋಗುತತಿದ್ದರು. ಈ ವರತ್ನೆ ಶಭ್ಧದ ಉತ್ಪತ್ತಿಯ ಬಗ್ಗೆ ನನಗೆ ಯಾವುದೇ ರಹಾ ಕಾಣಿಸುತ್ತಿಲ್ಲ. ಇದು ವರ್ತನೆ ಎಂತಲೇ ಅಥವಾ ಇನ್ನೇನೋ ನನಗಂತೂ ಇದೂವರೆಗೆ ಅರ್ಥೈಸಲು ಸಾಧ್ಯವಾಗಿಲ್ಲ.
       ಬೀಬಿ ‘ಲಟ್’ ಎಂದು ಬೆಂಡೆಕಾಯಿಯ ತುದಿಯನ್ನು ಮುರಿದು, ಎಳೆಯದೋ, ಅಥವಾ ಬಲಿತದ್ದೋ ಎಂದು ಪರೀಕ್ಷಿಸಿ,  ಎಳೆಯ ಬೆಂಡೆಕಾಯಿಯನ್ನು ಆರಿಸಿ, ತಕ್ಕಡಿಯು ಕೆಳಗೆ ವಾಲುವವರೆಗೂ ತಕ್ಕಡಿಯಲ್ಲಿ ಸೇರಿಸಿ ತೂಕ ಮಾಡುತ್ತಾ”ನೀವು ಬೆಳೆದವರು, ಒಂದಿಷ್ಟು ತೂಕ ಸಮವಾಗಿ ಕೊಡಬೇಕು “ ಎಂದು ಬುದ್ಧಿವಾದವನ್ನು ಹೇಳುತ್ತಾ ಬೆಲೆಯಲ್ಲಿ ಚೌಕಾಸಿ ಮಾಡಲಾರಂಭಿಸುತ್ತಿದ್ದರು. ಬೆಲೆ ಮತ್ತು ಕ್ವಾಲಿಟಿಯಲ್ಲಿ ಈ ಎರಡು ಅಂಶಗಳಲ್ಲಿ ಚೌಕಾಸಿ ಸಾಗುತ್ತು. ಅದರೊಡನೆ ಕಷ್ಟ-ಸುಖ ಒಂದಿಷ್ಟು ಊಟ ತಿಂಡಿ ಇವೆಲ್ಲವೂ  ಯಥಾ ಪ್ರಕಾರ ಸಾಗುತ್ತಿತ್ತು.
         ಈ ಚೌಕಾಸಿ ಪ್ರಸಂಗ ಒಮ್ಮೊಮ್ಮೆ ಬೀಬೀಗೆ ವಿರುದ್ದಾಸ್ತ್ರವೂ ಆಗುತತಿತ್ತು. ಹಾಸನದ ಜಾತ್ರೆ ಮತ್ತು ವಸ್ತು ಪ್ರದರ್ಶನವು ಸುಪ್ರಸಿದ್ಧವಾಗಿದ್ದ ಕಾಲವೊಂದಿತ್ತು. ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ವ್ಯಾಪಾರಸ್ಥರು ತಮ್ಮ   ಮಾರಾಟ  ಮಳಿಗೆಯನ್ನು ತೆರೆದಿದ್ದರು.  ಈಗಿನ ಮಾಲ್‍ಗಳಿಗಿಂತಲೂ ಅದ್ಭುತ ಲೋಕವಾಗಿತ್ತದು.


ಕೆಲವು ಅಜನ್ಮಸಿದ್ಧ ಹಕ್ಕುಗಳನ್ನು ನಮಗೆ ನಾವೇ ಘೋಷಿಸಿಕೊಂಡು ಬಿಟ್ಟಿರುತ್ತೇವೆ. ಅಂತಹದೊಂದು  ಆಜನ್ಮ ಸಿದ್ಧ ಹಕ್ಕನ್ನು ನಾನು ಬೀಬಿ ಎಂದು ಕರೆಯುವ ನಮ್ಮ ತಾಯಿ ಘೋಷಿಸಿಕೊಂಡಿದ್ದರು. ಅದೆಂದರೆ, ಚೌಕಾಸಿ ವ್ಯಾಪಾರ ಮಾಡೋದು. ಚೌಕಾಸಿ ಇಲ್ಲದೆ ವ್ಯಾಪಾರವೇ ಇಲ್ಲವೆಂಬುದು  ಬೀಬೀಯ ಅಭಿಮತವಾಗಿತ್ತು. ಹೀಗಾಗಿ ನಾನು ಕಣ್ಣು ಬಿಟ್ಟಾಗಿನಿಂದ ಚೌಕಾಸಿ ವ್ಯಾಪಾರದ ಪರಿಸರವೇ ಸುತ್ತಮುತ್ತಲೂ ಇತ್ತು. ಮತ್ತು ಕುಟುಂಬದ ಹಿತ ಕಾಯುವ ಸದ್ಗøಹಣಿಯ ಆದ್ಯ ಕರ್ತವ್ಯವೆಂದರೆ ಚೌಕಾಸಿ ವ್ಯಾಪಾರದ ಮೂಲಕ ಕುಟುಂಬದ ಆದಾಯವನ್ನು ಉಳಿತಾಯ ಮಾಡಿ, ಒಂದಿಷ್ಟು ಪುಟ್ಟ ಗಂಟನ್ನು ಆಪತ್ಕಾಲಕ್ಕೆಂದು ಕೂಡಿಡಬೇಕೆಂಬುದಾಗಿತ್ತು.
       ರೈತನ ಮಗಳಾದ ಬೀಬೀ ಸರ್ಕಾರೀ ನೌಕರರಾದ ನನ್ನ ತಂದೆಯನ್ನು ಮದುವೆ ಮಾಡಿಕೊಂಡ ನಂತರ ತಿಂಗಳ ಕೊನೆಯ ಪರದಾಟದ ದಿನಗಳನ್ನು ಅಭ್ಯಾಸ ಮಾಡಿಕೊಂಡಿದ್ದರು. ಆದರೂ ನಮ್ಮ ತಂದೆಯ ವಿಪರೀತ ಔದಾರ್ಯದ ದೆಸೆಯಿಂದ ನಮ್ಮ ಮನೆ ಸದಾಕಾಲ ನೆಂಟರಿಷ್ಟರು ಮತ್ತು ಸ್ನೇಹಿತ ವರ್ಗದ ಕುಟುಂಬದವರಿಂದ ತುಂಬಿ ತುಳುಕುತ್ತಿತ್ತು. ನಾನು ಮತ್ತು ನನ್ನ ಒಬ್ಬ ತಮ್ಮ ಹಾಗೂ ಒಬ್ಬ ತಂಗಿ ಇದ್ದರೂ ಕೂಡಾ ನಮ್ಮ ಮನೆಗೆ ಪ್ರತಿ ತಿಂಗಳ ಆರಂಭದಲ್ಲಿ ಒಂದು ಪಲ್ಲ ಸಣ್ಣಕ್ಕಿಯ ಮೂಟೆ ಬರುತ್ತಿತ್ತು. ಅನ್ನವೊಂದಿದ್ದರೆ ಚಟ್ನಿ ಜೊತೆಯಲ್ಲಾದರೂ ತಿನ್ನಬಹುದು ಮತ್ತು ತಿನ್ನಿಸಬಹುದು.(ನೆಂಟರಿಷ್ಟರಿಗೆ) ಎಂಬ ವಿಚಾರ ಬೀಬಿಗೆ ಇತ್ತು. ಹೀಗಾಗಿ ಮೊದಲೇ ಮೈಗೂಡಿಸಿಕೊಂಡಿದ್ದ ಚೌಕಾಸಿ ವ್ಯಾಪಾರ ಈಗ ಬೀಬಿ ನೆರವಿಗೆ ಬಂದಿತ್ತು. ನಾನು ನೋಡು ನೋಡುತ್ತಿದ್ದಂತೆಯೇ ಮೊಸರಿನ ಅಮ್ಮ, ಗಡಿಗೆ ತುಂಬ ಮೊಸರನ್ನು ಕುಕ್ಕೆಯಲ್ಲಿ ಹೊತ್ತು ತಂದು ಹುಸ್ಸೆಂದು ಕುಳಿತಾಗ ಬೀಬಿ ಪಾತ್ರೆ ತೆಗೆದುಕೊಂಡು ಹಾಜರಾಗುತ್ತಿದ್ದರು. ಅವರು ಚೌಕಾಸಿ ಸ್ವಭಾವದ ಅರಿವಿಂದ ಮೊಸರಿನ ಅಮ್ಮ ಗಟ್ಟಿ ಮೊಸರನ್ನು ಮುಚ್ಚಿಟ್ಟು ನೀರಿನಂತಹ ಮಜ್ಜಿಗೆಯ ಮಡಕೆಯನ್ನು ತೆರೆದಾಗ ಬೀಬಿ ಸುತಾರಾಂ ಒಪ್ಪುತ್ತಿರಲಿಲ್ಲ. ಮೊಸರಿನ ಅಮ್ಮ ಕೊನೆಗೂ ಅನಿವಾರ್ಯವಾಗಿ ಗಟ್ಟಿ ಮೊಸರನ್ನು ಅವರ ಪಾತ್ರೆಗೆ ಸುರಿದು ಆಮೇಲೆ ಹಣವನ್ನು ಸಿಕ್ಕಾಪಟ್ಟೆ ಚೌಕಾಸಿ ನಡೆದು ಆಕೆ ಆ ದುಡ್ಡನ್ನು ತನ್ನ ಸೊಂಟದ ಚೀಲ್ಕ್ಕೆ ಸಿಕ್ಕಿಸಿ, ತನ್ನ ಕಷ್ಟ-ಸುಖವನ್ನು ಹೇಳಿಕೊಳ್ಳಲಾರಂಭಿಸಿ, ಅದು ಮಗಿಯುವ ವೇಳೆಗೆ ಮೊಸರಿನ ಪ್ರಸಂಗಕ್ಕೆ ಸುಮಾರು ನಲವತ್ತೈದರಿಂದ  ಒಂದು ಗಂಟೆಯ ಕಾಲ ವಿನಿಯೋಗವಾಗುತ್ತಿತ್ತು. ಅಷ್ಟರೊಳಗೆ ಮೊಸರಿಮ್ಮ ತಾನು ತಿಂಡಿಯನ್ನು ಕೂಡಾ ಮಾಡದಏ ಬಂದಿರುವುದಾಗಿ ಚಾಕಚಕ್ಯತೆಯಿಂದ  ಸ್ಪಷ್ಟ ಪಡಿಸುತ್ತಿದ್ದಳು. ಆ ಮೇರೆಗೆ ಬೀಬಿಯ ಮನಸ್ಸು ಕರಗಿ ಒಳ ಬಂದು ತಟ್ಟೆ ಆಕಾರದ ಒಂದು ದೊಡ್ಡ ರೊಟ್ಟಿ ಅದರ ಮೇಲೆ ಒಂದಿಷ್ಟು ಪಲ್ಯ ಆಕೆಗೆ ನೀಡುತ್ತಿದ್ದರು. ಮೊಸರಮ್ಮ ತೃಪ್ತಿಯಾಗಿ ತಿಂದು ತೇಗಿ ಮುಂದಿನ ಮಾರಾಟಕ್ಕೆ ಹೋಗುತ್ತಿದ್ದಳು. ಹಬ್ಬಗಿಬ್ಬ ಆಗಿದ್ದರೆ, ಬಿರಿಯಾನಿ, ಪಾಯಸ, ಮೊಹರಂ ಆಗಿದ್ದರೆ. ಚೇಂಗಾ ಎಂಬ ಸಿಹಿ ಖಾದ್ಯ ಬುತ್ತಿ, ಇನ್ನೇನೋ ವೈವಿಧ್ಯಪೂರ್ಣ ಅಡುಗೆ ಇದ್ದು, ಮೊಸರಮ್ಮನ ನಿಯಮಿತ ಬರುವಿಗೆ ವಿಶೇಷ ಆಕರ್ಷಣೆಯನ್ನು ಒದಗಿಸುತ್ತಿತ್ತು. ಹೀಗಾಗಿ ಮೊಸರಮ್ಮ ನಮ್ಮ ಬೀಬಿಯ ಮನೆಯನ್ನು ಯಾವತ್ತೂ ತಪ್ಪಿಸಿಕೊಳ್ಳಲಿಲ್ಲ. ಹೀಗೆಯೇ ವರತ್ನ ರೂಪವಾಗಿ ಬರುತ್ತಿದ್ದ ಅನೇಕರಿದ್ದರು. ತರಕಾರಿ, ಹೂವು, ಬೆಣ್ಣೆ ಮೀನು ಮಾರಾಟ ಮಾಡುವವರು ಬಹುತೇಕ ಹೆಣ್ಣು ಮಕ್ಕಳೇ ಕುಕ್ಕೆಯನ್ನು ತಲೆಯ ಮೇಲಿಟ್ಟು, ನಿಯಮಿತವಾಗಿ ವರತ್ನೇ ಮನೆಗಳಿಗೆ ಹೋಗುತತಿದ್ದರು. ಈ ವರತ್ನೆ ಶಭ್ಧದ ಉತ್ಪತ್ತಿಯ ಬಗ್ಗೆ ನನಗೆ ಯಾವುದೇ ರಹಾ ಕಾಣಿಸುತ್ತಿಲ್ಲ. ಇದು ವರ್ತನೆ ಎಂತಲೇ ಅಥವಾ ಇನ್ನೇನೋ ನನಗಂತೂ ಇದೂವರೆಗೆ ಅರ್ಥೈಸಲು ಸಾಧ್ಯವಾಗಿಲ್ಲ.
       ಬೀಬಿ ‘ಲಟ್’ ಎಂದು ಬೆಂಡೆಕಾಯಿಯ ತುದಿಯನ್ನು ಮುರಿದು, ಎಳೆಯದೋ, ಅಥವಾ ಬಲಿತದ್ದೋ ಎಂದು ಪರೀಕ್ಷಿಸಿ,  ಎಳೆಯ ಬೆಂಡೆಕಾಯಿಯನ್ನು ಆರಿಸಿ, ತಕ್ಕಡಿಯು ಕೆಳಗೆ ವಾಲುವವರೆಗೂ ತಕ್ಕಡಿಯಲ್ಲಿ ಸೇರಿಸಿ ತೂಕ ಮಾಡುತ್ತಾ”ನೀವು ಬೆಳೆದವರು, ಒಂದಿಷ್ಟು ತೂಕ ಸಮವಾಗಿ ಕೊಡಬೇಕು “ ಎಂದು ಬುದ್ಧಿವಾದವನ್ನು ಹೇಳುತ್ತಾ ಬೆಲೆಯಲ್ಲಿ ಚೌಕಾಸಿ ಮಾಡಲಾರಂಭಿಸುತ್ತಿದ್ದರು. ಬೆಲೆ ಮತ್ತು ಕ್ವಾಲಿಟಿಯಲ್ಲಿ ಈ ಎರಡು ಅಂಶಗಳಲ್ಲಿ ಚೌಕಾಸಿ ಸಾಗುತ್ತು. ಅದರೊಡನೆ ಕಷ್ಟ-ಸುಖ ಒಂದಿಷ್ಟು ಊಟ ತಿಂಡಿ ಇವೆಲ್ಲವೂ  ಯಥಾ ಪ್ರಕಾರ ಸಾಗುತ್ತಿತ್ತು.
         ಈ ಚೌಕಾಸಿ ಪ್ರಸಂಗ ಒಮ್ಮೊಮ್ಮೆ ಬೀಬೀಗೆ ವಿರುದ್ದಾಸ್ತ್ರವೂ ಆಗುತತಿತ್ತು. ಹಾಸನದ ಜಾತ್ರೆ ಮತ್ತು ವಸ್ತು ಪ್ರದರ್ಶನವು ಸುಪ್ರಸಿದ್ಧವಾಗಿದ್ದ ಕಾಲವೊಂದಿತ್ತು. ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಅನೇಕ ವ್ಯಾಪಾರಸ್ಥರು ತಮ್ಮ   ಮಾರಾಟ  ಮಳಿಗೆಯನ್ನು ತೆರೆದಿದ್ದರು.  ಈಗಿನ ಮಾಲ್‍ಗಳಿಗಿಂತಲೂ ಅದ್ಭುತ ಲೋಕವಾಗಿತ್ತದು.



ಸ್ವರ್ಗವೆಂದರೆ


                                                                                                                 * ಬಾನುಮುಷ್ತಾಕ್
         ಶಮೀಮ್ ಬಾನುವಿನ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಅತ್ಯಂತ ಕಠಿಣ ಕೆಲಸ ಎಂಬುದು ಆಕೆಯ ಕುಟುಂಬದವರ ಅಭಿಪ್ರಾಯವಾಗಿತ್ತು .ಆಕೆ ಮೊದಲು ಹೀಗಿರಲಿಲ್ಲಾ  ಈಗೇಕೆ ಹೀಗಾದಳು ಎಂದು ಸಾದತ್ ಚಿಂತಿತನಾಗಿದ್ದ . ಸರ್ಕಾರಿ ಪ್ರೌಢ ಶಾಲೆಯಲ್ಲಿ ಉರ್ದು ಭಾಷೆಯ  ಅಧ್ಯಾಪಕನಾಗಿದ್ದ ಆತ ತನ್ನ ಬಿಡುವಿನ ವೇಳೆಯನ್ನೆಲ್ಲಾ ಅವಳ ವರ್ತನೆಯ ಬಗ್ಗೆ  ವಿಶ್ಲೇಶಸಲು ಮೀಸಲಾಗಿಟ್ಟಿದ್ದು , ಆಕೆಗೆ ಜಿನ್ ಏನಾದರೂ ಮೆಟ್ಟಿರಬಹುದೇ  ಎಂಬ ತೀವ್ರ ಆಲೋಚನೆಗೂ ಗುರಿಯಾಗಿದ್ದ . ಅಷ್ಟೇನೂ ಓದುವ ಹವ್ಯಾಸವಿಲ್ಲದ ಆತನ ಕಣ್ಣಿಗೆ ಸ್ಟಾಫ್ ರೂಮಿನಲ್ಲಿ ದಿನಪತ್ರಿಕೆಯೊಂದರ ಲೇಖನವೊಂದು ಅಕಸ್ಮಾತ್ತಾಗಿ ಕಣ್ಣಿಗೆ ಬಿದ್ದು , ಈ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಅವನ ಪ್ರಯತ್ನಕ್ಕೆ  ಫಲ ದೊರಕಿದಂತಾಯಿತು . ಹೀಗಾಗಿ  ಅವಳು ಮೆನೋಪಾಸ್‍ನ ಸ್ಥಿತ್ಯಂತರಗಳಿಂದ ತೊಂದರೆಗೀಡಾಗಿದ್ದಾಳೆ ; ಮತ್ತು ಅವಳಿಗೆ ತನ್ನ ಎಲ್ಲಾ ನೆರವಿನ ಅಗತ್ಯವಿದೆಯೆಂದು ತನ್ನ ಅನುಕೂಲಕ್ಕೆ ತಕ್ಕಂತೆ  ಏಕಪಕ್ಷೀಯವಾಗಿ ತೀರ್ಮಾನ ಮಾಡಿದ ಮೇಲೆ  ಅವನಿಗೆ ತುಸು ನೆಮ್ಮದಿ ಎನಿಸಿತು . ಹೀಗಾಗಿ ಮನೆಯಲ್ಲಿ ಅವಳು ನಡೆಸುವ ಆರ್ಭಟ , ಚಿಕ್ಕ ಚಿಕ್ಕ ವಿಷಯಗಳಿಗೆಲ್ಲ ನಡೆಸುವ ರಂಪ , ಮಕ್ಕಳ ಮೇಲೆ ಎರಗಿ ಬೀಳುವ ಅವಳ ನಡವಳಿಕೆಯನ್ನು ಕಂಡೂ ಕಾಣದಂತೆ ಇರುವಸ್ವಭಾವವನ್ನು ಮೈಗೂಡಿಸಿಕೊಂಡ . ಮತ್ತು ಸರಳವಾಗಿ ಅವಳನ್ನು ಅರ್ಥೈಸಿಕೊಳ್ಳವುದು ಅವನಿಗೂ ಬೇಕಾಗಿತ್ತು .ಅವನು ಕಂಡು ಕೊಂಡ ಬಿಡುಗಡೆಯ ಸುಲಭ ಹಾದಿ ಅದಾಗಿತ್ತು .     
 ಅವಳ  ಮೂವರು ಮಕ್ಕಳ ಪೈಕಿ ಹಿರಿಯವನು ಅಜೀಮ್ . ಹಿರಿಯವನು ಎಂತಲೋ ಅಥವ ಮಗ ಎಂತಲೋ ಅವಳಿಗೆ ಅವನ ಮೇಲೆ ವಿಶೇಷ ಪ್ರೀತಿ ; ‘ ಸಾತ್ ಖೂನ್ ಮಾಫ್ ” ಅಂತಾರಲ್ಲಾ ಹಾಗೆ ! ಹೀಗಾಗಿ ಅವನ ಬೆನ್ನಿಗಿದ್ದ ಅವನ ತಂಗಿಯರಾಗಿದ್ದ ಆಸಿಮಾ ಮತ್ತು ಸನಾ ದಿನವೊಂದಕ್ಕೆ ಹತ್ತು ಸಾರಿಯಾದರೂ ‘ ಅಮ್ಮಿ ಪಾರ್ಶಿಯಾಲಿಟಿ ಮಾಡಿದರು ’ಎಂದು ದೂರುವುದು ಸಾಮಾನ್ಯ ನೋಟವಾಗಿತ್ತು  . ಹಾಗೆ ಎದ್ದು ಕಾಣುವಂತಹ ವರ್ತನೆ ಆಕೆಯದು . ಆದರೆ ಅವಳಿಗೆ    ಕೋಪ ಬಂದಾಗ ಮತ್ತು ಆ ಕೋಪ ಆಗಾಗ್ಗೆ ಬರುತ್ತಲೇ ಇತ್ತು. . .. . ಹಾಗಾದಾಗ ಆ ಮೂವರನ್ನೂ ಒಂದೇ ತಕ್ಕಡಿಯಲ್ಲಿ ತೂಗಿ , ಶೈತಾನೀ ಕೂಟವೆಂದು ಬ್ರಾಂಡ್ ಮಾಡಿ ಕೈಗೆ ಸಿಕ್ಕಿದವರನ್ನು ಹಿಗ್ಗಾ ಮುಗ್ಗಾ ಬಾರಿಸಿ ತನ್ನ ಕೋಪವನ್ನು ತಣಿಸುವುದಿತ್ತು .
     ಆಕೆಯ ಈ ಪರಿಕ್ರಮದಿಂದ ಅಜೀಮ್‍ಗೆ ವಿನಾಯತಿ ಇತ್ತು . ಸನಾ ಕೊನೆಯವಳಾದರೂ ವಿಶೇಷ ಚಾಲಾಕಿಯಾಗಿದ್ದು ಆಕೆಯ ಮೂಡನ್ನು ಗ್ರಹಿಸಿ , ನಿರೀಕ್ಷಣಾ ನಾಪತ್ತೆಯಾಗುತ್ತಿದ್ದಳು . ಅಂತೂ ಇಂತೂ ತಪ್ಪಿರಲಿ ಇಲ್ಲದಿರಲಿ ಸಿಕ್ಕಿ ಬೀಳುತ್ತಿದ್ದವಳೇ ಆಸಿಮಾ . ಆಕೆಯ ಕೋಪಕ್ಕೆ ಒಡ್ಡಿಕೊಳ್ಳಲು ಆಸಿಮಾ ಸನ್ನದ್ಧಳಾಗಿರಲು ಇನ್ನೊಂದು ವಿಚಿತ್ರ ಕಾರಣವೂ ಇತ್ತು . ಕೋಪವಿಳಿದ ಕೂಡಲೇ ಶಮೀಮ್‍ಗೆ ವಿಪರೀತ ಪಶ್ಚಾತ್ತಾಪವಾಗುತ್ತಿತ್ತು .ತನ್ನ ಕೋಪಕ್ಕೆ ಬಲಿಯಾದವಳ ಬಗ್ಗೆ ಇನ್ನಿಲ್ಲದ ಮಮತೆ ಮೂಡುತ್ತಿತ್ತು . ಹೀಗಾದಾಗ ಹೊಸ ಡ್ರೆಸ್ ,ಹೊಸ ಚಪ್ಪಲಿ ಅಥವ. ..  ಮತ್ತು ಒಂದಿಷ್ಟು ಪಾಕೆಟ್‍ಮನಿ , ಒಳ್ಳೆಯ ಸಿಹಿಯಡಿಗೆ ಮೊದಲಾದ ಆಸಿಮಾಳ ಬಹು ದಿನಗಳ ಬಾಕಿ ಬೇಡಿಕೆ ಈಡೇರುತ್ತಿತ್ತು.
     ತಂದೆಯ ವಿಶೇಷ ಸಂಯಮ ಆ ಮಕ್ಕಳಿಗೆ ಆಶ್ಚರ್ಯದ ವಿಷಯವಾಗಿದ್ದಂತೆಯೇ ಆತ ‘ಹೆಂಡತಿಬುರುಕ’ ಎಂದು  ತೀರ್ಮಾನಕ್ಕೆ  ಬರಲು ಕಾರಣೀಭೂತವಾಗಿತ್ತು . ಸಾದಾತ್ ಮತ್ತು  ಅವನ  ತಂಗಿಯರು  ಆಕೆಯ ಬಗ್ಗೆ ಹೇಳುತ್ತಿದ್ದ ವಿಷಯಗಳ  ಆಧಾರದ ಮೇಲೆ   ಅವಳ ಈ ನಡವಳಿಕೆಯ ಬಗ್ಗೆ  ಮೂವರು ಮಕ್ಕಳೂ ಒಟ್ಟುಗೂಡಿ ತಮ್ಮದೇ  ಆದ ವಿವರಣೆಯನ್ನು  ಸಿದ್ಧ ಪಡಿಸಿಕೊಂಡಿದ್ದು  ಪರಸ್ಪರ ಸಾಂತ್ವನ , ಅನುಕಂಪ ಮೊದಲಾದುವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು . ಮೂವರು ಗಂಡು ಮತ್ತು ಮೂವರು ಹೆಣ್ಣುಮಕ್ಕಳಿದ್ದ ಮನೆಗೆ ಹಿರಿಸೊಸೆಯಾಗಿ ಬಂದ  ಆಕೆ ನಿರೀಕ್ಷೆಗಳ ಅಪರಿಮಿತ ಆಕಾಶವನ್ನು ತನ್ನ ಕಣ್ಣಿನಲ್ಲಿರಿಸಿಕೊಂಡು ಆ ಮನೆಗೆ ಕಾಲಿಟ್ಟಿದ್ದಳು . ಮೆಹಂದಿಯ ಚಿತ್ತಾರದ ಕೈಯನ್ನು ಗಂಧದಲ್ಲಿ ಅದ್ದಿ , ಮನೆಯ ಪಶ್ಚಿಮದ ಗೋಡೆಯ ಮೇಲೆ  ಅಂಗೈಯ ಅಚ್ಚನ್ನು ಮೂಡಿಸಿದಾಗ ಅವಳಿಗೇ ಆಶ್ಚಯವಾಗುವಂತೆ , ಅದರ ಬದಿಯಲ್ಲಿ ಪುಟ್ಟಪುಟ್ಟ ಅಂಗೈಗಳು ಮೂಡಿ ಬಂದವು . ಹಿಂದಿರುಗಿ ನೋಡಿದಾಗ ನಾದಿನಿಯರು , ಮೈದುನಂದಿರು . . . . .  ಅವರ ಖರ್ಚು ವೆಚ್ಚ, ಊಟೋಪಚಾರ , ಬಟ್ಟೆಬರೆ , ಸದಾ ಕಾಯಿಲೆಯ ಅತ್ತೆ . . . . ಆಕೆಯ ಪಥ್ಯದಡಿಗೆ , ಮಾವನ ಅಸಂಖ್ಯ ನೆಂಟರಿಷ್ಟರು ಮತ್ತು ಸ್ನೇಹಿತರು . . . . . ಆಕೆಯ ಕನಸುಗಳು ಕಮರಿ ಹೋದವು . ಅದೆಲ್ಲವನ್ನೂ ಆಕೆಯು ಮೊದಮೊದಲು ನಗುತ್ತಲೇ ಸಂಭಾಳಿಸಿದಳಂತೆ . ಆದರೆ , ದಿನಗಳೆದಂತೆ ಆ ಮದುವೆಗಳು , ಹೆರಿಗೆಗಳು , ಬಾಣಂತನ  ,ರೋಗಗಳು , ಅತ್ತೆ ಮಾವಂದಿರ ಸಾವು . . .ನಡುವೆ ತನ್ನ ಬಸಿರು ಬಾಣಂತನ ಎಳೆ ಮಕ್ಕಳ ಆರೈಕೆ – ಇವುಗಳೆಲ್ಲಾ ಆಕೆಗೆ ರೇಜಿಗೆ ಹುಟ್ಟಿಸತೊಡಗಿದವು . ಆದರೂ ಆಕೆ ಹೀಗೆ ತಾಳ್ಮೆ ಕಳೆದುಕೊಂಡಿದ್ದ ಪ್ರಸಂಗವಿರಲಿಲ್ಲ  ಇವೆಲ್ಲದರ ನಡುವೆ ಓರಗಿತ್ತಿಯರು ಬಂದು ತನ್ನ ಜವಾಬುದಾರಿ ಸ್ವಲ್ಪವಾದರೂ ಕಡಿಮೆಯಾದೀತೆಂಬ ನಿರೀಕ್ಷೆಯ ಎಳೆಯೂ ಒಂದಿಷ್ಟು ಜಿನುಗುತ್ತಿತ್ತು ಜಲದ ಕಣ್ಣಿನೊಡನೆ .
     ಅದರೆ ನಡೆದಿದ್ದಂತೂ ತದ್ವಿರುದ್ಧ ; ಅವಳ ಮೊದಲನೆಯ ಓರಗಿತ್ತಿಯಂತೂ ಮದುವೆಯಾದ ಒಂದು ವರ್ಷದೊಳಗೆ ನಯವಾಗಿ ನಗು ನಗುತ್ತಲೇ ಗಂಡನೊಡನೆ ದುಬಾಯಿಗೆ ಹೋದ ನಂತರ ಅವಳ ಹತಾಶೆ ಮಿತಿ ಮೀರಿತು . ತಾನು ತನ್ನ ಗಂಡ ಮತ್ತು ಮಕ್ಕಳು ಯಾವಾಗ ನೆಮ್ಮದಿಯಿಂದಿರುವುದು? ತಾನು ಸತ್ತ ಮೇಲಾ . . . ಎಂದು ರಾಜಾ ರೋಷವಾಗಿ ಯಾರ ಮುಲಾಜೂ ಕೂಡಾ ಇಲ್ಲದೆ ಭುಸುಗುಡತೊಡಗಿದಳು . ಹೀಗಾಗಿ ಸಾದಾತ್‍ನ ತಂಗಿಯರು ಮತ್ತು ಇತರೆ ಬಂಧು ಬಳಗದವರು ಅವಳಿಂದ ಒಂದಿಷ್ಟು ಅಂತರವನ್ನು ಕಾಪಾಡಿಕೊಳ್ಳಲೇ ಬೇಕಾಯಿತು .
     ತಂದೆ ತಾಯಿ ಇಲ್ಲದ ಅನಾಥ ಎಂದು ಅವಳ ಕೊನೆಯ ಮೈದುನನಾದ ಆರಿಫ್ ನನ್ನು ಪ್ರೀತಿಯಿಂದಲೇ ನೋಡಿಕೊಂಡಳು . ಆದರೆ ಅವನ ಮದುವೆಯಾದದ್ದೇ ತಡ ಮಲ ತಾಯಿಯಾಗಿಬಿಟ್ಟಳು . ಸಾದಾತ್‍ಗೆ ಕೂಡಾ  ಆಶ್ಚರ್ಯವಾಗುವಂತೆ , ಆರಿಫ್‍ನ ಮದುವೆಯಾದದ್ದೇ ತಡ ಬೇರೆ ಮನೆಗೆ ಹೋಗು ಎಂದು ಮುಲಾಜಿಲ್ಲದೆ ಹೇಳಿ ಬಿಟ್ಟಳು .  ಸಾದತ್ ಪರಿತಪಿಸಿ ಹೋದ . ಆದರೆ ಅವಳು ಬಿಡಬೇಕಲ್ಲಾ. . ..  .. ಹಿಂದಿನದು ಮುಂದಿನದು ಎಲ್ಲಾ  ಜಾಲಾಡಿಸಿ , ಸಾದತ್‍ನನ್ನೂ ಕೂಡಾ ಮನಸೋಇಚ್ಛೆ  ದೂರಿ , ಅತ್ತು ಕರೆದು ರಂಪಾಟ ಮಾಡಿ ಧಡಾರೆಂದು ತನ್ನ ಕೋಣೆಯ ಬಾಗಿಲನ್ನು ಬಡಿದುಕೊಂಡಾಗ  ಆರಿಫ್ ಮತ್ತು ಅವನ ಹೆಂಡತಿ ಇಬ್ಬರೂ ಕೂಡಾ ವಿಪರೀತ ಸಂಕಷ್ಟಕ್ಕೆ ಒಳಗಾದರು .ಆರಿಫ್ ಪಾಪ! ‘ನಾನ್ಯಾಕೆ ಹೊರಹೋಗಲಿ , ನಮ್ಮಪ್ಪನ ಮನೆಯಲ್ಲವಾ . . . . .  ಬೇಕಾದರೆ ನೀವೇ ಹೋಗಿ  ’  ಎಂದು ಹೇಳಲಿಲ್ಲಾ . ಆದರೆ ಕೊನೆಗೆ ಆರಿಫ್ ಮತ್ತು ಸಾದತ್ ಒಳಗೊಳಗೇ ಅದೇನು ಮಾತನಾಡಿಕೊಂಡರೋ ತಿಳಿಯದು . ಹೆಂಡತಿಯೆದುರು ಆದ ಮುಖಭಂಗ , ಅವಮಾನ ವೆಲ್ಲವನ್ನೂ ಸಹಿಸಿಕೊಂಡು ಮೂರು ದಿನಗಳೊಳಗೆ ಮನೆ ಬಿಟ್ಟು ಅದೇ ಮೊಹಲಾದ್ಲ ಎರಡನೇ ತಿರುವಿನಲ್ಲಿ ಬಾಡಿಗೆ ಮನೆಯೊಂದನ್ನು ಹಿಡಿದ .
     ಆರಿಫ್‍ನ ಪ್ರಸಂಗ ಆ ಮನೆಯ ಒಬ್ಬೊಬ್ಬ ವ್ಯಕ್ತಿಯ ಮೇಲೂ ವಿಭಿನ್ನ ಪರಿಣಾಮವನ್ನು ಬೀರಿತು .ಮೂವರು ಮಕ್ಕಳು ಕೂಡಿ ತಮ್ಮ ತಾಯಿಯ ವರ್ತನೆಯ ಬಗ್ಗೆ ಮೆಲುದನಿಯಲಿ ಚರ್ಚಿಸಿದರು . ಅವರಿಗೆ ಆರಿಫ್ ಚಿಕ್ಕಪ್ಪನ ಬಗ್ಗೆ ತುಂಬಾ ಪ್ರೀತಿ ಇತ್ತು . ಹೀಗಾಗಿ , ಅವಳ ವರ್ತನೆಯ ಬಗ್ಗೆ ತೀವ್ರ ಅಸಮಾಧಾನವು ಕೂಡಾ ಸಹಜವಾಗಿಯೇ ಇತ್ತು .  ಸನಾಳ ಕಿಡಿಗೇಡಿ ಬುದ್ಧಿಗೆ ಹೊಳೆದ ಮಾತನ್ನು ಅವಳು ಆಡಿಯೇ ಬಿಟ್ಟಳು ,
“ ಇನ್ನೇನು . . .ನಿನ್ನ ಮದುವೆಯಾದ ಮೇಲೆ ನೀನೂ ಕೂಡಾ ನಿನ್ನ ಹೆಂಡತಿಯ ಜೊತೆಯಲ್ಲಿ ಹೀಗೆಯೇ ಮೂಟೆ ಕಟ್ಟಬೇಕು ”   ಅಜೀಮ್‍ಗೆ ಒಳಾಂತರದಲ್ಲಿ ಭಯಮಿಶ್ರಿತ ವಿಷಾದ ಮೂಡಿದ್ದು , ಏನನ್ನೂ ಪ್ರತಿಕ್ರಿಯಿಸಲಿಲ್ಲ . ಬದಲಿಗೆ ಅವಳತ್ತ ದೀರ್ಘ ದೃಷ್ಟಿಯೊಂದನ್ನು ಬೀರಿದ. ಆದರೆ ಆಸಿಮಾ ಆತನ ನೆರವಿಗೆ ಬಂದಳು  
“ಬಿಡ್ತು ಅನ್ನು ; ಆಮೆನ್‍ನ ಫರಿಶ್ತಗಳು . . . . ಆಮೆನ್ ಅಂದರೆ ಕಷ್ಟ . ಇಂತಹ ದುರ್ದಿನ ಯಾರಿಗೂ ಬರುವುದು ಬೇಡ  ” ಎಂದು ವಯಸ್ಸಿಗೆ ಮೀರಿದ ಬುದ್ಧಿವಾದವನ್ನು ಹೇಳಿದಳು . ನಂತರ ಅಜೀಮ್ ಮೌನವನ್ನು  ಮುರಿದು ಅವರೊಡನೆ ಗುಸುಗುಸು ನಡೆಸಿದ . ಕೊನೆಗೆ ಅವರ ಸೋದರತ್ತೆಯಂದಿರು ಸಿದ್ಧ ಪಡಿಸಿದ ರಾಜಿ ಸೂತ್ರದಂತೆ ‘ ಪಾಪ ! ಭಾಬಿಗೆ ಹೈ ಬಿ.ಪಿ . ಅದಕ್ಕೆ ಒಮ್ಮೊಮ್ಮೆ  ಹೀಗಾಡ್ತಾರೆ ; ಆದರೆ ಹೃದಯ ತುಂಬಾ ಒಳ್ಳೆಯದು ’ಎಂಬ ಉಕ್ತಿಯನ್ನು ಅನ್ವಯಿಸಿ ,  ‘ಪಾಪ ! ಅಮ್ಮಿ ಒಳ್ಳೆಯವರು . . . . . ’ ಮುಂತಾಗಿ ಪೂರ್ತಾ ವಾಕ್ಯವನ್ನು ಹೇಳಿ ಆಕೆಯ ಹೃದಯದ ಬಗ್ಗೆ ಸರ್ಟಿಫಿಕೇಟ್ ನೀಡಿ ,  ಇನ್ನೇನೂ ದಾರಿ ಕಾಣದೆ  ಆಕೆಯನ್ನು ಮಾಫಿ ಮಾಡಿ ರಾಜಿಯಾಗಿ ಬಿಟ್ಟಿದ್ದರು .ಅಷ್ಟೇ ಅಲ್ಲದೆ.    ಆರಿಫ್ ಚಿಕ್ಕಪ್ಪನ ಮೋರೆಯನ್ನು ನೋಡಲು ಅವರಿಗೆ ಅತೀವ ನಾಚಿಕೆ ಎನಿಸಿದರೂ ಅವನು ಬೇರೆ ಮನೆಯಲ್ಲಿ ಹಾಲುಕ್ಕಿಸಿದ ಸಂದರ್ಭದಲ್ಲಿ ಅವನು ಕರೆದಿದ್ದ ಊಟಕ್ಕೆ ಅವರೆಲ್ಲಾ ಹೋಗಿದ್ದರು. ಶಮೀಮ್ ಬಾನು ಮಾತ್ರ ಹೋಗಿರಲಿಲ್ಲಾ . ವಿನಾ ಕಾರಣ ಆಕೆ ಹಲವಾರು ದಿನ ಆರಿಫ್ ಮತ್ತವನ ಹೆಂಡತಿಯೊಡನೆ ಮಾತು ಕಥೆಯನ್ನು ನಿಲ್ಲಿಸಿದ್ದು , ಮತ್ತೆ ಏನೂ ನಡೆದೇ ಇಲ್ಲವೇನೋ ಎನ್ನುವಷ್ಟು ನಿರಾಳವಾಗಿ ಅವರೊಡನೆ ಸಾಮರಸ್ಯವನ್ನು ಸಾಧಿಸಿಕೊಂಡು ಬಿಟ್ಟಳು .
     ಆದರೆ , ಈ ಬಗ್ಗೆ ತೀರಾ ನೊಂದವನು ಮಾತ್ರ ಸಾದತ್ . ಅವನು ತನ್ನನ್ನು ತಾನೇ ನೂರಾ ಒಂದನೆಯ ಬಾರಿ ಹಳಿದುಕೊಂಡ . ತಾನು ಕೈಲಾಗದವನು ಎಂದು ತನ್ನ ಮೇಲೆ ತಾನೇ ದೋಷವನ್ನು ಹೊರಿಸಿ ಕೊಂಡ . ಅವಳ ಮೆನೋಪಾಸ್ ಎಂಬ ನೆಪವನ್ನು ತಾನೇ ಸೃಷ್ಟಿಸಿಕೊಂಡು ಅದರಡಿಯಲ್ಲಿ ಎಲ್ಲಾ ಸಂಬಂಧಗಳನ್ನು ಮತ್ತು ಮಾನವೀಯತೆಯನ್ನು ಗಾಳಿಗೆ ತೂರಿ , ತನ್ನ ದೌರ್ಬಲ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಹೇಡಿ ಎಂದು ತನ್ನನ್ನು ತಾನೇ ಜರಿದುಕೊಂಡ . ಆರಿಫ್‍ನ ಮತ್ತು ಅವನ ಪತ್ನಿಯ ಎದುರಿಗೆ ತಾನು ಕುಬ್ಜನಾದೆ ಮತ್ತು ಅu್ಣ ಎಂಬ ತನ್ನ ಪಾತ್ರ ನಿರ್ವಹಣೆಯಲ್ಲಿ ತಾನು ಸೋತು ಹೋದೆ  ಎಂಬ ನಿರಂತರ ಸೋಲಿನ ಭಾವದೊಡನೆ ಅವನು ಅಪಾರ ಅವಮಾನವನ್ನು  ಅನುಭವಿಸಿದ .  ಈ ನಿರ್ವೀಣ್ಯತೆಯ ಹಿನ್ನೆಲೆಯಲ್ಲಿ ಗತ ವೈಭವದ ಪುರುಷಾಧಿಕಾರವನ್ನು ಮರಳಿ ಪಡೆಯಬೇಕೆಂಬ ಹಟ ಹುಟ್ಟಿ , ಅವಳನ್ನು ಹಿಂದಿನಂತೆ ತನ್ನ  ಆಜ್ಞಾ ಧಾರಕಳನ್ನಾಗಿ ಮಾಡಿಯೇ ತೀರಬೇಕೆಂದು ತೀರ್ಮಾನಿಸಿದ . ಆದರೆ ತೀರ್ಮಾನವನ್ನು ಕಾರ್ಯಗತಗೊಳಿಸುವ ಅವಕಾಶಗಳನ್ನು ಬೇಕೆಂತಲೇ ಕಳೆದುಕೊಂಡ . ಹೀಗಾಗಿ ,ತನ್ನ ಬಗ್ಗೆ ಇನ್ನಷ್ಟು ಜಿಗುಪ್ಸೆಯನ್ನು ಬೆಳೆಸಿಕೊಂಡ . 
     ಈ ಹಿಂಸೆಯನ್ನು ತಾನು ಸಹಿಸಲು ಸಾಧ್ಯವೇ ಇಲ್ಲ ಎಂದು ಅವನಿಗೆ ಅಂತಿಮವಾಗಿ ಮನದಟ್ಟು ಆಗುವ ವೇಳೆಗೆ , ತಾನು ಯಾವುದೋ ಭಯದಿಂದ ಅವಳಿಗೆ ಮುಖಾಮುಖಿಯಾಗಲು ಹೆದರುತ್ತಿದ್ದೇನೆ ಎಂದು ಅರಿವಾಗತೊಡಗಿತು .   ಆದರೆ , ಯಾವ ಭಯ. . . . ಎಂಬ ಪ್ರಶ್ನೆಗಳಿಗೆ ಅವನಿಗೆ ಉತ್ತರ ದೊರಕಲಿಲ್ಲಾ . ಭಯದ ಕಾರಣದ ಅನ್ವೇóಣೆಗೆ ತೊಡಗಿದ ಅವನು  ವಿಷಾದದ ಚೌಕಟ್ಟನ್ನು ತನ್ನ ಸುತ್ತಲೂ ಕಟ್ಟಿಕೊಂಡ . ಆ ಕೃತ್ರಿಮ ಗೋಡೆಗಳನ್ನು  ತಾನು ಎಂದು ಒಡೆಯಲು  ಸಾಧ್ಯವೋ ಅಂದೇ ತನಗೆ ಈ ಹಿಂಸೆಯಿಂದ ಬಿಡುಗಡೆಯಾಗುವುದು ಎಂದು ತನಗೆ ತಾನೇ ನಿಬಂಧನೆಗಳನ್ನು ಒಡ್ಡಿಕೊಂಡ . ಅವನ ಬದುಕಿನ ಸೂರ್ಯ ಕಾವನ್ನು ಕಳೆದುಕೊಂಡು  ಅವನು  ಒಳಗೊಳಗೇ ಕುಸಿಯಲಾರಂಭಿಸಿದ .
    ಸಂಜೆಯ ನಮಾಜಿಗೆ ಹೊರಡಲೆಂದು ಅದೊಂದು ಸಂಜೆ ಅವನು ಟೋಪಿಗಾಗಿ ಹುಡುಕಾಟ ನಡೆಸಿದ್ದ . ಸಾಮಾನ್ಯವಾಗಿ ಅವನ ಟೋಪಿ ಅವನ ಕಣ್ಣೆದುರಿಗೆ ಕಾಣುವಂತೆ ಇರುತ್ತಿತ್ತು . ಇಂದು ಅದೆಲ್ಲಿ ಬಿದ್ದಿತ್ತೋ . . . . . ಅವನ ಅಸಹನೆ ಹೆಚ್ಚುತ್ತಿತ್ತು .ಮಸೀದಿಯಿಂದ ಅಜಾನ್ ( ನಮಾಜಿನ ಹೊತ್ತಿಗೆ ಮಸೀದಿಯಿಂದ ಮಾಡುವ ಕರೆ ) ಇನ್ನೇನು ಮುಗಿಯುವ ಹಂತದಲ್ಲಿತ್ತು . ಅವನು ಟೋಪಿಯನ್ನು ತಲೆಯ ಮೇಲಿಟ್ಟು , ಓಡಿದಲ್ಲಿ ಮಾತ್ರ ಜಮಾತ್‍ನೊಡನೆ ನಮಾಜ್ ಮಾಡುವ ಅವಕಾಶ ಸಿಗುತ್ತಿತ್ತು . ಆದರೆ ಈ ಟೋಪಿ . . . . . ‘ನನ್ನ ಟೋಪಿ ಎಲ್ಲಿ ? ’ ತನಗೆ ತಾನೇ ಎಂಬಂತೆ ಅವನು ಜೋರಾಗಿ ಕೂಗು ಹಾಕಿದ . ಅವನಿಗೆ ಉತ್ತರಿಸುವವರ್ಯಾರು . . .. . ಯಾರಾದರೂ ಉತ್ತರಿಸಬೇಕಿತ್ತು ಎಂದು ಅವನಿಗನ್ನಿಸಿತು . . . . ಕೊನೆಗೆ ಅವಳು ಬಯ್ದು ಟೋಪಿಯನ್ನು ತಂದು ಬಿಸಾಕಿದ್ದರೂ ಅವನಿಗೆ ಒಂದಿಷ್ಟು ನೆಮ್ಮದಿಯೆನಿಸುತ್ತಿತ್ತು . ಉಳಿದ ಎಲ್ಲಾ ಹೊತ್ತಿನ ನಮಾಜಿನಲ್ಲಿ ಅಜಾನ್ ಆದ ನಂತರ ನಮಾಜಿಗೆಂದು ಜನರು ಸೇರಲು ಒಂದರ್ಧ ಗಂಟೆಯಾದರೂ ಕಾಲಾವಕಾಶ ಇರುತ್ತದೆ . ಸಂಜೆಯ ನಮಾಜಿಗೆ ಈ ರೀತಿಯ ಕಾಲಾವಕಾಶ ಇರುವುದಿಲ್ಲ . ಇತ್ತ ಅಜಾನ್ ಆದ ಕೂಡಲೇ ನಮಾಜ್‍ಗೆ ಜನರು  ಸೇರಿಯೇ ಬಿಡುತ್ತಾರೆ  ಮುಸ್ಸಂಜೆಯ ಆ ಪವಿತ್ರ ಹೊತ್ತಿನಲ್ಲಿ ಅವನಿಗೆ ಪ್ರಾರ್ಥನೆಯ ಅವಕಾಶವೂ ಇಲ್ಲ ಎಂದರೆ  . . . . ಅವನಿಗೆ ಮೈ ಪರಚಿಕೊಳಬೇಕೆನಿಸಿತು . ಅವಳು ಅವನೆದುರಿಗೇ ಹಾಯಾಗಿ ಕಾಲು ನೀಡಿಕೊಂಡು ಕುಳಿತಿದ್ದು , ಟಿವಿಯಲ್ಲಿ ಮೈ ಮರೆತಿದ್ದಳು .
     ‘ ಆ ದರಿದ್ರ ಟೀವಿಯನ್ನು ಬಂದ್ ಮಾಡ್ತೀಯಾ ? .. ಅಜಾನ್ ಆಗುತ್ತಿದ್ದರೂ ಒಂದಿಷ್ಟೂ ವಾಲ್ಯೂಮ್ ಕಡಿಮೆ ಮಾಡ್ತಿಲ್ಲವಲ್ಲಾ . . . . . ’  ಎಂದವನು ‘ ನಿನಗಾಗಿ ಅಲ್ಲಾಹನು ವಿಶೇಷ ನರಕವನ್ನು ಸೃಷ್ಟಿಸಿದ್ದಾನೆ ’ ಎಂದು  ನುಡಿಯಲು ನಾಲಿಗೆಯ ತುದಿಯವರೆವಿಗೂ ಬಂದಿದ್ದ ಮಾತನ್ನು ಹಾಗೆಯೇ ತಡೆ ಹಿಡಿದ .  ಅವಳಾದರೋ ಅವನತ್ತ ತಿರುಗಲೂ ಇಲ್ಲ ಕ್ಯಾರೇ ಅನ್ನಲೂ ಇಲ್ಲ . ತನ್ನ ತಲೆಯ ಮೇಲಿನ ಟೋಪಿಗಾಗಿ ಪರದಾಡುತ್ತಿರುವ ಅವನ ವರಸೆಯನ್ನು ನೋಡಿ ಅವನ ಮೇಲೆ ದಯೆ ತೋರುವಂತೆ  ಮೌನವಾಗಿ ತನ್ನ ಕಾಯಕದಲ್ಲಿ ಮಗ್ನಳಾದಳು .ಇನ್ನೇನು ಅವನು ಆಸ್ಫೋಟಗೊಳ್ಳಬೇಕು . . . .ಅವಳ ಕಪಾಳಕ್ಕೆ ಒಂದು ಬಾರಿಸಬೇಕು . . . . ಆದರೆ ಸಾಧ್ಯವಾಗುತ್ತಿಲ್ಲ . . . . ಯಾಕೆ ಸಾಧ್ಯವಾಗುತ್ತಿಲ್ಲ  . . . ಅಗೋಚರ ಭಯದ ಎದುರಿನಲ್ಲಿ ಅವನು ಹಿಂಡಿ ಹಿಪ್ಪೆಯಾದಂತೆನಿಸಿ . . . . ವಿಪರೀತವಾಗಿ ಬೆವರುತ್ತಾ ಇನ್ನೇನು  ಕುಸಿದು ಬೀಳಬೇಕು . . . ಎಂದು ಹಾಗೆ ಕುಸಿದು ಬೀಳಬೇಕಾದರೆ ಆಸರೆಗೆ ಕುರ್ಚಿಯೊಂದಾದರೂ ದೊರಕಿದರೆ ಸಾಕೆಂದು ಅವನು ಕಣ್ಣಾಡಿಸುತ್ತಿರುವಾಗಲೇ . . . . . ಅವನ ಅಗೋಚರ ಭಯವು ಅವನ ಕಣ್ಣಿಗೆ  ನಿಧಾನವಾಗಿ ಗೋಚರವಾಯಿತು . ಬಾಗಿದ ಬೆನ್ನು , ಸುಕ್ಕುಗಟ್ಟಿದ ಚರ್ಮ , ಒಣಗಿದ ಕೈಕಾಲು ಗಳು ಆದರೂ ಮೋರೆಯ ಮೇಲೆ ವಿಲಕ್ಷಣವಾದ ಹೊಳಪು , ನೆರೆಗಟ್ಟಿದ ಕೂದಲು . . . . ತಲೆಯ ಮೇಲೆ  ಬಿಳಿ ಸೆರಗನ್ನು  ಹೊದ್ದ ಹಿರಿಯ  ಜೀವವೊಂದು ಸಂಜೆಗತ್ತಲ ಕೋಪೋದ್ರಿಕ್ತ ವಾತಾವರಣದಲ್ಲಿ ಮೆಲ್ಲನೆ ಅಡಿಯಿಡುತ್ತ ಬಂದು ಅವನೆದುರಿಗೆ ಟೋಪಿಯನ್ನು  ಚಾಚಿದಾಗ ಅವನು ಅಚೇತನನಾದ .
          ಹ್ಹಾ . . . ಈ ಕಾರಣಕ್ಕಾಗಿ ತಾನೇ ತಾನು ಶಮೀಮ್ ಬಾನುವಿನ ಎಲ್ಲಾ ಹಿಂಸಾಚಾರವನ್ನು ಸಹಿಸುತ್ತಿರುವುದು  . .. . ಓ ಅಲ್ಲಾಹನೇ ನನ್ನನ್ನು ಎಂತಹ ಪರೀಕ್ಷೆಯಲ್ಲಿ ಕೆಡವಿದೆ . . .
    ‘ಇದೇ ತಾನೇ ನಿನ್ನ ಟೋಪಿ . . . . ತಗೋಪ್ಪಾ  ನಮಾಜಿಗೆ ಹೋಗು ಬೇಗ. . . . ನಾನೂ ಕೂಡಾ ನಮಾಜಿಗೆ ಹೋಗಬೇಕು ’ ಬಲಗೈಯಲ್ಲಿ ಅವನ ಹಳೆಯ ಟೋಪಿಯನ್ನು ಮುಂಚಾಚಿದವಳ ಎಡಗೈಯಲ್ಲಿ ಅವಳಷ್ಟೇ ಜೀರ್ಣವಾದ ಜಾನಮಾಜ್ ( ನಮಾಜ್ ಮಾಡುವಾಗ ಹಾಸಿಕೊಳ್ಳುವ ಚಾಪೆ )ಇತ್ತು .
    ‘ಅಯ್ಯೋ !  ಅಮ್ಮಾಜಿ  ನೀವು ಯಾಕೆ ತೊಂದರೆ ತಗೊಂಡಿರಿ ನಾನು ಹುಡುಕಿ ಕೊಳ್ಳುತ್ತಿದ್ದೆ’  ಎಂದು ಹೇಳಿದರೂ ಅವಳನ್ನು ಸಮೀಪಿಸಿ ಅವಳ ಕೈಯಿಂದ ಇಸಿದುಕೊಂಡ ಹಳೆಯ ಟೋಪಿಯನ್ನೇ ತನ್ನ ತಲೆಗೇರಿಸಿದ .ಬಿಳಿಯ ಬಣ್ಣ ಕಳೆದು  ಮಾಸಲು ಹಳದಿ ಬಣ್ಣಕ್ಕೆ ತಿರುಗಿದ್ದ ಆ ಟೋಪಿ ಅವನ ತಲೆಗೇರಿತು . ಆಕೆ ಮಮತೆಯಿಂದ ಅವನ ತಲೆಯ ಮೇಲೆ ಕೈ ಇಟ್ಟು , ಅವನಿಗೆ ಆಶೀರ್ವಚನಗಳನ್ನು ಹೇಳುತ್ತಾ  , ನಿಧಾನವಾಗಿ ಕೋಣೆಯತ್ತ ನಡೆದಳು .
    ದಾಪುಗಾಲನ್ನಿಟ್ಟ ಸಾದತ್ ಮಸೀದಿಯತ್ತ ಓಡತೊಡಗಿದ .ಮೊದಲು ಆಕೆಯನ್ನು ಅವನು ಅಮ್ಮಾಜಿ ಎಂದು ಕರೆಯುತ್ತಿದ್ದ . ಆದರೆ , ಅವನ ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಅವರು ಆಕೆಯನ್ನು ಬೀ ದಾದಿ ಎಂದು ಕರೆಯಲಾರಂಭಿಸಿದರು . ಯಾರು ಹೇಳಿಕೊಟ್ಟರೋ ಏನೋ  . . . . ಮುಂದೆ ಎಲ್ಲರೂ ಸಾದತ್ ಕೂಡಾ ಬೀದಾದಿ ಎಂತಲೇ ಕರೆಯತೊಡಗಿದ . ಅವಳು ಅವನ ಸೋದರತ್ತೆ . ಬೀದಾದಿಗೆ ಬಾಲ್ಯ ವಿವಾಹವಾಗಿತ್ತು . ಮದುವೆಯಾದ ಒಂದು ತಿಂಗಳಿಗೇ ಆಕೆಯ ಪತಿಯ ಮರಣವಾಯಿತಂತೆ . ಹಾವು ಕಡಿಯಿತು ಎಂದು ಯಾರು ಯಾರೋ ಕಾರಣವನ್ನು ನೀಡುತ್ತಿದ್ದರು . ಆದರೆ , ಅವ ಹೇಗೆ ಸತ್ತ ಎಂದು ಅವಳಿಗೆ ಕೊನೆಯವರೆವಿಗೂ ಗೊತ್ತಾಗಿರಲಿಲ್ಲ .ಗಂಡ ಸತ್ತ ಒಂದು ವರ್ಷಕ್ಕೆ ಅವಳು ಮೈನೆರೆದಳು . . . . . ತನ್ನ ತವರು ಮನೆಯಲ್ಲಿ . ಮುಸ್ಲಿಮರಲ್ಲಿ ನಿರ್ಬಂಧವೇನೂ ಇರದಿದ್ದರೂ ಅವರ ಕುಟುಂಬದಲ್ಲಿ ಮರುಮದುವೆಯ ಸಂಪ್ರದಾಯವಿರಲಿಲ್ಲ .ಹೀಗಾಗಿ ಪ್ರತಿ ಮಾಸಿಕದಲ್ಲಿಯೂ ಅವಳ ದೇಹ ಪೊರೆಕಳಚಿ . . . ಮಣ್ಣು ಪಾಲಾಯಿತು . ಅವಳ ದೇಹ, ಮನಸ್ಸು ,ಕನಸು ಯಾವುದೂ ಫಲಿಸಲಿಲ್ಲ. ಅವಳು ಚಿರಕನ್ಯೆಯಾಗಿ ಉಳಿದಳು . ನೆರಳಿನಂತೆ ಬದುಕಿ ಅಣ್ಣನ ಕುಟುಂಬಕ್ಕೆ ನೆರಳಾದಳು . ಅವಳ ಅತ್ತಿಗೆಯ ಅಂದರೆ , ಸಾದತ್‍ನ ತಾಯಿಯ  ಕಾಯಿಲೆ – ಕಸಾಲೆಗೆ ಒದಗುತ್ತಾ ಒಂದಿನಿತೂ ಬೇಸರಿಸದೆ ಮಲ ಮೂತ್ರವನ್ನು ಬಳಿದಳು . . . ಅವನು ಒಮ್ಮೊಮ್ಮೆ ಆಲೋಚಿಸುವುದಿತ್ತು. .. .. .ತಾಯಿಯ ಕಾಯಿಲೆಗಾಗಿಯೇ ಅವಳು ಸೃಷ್ಟಿಯಾದಳೇ ಅಥವಾ ಅವಳನ್ನು ಕಂಡು ತನ್ನ ತಾಯಿ  ಕಾಯಿಲೆ ಬಿದ್ದಳೇ . ತನ್ನ ಅಮ್ಮಿ ಹೇಳಿದ ಕೆಲಸವನ್ನು , ಹೇಳದೆ ಹೊರೆ ಬಿದ್ದ ಕೆಲಸಗಳನ್ನು ಹುಡುಕಿ ಹುಡುಕಿ ಮಾಡಿದಳು . ರಾಶಿ ರಾಶಿ ಕಸ ಮುಸುರೆಯನ್ನು ಎಂದೂ ದಿಟ್ಟಿಸಲಿಲ್ಲ . . . ತಲೆ ಬಗ್ಗಿಸಿ ತೊಳೆದಳು.  ಆಮನೆಗೆ ಎಂದೂ ಬೀಗವನ್ನು ಹಾಕಿದ್ದ ನೆನಪೇ ಇರಲಿಲ್ಲ ಅವನಿಗೆ. . . . ಅವಳೇ ಬೀಗವಾದಳು . ಯಾವಾಗ ಬಂದು ಬಾಗಿಲು ತಟ್ಟಿದರೂ ಅವನಿಗೆ ಬಾಗಿಲನ್ನು ತೆರೆಯುತ್ತಿದ್ದವಳು ಅವಳೇ . ರಂಜಾನಿನಲ್ಲಿ ಕೊಡಿಸಿದ ಒಂದು ಜೊತೆ ಬಟ್ಟೆಯನ್ನು ಶುಭ್ರವಾಗಿ ಒಗೆದು ನೀಟಾಗಿ ಮಡಚಿ ತನ್ನ ಕಬ್ಬಿಣದ ಟ್ರಂಕಿನಲ್ಲಿಟ್ಟಳು . ಆ ಟ್ರಂಕಿನ ಮೇಲೆ ತನ್ನ ಮದುವೆಯಲ್ಲಿ ಕೊಟ್ಟಿದ್ದ ಜಾನಮಾಜನ್ನು ಮತ್ತು ನಮಾಜಿನ ಚಾದರವನ್ನು ಮಡಚಿ ಇಡುತ್ತಿದ್ದಳು . ನಮಾಜಿನ ಚಾದರದಲ್ಲಿ ಆಗಾಗ್ಗೆ ಕೆಲವು ಮಲ್ಲಿಗೆ ಹೂವುಗಳು ಬಿರಿಯುತ್ತಿದ್ದವು .

      ಇದರೊಟ್ಟಿಗೆ ಅವಳು ಹುಳ ಹುಪ್ಪಟೆಯನ್ನು ಒಂದಿಷ್ಟೂ ಕರುಣೆ ಇಲ್ಲದೆ ಬಡಿದು ಸಾಯಿಸುತ್ತಿದ್ದಳು . ಹೀಗಾಗಿ ಹೆಂಗಸರು ಮತ್ತು ಮಕ್ಕಳಿಗೆ ಆಕೆ ಆಪದ್ಬಾಂಧವಳಾಗಿದ್ದು , ಬಹಳ ಜನಾನುರಾಗಿಯಾಗಿದ್ದಳು . ಯಾರಾದರೂ ‘ಬೀದಾದಿ’ ಎಂದು ಆರ್ತ ನಾದ ಹೊರಡಿಸಿದರೆ ಸಾಕು . . . .ಕ್ಷಣಾರ್ಧದಲ್ಲಿ ಅವಳು ಪೊರಕೆಯೊಂದಿಗೆ ಹಾಜರಾಗುತ್ತಿದ್ದಳು . ಹೀಗೆ ಹುಳು ಹುಪ್ಪಟೆಗಳನ್ನು ಬಡಿಯುತ್ತಾ . . . ಸಾಯಿಸುತ್ತಾ ಅವಳು ಒಂದು ಸಾರಿ ತನ್ನ ಪೊರಕೆಯನ್ನು ಬದಿಗೆ ಸರಿಸಿ ಸೀಳಿದ್ದ ಸೌದೆಯನ್ನು ಕೈಗೆತ್ತಿಕೊಂಡು ಒಂದು ಹಾವನ್ನು ಬಡಿದು ಸಾಯಿಸಿಯೇ ಬಿಟ್ಟಳು . ರಕ್ತ ಸಿಕ್ತವಾಗಿ ಗಾಯಗೊಂಡು  ಸತ್ತು ಬಿದ್ದಿದ್ದ ಹಾವನ್ನು ಕಂಡು ಅನೇಕ ಗಂಡಸರು ಕೂಡ ಹೆದರಿದ್ದರು . ನಾರಹಾವು ಎಂದು ಕೆಲವರು , ಕೊಳಕುಮಂಡಲ ಎಂದು ಕೆಲವರು ಅ ಸತ್ತ ಹೆಸರಿಗೆ ನಾಮಕರಣ ಮಾಡುತ್ತಿದ್ದರೆ , ಅವಳು ಮಾತ್ರ ‘ಈ ಹಾವುಗಳಿಗ್ಯಾಕೆ ಕಚ್ಚುವ ಕೆಲಸ . . . . . ಗಂಡಸರನ್ನು ಸಾಯಿಸುವ ಕೆಲಸ. . .’ ಎಂದು ರೊಚ್ಚಿನಿಂದ ಇನ್ನೂ ನಾಲ್ಕಾರು    ಸಾರಿ ಬಡಿದಿದ್ದಳು . ಆಗ ಅವಳ ಕಣ್ಣು ತುಂಬಾ ನೀರಿತ್ತು ಎಂದು ಕೆಲವರು ತರ್ಕಿಸಿದ್ದರು  .
    ಅಂತಹ ಬೀದಾದಿಯ  ನೇರ ಮೇಲ್ವಿಚಾರಣೆಯಲ್ಲಿ ಶಮೀಮ್ ಬಾನು  ಪಳಗಿದ್ದು . ಮೊದ ಮೊದಲು ಬೀದಾದಿಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಆಕೆ ಕಾಲ ಕಳೆದಂತೆ , ಉಚಾಯಿಸಿ ಮಾತನಾಡುವುದನ್ನು ಆರಂಭಿಸಿದ್ದಳು . ಸಾದತ್‍ನ ಚಿಂತೆ ಕೂಡಾ ಆರಂಭವಾದದ್ದು ಇಲ್ಲಿನಿಂದಲೇ . ತಮಗಾಗಿ ಜೀವ ತೆಯ್ದ ಬೀದಾದಿಯನ್ನು ಶಮೀಮ್ ಎಲ್ಲಿ ನಿಂತ ಕಾಲಲ್ಲಿಯೇ ಹೊರಡಿಸಿ  ಅಟ್ಟುವಳೋ . .. . .  ಆರಿಫ್‍ನಂತೆ . …. ಅಟ್ಟುವುದಾದರೂ ಎಲ್ಲಿಗೆ ?  ಅವನಿಗಾದರೋ ಪರವಾಗಿಲ್ಲ ... ಉದ್ಯೋಗವಿದೆ ,ಹೆಂಡತಿ ಇದ್ದಾಳೆ . ಬೀದಾದಿಯ ಜೊತೆಯಲ್ಲಿ ತಾನಲ್ಲದೆ ಇನ್ಯಾರಿದ್ದಾರೆ ?  ಆಕೆ ಹಾಗೇನಾದರೂ ನಡೆದುಕೊಂಡರೆ . . . . ಅದನ್ನು ನೆನಸಿಕೊಂಡೇ ಅವನಿಗೆ ನಡುಕ ಬಂದಂತಾಗುತ್ತಿತ್ತು . ‘ಎಲ್ಲಾ ಅಲ್ಲಾಹನಿಚ್ಛೆ ’ಎಂದು ಹೇಳಿಕೊಂಡು ಸಮಾಧಾನ ಪಟ್ಟರೂ , ನೆಮ್ಮದಿ ಅವನಿಂದ ದೂರವಾಗಿತ್ತು .
    ಅದೊಂದು ದಿನ . . . . ಅಜೀಮ್ ಹೊರಗಿನಿಂದ ಕೂಗು ಹಾಕಿದ , ‘ ಏ. . . ಸನಾ . . . ಸನಾ . ..ಎಲ್ಲಿದ್ದೀಯಾ ’
‘ಬಂದೆ . . .ಬಂದೆ . . . ಏನಾಗಬೇಕೂ ?’
‘ನೀನು ಬರದೇ ಹೋದರೂ ಪರವಾಗಿಲ್ಲ . . . ಒಂದು ಹಳೆ ಬಟ್ಟೆಯನ್ನು ತೆಗೆದುಕೊಂಡು ಬಾ . . . ಬೈಕ್ ಒರೆಸಲು ಬೇಕು ’
‘ಒಂದೇ ನಿಮಿಷ’ಎಂದವಳೇ ಅವಳು ಓಡಿ ಬಂದು ಅವನ ಕೈಗೆ ಒಂದು ಹಳೆ ಬಟ್ಟೆಯನ್ನಿಟ್ಟು ಮಾಯವಾದಳು . ಕೈಯಲ್ಲಿ ಆ ಬಟ್ಟೆಯನ್ನು ಹಿಡಿದ ಅಜೀಮ್‍ಗೆ ಯಾಕೋ ಅನುಮಾನ ಬಂದಿತು . ಆದರೆ , ಅವನು ಕೂಡಾ ಅರ್ಜೆಂಟಿನಲ್ಲಿದ್ದುದರಿಂದ ಮತ್ತು  ಮನಸ್ಸಿಗೆ ಹೆಚ್ಚು ದಣಿವು ಮಾಡಿಕೊಳಬಾರದೆಂಬ ಆಲಸ್ಯದ ಭಾವವೂ ಕೂಡಾ ತಲೆದೋರಿದ್ದರಿಂದ  ಚಕಚಕನೆ ತನ್ನ ಬೈಕನ್ನು ಒರೆಸಿದ ಶಾಸ್ತ್ರವನ್ನು ಮಾಡಿ , ಆ ಬಟ್ಟೆಯನ್ನು   ಬಾಗಿಲ ಬಳಿ ಎಸೆದು ಹೋದ . ಆದರೆ , ಅವನು ಮಧ್ಯಾಹ್ನ ಮನೆಗೆ ಬಂದಾಗ ಗಂಭೀರ  ಅನಾಹುತವೊಂದು ನಡೆದು ಹೋಗಿದೆ ಹಾಗೂ ಆ  ಅವಘಡಕ್ಕೆ  ತಾನೇ ನೇರ ಕಾರಣ ಎಂದರಿವಾಗಲು  ಅವನಿಗೆ ತಡವಾಗಲಿಲ್ಲ .
     ಅಂಗಳದಲ್ಲಿ ನಿಂತಿದ್ದ  ಬೀದಾದಿ ಮತ್ತು ಆಕೆಯೆದುರಿಗೆ ತನ್ನ ತಾಯಿ . ಎಂದೂ ಅಳದ ಬೀದಾದಿ ಅತ್ತೂ ಅತ್ತೂ ಕಣ್ಣ ಕೋಡಿ ಹರಿದಿತ್ತು . ಆಕೆಯ ಕೈಯಲ್ಲಿ ಅವನು ಬಿಸಾಡಿ ಹೋಗಿದ್ದ ಹಳೆ ಬಟ್ಟೆ . . . ಆ ಹಳೆ ಬಟ್ಟೆಗೆ ತಗುಲಿದ್ದ ಬೈಕಿನ ಕೊಳೆಯನ್ನು ಮತ್ತು ಕಲೆಗಳನ್ನು ಹೋಗಲಾಡಿಸಲು   ಆಕೆ ತನ್ನ ಅಶಕ್ತ ಕೈಗಳಿಂದ ಉಜ್ಜಿ ಉಜ್ಜಿ ಇನ್ನಿಲ್ಲದ ಪ್ರಯತ್ನವನ್ನು ಪಡುತ್ತಿದ್ದಳು . ಅವಳ ಬದಿಯಲ್ಲಿ ವಿಷಣ್ಣಳಾಗಿ ನಿಂತಿದ್ದ ಶಮೀಮ್ ಬಾನು ಅತೀವ ದುಃಖದಿಂದ ಅವಳೆದುರಿಗೆ ಹೊಸದಾದ ರೇಷ್ಮೆಯ ಚಾಪೆಯನ್ನು  ಹಿಡಿದುಕೊಂಡು ನಿಂತಿದ್ದು , ಆಕೆಗೆ ಸಮಾಧಾನ ಮಾಡುತ್ತಿದ್ದಳು .
     ‘ ಇಗೋ. . . ಇದು ಹೊಸದಾದ  ಜಾನಮಾಜ್ . ..ಇದನ್ನು ತಗೋಳಿ ಬೀದಾದಿ’
ಬೀದಾದಿ ಇನ್ನಷ್ಟು ಕಣ್ಣೊರೆಸಿಕೊಳ್ಳುತ್ತಾ   ಬಿಕ್ಕಳಿಸುತ್ತಿದ್ದಳು ,’ ಬೇಡಾ . . .ನನಗೆ ಬೇಡಾ . ..  ಸಾಯೋ  ಮುದುಕಿಗೆ ಅದೆಲ್ಲಾ ಯಾಕೆ ’
‘ಬಿಡ್ತು ಅನ್ನಿ . . ಸಾಯಲಿ ನಿಮ್ಮ ದುಷ್ಮನ್‍ಗಳು. . . . ಇದು ಅಂತಿಂತಹ ಜಾನಮಾಜ್ ಅಲ್ಲಾ . . .ನನ್ನ ಅಕ್ಕ ಹಜ್‍ಗೆ ಹೋಗಿದ್ದಾಗ ನನಗೋಸ್ಕರವಾಗಿ ಹುಡುಕಿ ತಂದಿರೋದು . ಅಲ್ಲಿಯೇ ಝಮ್ ಝಮ್ ನೀರನ್ನು ಪ್ರೋಕ್ಷಣೆ ಮಾಡಿ ತಂದಿರೋದು . ನಿಮ್ಮ ದಮ್ಮಯ್ಯ . . . ಈಗ ಇದನ್ನು ತಗೋಳಿ . ..  ಇದರ ಮೇಲೆ ನಮಜ್ ಮಾಡಿ  ’
    ಅಜೀಮ್‍ಗೆ ತನ್ನ ತಪ್ಪಿನ ಅರಿವಾಯಿತು . ಕಳ್ಳ ಮಾಲು ಸಮೇತ ಸಿಕ್ಕಿ ಬಿದ್ದಂತಾಗಿತ್ತು . ಜಾನಮಾಜಿನ ಮೇಲಿನ ಆಯಿಲ್‍ನ ಕಲೆಗಳು ಎಲ್ಲಾ ಕಥೆಯನ್ನು ಹೇಳುತ್ತಿದ್ದವು .
     ಅವನು ಮಧ್ಯೆ ಪ್ರವೇಶಿಸಿ ‘ಅಮ್ಮೀ ’ಎಂದು ಏನನ್ನೋ ಹೇಳಲು ಪ್ರಯತ್ನ ಪಟ್ಟ . ಅವಳ ತೀಕ್ಷ್ಣ ನೋಟದೆದುರು ತತ್ತರಿಸಿ ಸುಮ್ಮನಾದ . ಸನಾ ಎಲ್ಲಿ ಎಂದು ಹುಡುಕಾಟ ನಡೆಸಿದವನಿಗೆ ಎಂದಿನಂತೆ ಅವಳು ಅವಘಡದ ಮುನ್ಸೂಚನೆಯನ್ನು ಪಡೆದು ನಾಪತ್ತೆಯಾಗಿರುವಳೆಂದು ಅನಿಸಿದ ಹಿನ್ನೆಲೆಯಲ್ಲಿಯೇ ಬೆದರಿದ ಆಸಿಮಾಳ ಭಣ ಭಣ ನೋಟ. . . . . ಬೇಕಾದರೆ ತಾನು ಹರಕೆಯ ಕುರಿಯಾಗಲು ಸಿದ್ಧವೆಂಬ ಸಂದೇಶವನ್ನು ನೀಡಿದ್ದು , ಅವನು ಇನ್ನಷ್ಟು ಅಸ್ತವ್ಯಸ್ತನಾದ.
      ‘ಬೇಡಾ ... ..  . ಬೇಡಾ ಅಂತ ಹೇಳಲಿಲ್ಲವೇ ನಾನು?. . . . ನಿನ್ನ ಅಕ್ಕ ತಂದಿದ್ದರೆ ನೀನೇ ಇಟ್ಕೋ ನನಗೆ ಯಾಕೆ ಕೊಡ್ತೀಯಾ ನನ್ನ ಜಾನಮಾಜ್ ನನಗೆ ಸಾಕು ’
ಅದೇನೋ ಅತೀವ ತಾಳ್ಮೆ ಒದಗಿ ಬಂದಿತ್ತು ಶಮೀಮ್ ಬಾನುವಿಗೆ . ‘ನಾನು ನಮಾಜ್ ಮಾಡಿದರೇನು ನೀವು ನಮಾಜ್ ಮಾಡಿದರೇನು . . . . . ಯಾರು ಈ ಕೆಲಸ  ಮಾಡಿದ್ದಾರೋ ತಿಳಿಯದು . . .ಮಕ್ಕಳು ಗೊತ್ತಿಲ್ಲದೆ ಮಾಡಿರಬಹುದು . . .ತೀರಾ ಹಳೆಯದಾಗಿದೆ .. .. . .’
     ‘ ಹೌದೇ  . . ಹೌದೇ ..  ತೀರಾ ಹಳೆಯದಾಗಿದೆಯೇ . . . . ನಾನೂ ಕೂಡಾ ತೀರಾ ಹಳೆಯದಾಗಿದೀನಲ್ಲಾ .’ ಬೀದಾದಿ ಹಟಕ್ಕೆ ಬಿದ್ದವಳಂತೆ ಜಗಳವಾಡತೊಡಗಿದಳು . ಯಾವ ಕಾರಣಕ್ಕೂ ಇದುವರೆವಿಗೂ ಜಗಳವಾಡಿದವಳಲ್ಲಾ . . . ಆ ತುಂಬಿದ ಮನೆಯಲ್ಲಿ ನೆಂಟರಿಷ್ಟರು ಬಂದರು ಎಂದು ಮೂರು ಕೋಳಿಗಳನ್ನು ಕೊಯ್ದರೂ ಶ್ರದ್ಧೆಯಿಂದ ಆಕೆಯೇ ಕ್ಲೀನ್ ಮಾಡಿ  ಗಮ ಗಮ ಸಾರನ್ನು ಕುದಿಸಿದ್ದಾಗ್ಯೂ ಆಕೆಗೆ ಒಂದೇ ಒಂದು ಪೀಸ್  ಸಿಗದಿದ್ದರೂ ಆಕೆ ಜಗಳವಾಡಿದ್ದಿಲ್ಲ ; ಪಾತ್ರೆ ತುಂಬಾ ಪಾಯಸವನ್ನು ಮಾಡಿ ಕೊನೆಗೆ ಒಂದು ಟೀ ಸ್ಪೂನಿನಷ್ಟು ಪಾಯಸ ಕೂಡಾ ಉಳಿಯದಿದ್ದಾಗಲೂ ಬೇಸರಗೊಂಡವಳಲ್ಲ . ಮದುವೆಗಳಲ್ಲಿ ಅಸಂಖ್ಯ ಜರತಾರಿ ,ರೇಷ್ಮೆ ಸೀರೆಗಳು ಸೂರೆ ಹೋದಾಗಲೂ ಆಸೆಪಟ್ಟವಳಲ್ಲಾ . . .ಯಃಕಶ್ಷಿತ್ ಹಳೆಯ ಜೂಲು ಜೂಲಾದ ಜಾನಮಾಜಿನ ಸಲುವಾಗಿ ಅವಳು ಹರಿಸುತ್ತಿರುವ ಕಣ್ಣೀರನ್ನು ನೋಡಿ ಶಮೀಮ್ ಬಾನುವಿಗೆ ಆಘಾತವಾಗತೊಡಗಿತು . 
     ‘ ಬೇಡಾ ಬೀದಾದಿ ಅಳಬೇಡಿ . ..  ಅಜೀಮ್‍ಗೆ ಗೊತ್ತಾಗಲಿಲ್ಲ. . .ಅದು ನಿಮ್ಮ ಜಾನಮಾಜ್ ಅಂತ. ಅವನೇನೂ ಕೆಟ್ಟ ಹುಡುಗನಲ್ಲ ; ಅವನನ್ನು ಕ್ಷಮಿಸಿ . ಈ ಜಾನಮಾಜ್ ತಗೋಳಿ  ’ಅವಳು ಬೇಡಿಕೊಂಡಷ್ಟೂ ಬೀದಾದಿಯ ದುಃಖ ಜಾಸ್ತಿಯಾಗುತ್ತಿತ್ತು .
     ಅವಳ ತಾಳ್ಮೆಯ ಎಲ್ಲೆಗಳು ಕೂಡಾ ಕುಸಿದು ಬಿದ್ದವು .‘ ಛೇ ! ಇದೊಳ್ಳೆ ಗ್ರಹಚಾರವಾಯಿತಲ್ಲಾ ..  ದರಿದ್ರ ಜಾನಮಾಜ್ . . . ಒಂದು ಹಳೆ ತುಂಡಿನ ಸಲುವಾಗಿ ಮಕ್ಕಳಂತೆ ಇಷ್ಟೊಂದು  ಹಟ ಹಿಡೀತಿದೀರಲ್ಲಾ . . . ನಿಮಗೇನಾದರೂ ತಲೆ ಕೆಟ್ಟಿದೀಯಾ ? ’
ಅವಳು ಆ ಮಾತುಗಳನ್ನು ಸಿಡಿಸುವ ವೇಳೆಗೆ ಸಾದತ್ ಮುಂಬಾಗಿಲಿನಿಂದ ಪ್ರವೇಶಿಸಿದ .ಅವನ ಕೈಕಾಲುಗಳು ತಣ್ಣಗಾದೆಂತೆನಿಸಿತು . ಬಹು ದಿನಗಳ ನಿರೀಕ್ಷೆಯ ಮೃತ್ಯು ದರ್ಶನವಾದಂತೆನಿಸಿ ಅವನು ಅಸ್ವಸ್ಥನಾದ . ಅವನು ಇನ್ನೂ ಆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತರುವಂತೆಯೇ ಬೀದಾದಿ ಬಿಳಿಚಿಕೊಂಡು ಕೆಳಗೆ ಬಿದ್ದಳು . ಹಳೆಯ ಜಾನಮಾಜ್ ಅವಳ ಕೈಯಿಂದ ಜಾರಿ ಬಿದ್ದಿತು . ಸಾದತ್ ಕೂಡಲೇ ಅವಳನ್ನು ಮಗುವಿನಂತೆ ಎದೆಗವಚಿದ . ಅವಳನ್ನು ಯಾವ ಶಬ್ದಗಳಮೂಲಕ ಸಾಂತ್ವನ ನೀಡಬೇಕೆಂದು ಅವನಿಗೆ ತಿಳಿಯಲಿಲ್ಲ . ಅಜೀಮ್ ನೀರಿನ ಲೋಟವನ್ನು ಹಿಡಿದು ಬಂದ. ಒಂದೆರಡು ಗುಟುಕು ನೀರನ್ನು ಕುಡಿದ ಮೇಲೆ ಅವಳು ಸಾವರಿಸಿಕೊಂಡು  ಅವನನ್ನು ದಿಟ್ಟಿಸಿ ನೋಡಿದಳು ಮತ್ತು ಸಾಬೀತುಗೊಳಿಸುವ ಧ್ವನಿಯಲ್ಲಿ ‘ನಿನಗೆ ಗೊತ್ತಿದೆಯಲ್ಲವಾ ಅದು ಯಾವ ಜಾನಮಾಜ್ ಅಂತಾ’ ಎಂದು ಕೇಳಿದಳು .
    ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವನಿಗೇನೂ ಗೊತ್ತಿರಲಿಲ್ಲ ,  ಅವಳು ತವರು ಮನೆಗೆ ಹಿಂದಿರುಗಿದ ಹತ್ತು ವರ್ಷಗಳ ನಂತರ ಅವನ ತಂದೆತಾಯಿಯ ಮದುವೆಯಾಗಿದ್ದು ಮತ್ತು ಅವನು ತನ್ನ ತಂದೆತಾಯಿಯರ ಆರನೇ ಮಗ ; ಅವನಿಗಾದರೂ ಹೇಗೆ ತಿಳಿಯಲು ಸಾಧ್ಯ ಅವಳ ಮದುವೆಯ ಸಂಗತಿಗಳು ! ಆದರೆ  ಅವನು ಸುಮ್ಮನೆ ತಲೆಯಾಡಿಸಿದ . ‘ನನ್ನ ಮದುವೆಗೆಂದು ನಮ್ಮಪ್ಪ ಅದನ್ನು ಗುಜರಾತಿನಿಂದ ತರಿಸಿದ್ದರು .ನಾನು ನನ್ನ ಅತ್ತೆಯ ಮನೆಗೆ ಹೋದಾಗ ಮೊದಲ ನಮಾಜ್ ಇದೇ ಜಾನಮಾಜಿನ ಮೇಲೆ ಮಾಡಿದ್ದು . ಮತ್ತೆ . . .ಮತ್ತೆ ’ ಒಂದಿಷ್ಟು ತಡೆದು ಅವಳೆಂದಳು ‘ನಾನು ಆವಾಗ ನನ್ನ ಕೋಣೆಯ ಕಿಟಕಿಯ ಬಳಿ ಸಂಜೆಯ ನಮಾಜಿಗೆಂದು ಈ ಜಾನಮಾಜನ್ನು ಹರವಿದ್ದೆ . . . ಆಗ ಕಿಟಕಿಯಿಂದ ಯಾರೋ ಕೈತುಂಬ ಆ ಮಲ್ಲಿಗೆ ಮೊಗ್ಗುಗಳನ್ನು ನನ್ನ ಜಾನಮಾಜಿನ ಮೇಲೆ ಎಸೆದರು . ನಾನು ಹೆದರಿ ಹೋದೆ . . .  ಆಗ ಚಿಮಣಿ ದೀಪಗಳಿದ್ದದ್ದು. .. . . ಹಾಗೆಯೇ ಗಾಬರಿಯಿಂದ ನಾನು ಎದ್ದು ಕಿಟಕಿಯಿಂದಾಚೆ ನೋಡಿದಾಗ ಅವರು ನಗುತ್ತಾ ನಿಂತಿದ್ದರು ’  ಈ ಲೋಕದ ಹಂಗು ತನಗೆ ಇಲ್ಲವೇ ಇಲ್ಲವೆಂಬಂತೆ ಅವಳು ಯಾವುದೋ ಲೋಕದಲ್ಲಿ ತೇಲಿ ಹೋಗುತ್ತಿದ್ದಳು . ಅವಳ ದಾಂಪತ್ಯದ ಗುಟ್ಟುಗಳು . . . ದೇವರೇ ! ಸಾದಾತ್‍ಗೆ ಗಂಟಲು ಹಿಡಿದಂತಾಯಿತು , ಮುಂದೆ ಮಾತನಾಡಲಿಲ್ಲ .  ಬೇಡ. . .ಬೇಡವೆಂದು ಮನದ ಮೂಲೆಯಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತಿದ್ದರೂ ಅದನ್ನು  ಕಡೆಗಣಿಸಿ ಹೆಂಡತಿಯತ್ತ ದೂಷಿಸುವ ನೋಟವನ್ನು ಬೀರಿದ . ಅವಳು ಇದ್ಯಾವುದನ್ನೂ ಗಮನಿಸದಂತೆ ಸ್ಥಬ್ಧಳಾಗಿದ್ದಳು .ಅವಳ ಕಣ್ಣಂಚಿನಲ್ಲಿಯೂ ಕಂಡೂ ಕಾಣದಂತೆ
     ಇಡೀ ಕುಟುಂಬವು ಚಿತ್ತಾರ್ಪಿತ ಪ್ರತಿಮೆಗಳಂತೆ:  ತಮ್ಮ ತಮ್ಮ ಲೋಕದಲ್ಲಿ ಮುಳುಗಿದ್ದ ಅವರೆಲ್ಲರೂ ತಮ್ಮ ಆತ್ಮದ ಕಟಕಟೆಯಲ್ಲಿ ಆರೋಪಿಗಳಾಗಿ ನಿಂತಿದ್ದರು .  ಅನುದ್ದೇಶಿತವಾಗಿ ನಡೆದು ಹೋದ ಈ ಘಟನೆ ಆ ಕುಟುಂಬವನ್ನು ತಲ್ಲಣಗೊಳಿಸಬಹುದೆಂಬ ನಿರೀಕ್ಷೆ ಯಾರಿಗೂ ಇರಲಿಲ್ಲ . ಎಲ್ಲರೂ ತಮ್ಮತಮ್ಮ ನೆಲೆಯಲ್ಲಿ ಸಮರ್ಥನೆ ಮಾಡಿಕೊಳ್ಳುವ ಸನ್ನಿವೇಶದಲ್ಲಿದ್ದರು . ಬೀದಾದಿ ತನ್ನ ಹಳೆಯ ಜಾನಮಾಜನ್ನು ನಾಜೂಕಾಗಿ  ಒಗೆದು  , ಮಲ್ಲಿಗೆ ಹೂವಿನ ಸುವಾಸನೆಯು ಅಳಿಯದಂತೆ ಎಚ್ಚರಿಕೆಯಿಂದ ತಂತಿಯ ಮೇಲೆ ಹರವಿದ್ದು ತಪ್ಪೆಂದು ಯಾರು ಹೇಳಲು ಸಾಧ್ಯ?  ಅಜೀಮ್‍ನ ತುರ್ತುಕರೆಗೆ ವೇಗವಾಗಿ ಸ್ಪಂದಿಸಿದ ಸನಾ ಅದೊಂದು ಹಳೆಯ ಬಟ್ಟೆ .  . . ..  ಬೈಕ್ ಒರೆಸಲು ಬಳಸಬಹುದೆಂದು ತೀರ್ಮಾನಿಸಿ , ಅವನ ಕೈಗೆ ವರ್ಗಾಯಿಸಿದ್ದು ಕೂಡಾ ಅವಳ ತಪ್ಪಾಗಿರಲಿಲ್ಲ . ಆ ಬಟ್ಟೆಯ ಸ್ವರೂಪವೇ ಅಂತಹದಾಗಿತ್ತು . ಅಜೀಮ್‍ದು ಪಾಪ ಮೊದಲೇ ತಪ್ಪಿರಲಿಲ್ಲ . ಈ ಮುದುಕಿಯಿಂದ ಅರಿಯದ ತನ್ನ ಮಕ್ಕಳಿಗೆ ಯಾವ ಶಾಪ ತಟ್ಟುತ್ತದೆಯೋ ಅದೂ ಆಕೆ ವರ್ಷಾಂತರಗಳಿಂದ ನಮಾಜ್ ಮಾಡಿದ ಜಾನಮಾಜಿನ ಅಪಚಾರದ ದೆಸೆಯಿಂದ ಎಂದು ತಾಯಿಯ ರಕ್ಷಣಾತ್ಮಕ ನಡವಳಿಕೆಯ ಶಮೀಮ್ ಬಾನು ಅಂತಿಮವಾಗಿ ತಾಳ್ಮೆ ಕಳೆದುಕೊಂಡಿದ್ದಕ್ಕೆ .. . . ಹೀಗೆ ಯಾರೊಬ್ಬರೂ ಕೂಡಾ ಯಾರ ಮೇಲೂ  ತಪ್ಪನ್ನು ವರ್ಗಾಯಿಸಲು ಸಾಧ್ಯವಾಗದಿದ್ದುದು ಒಂದು ಆಯಾಮವಾದರೆ ಎಲ್ಲರಿಗೂ ಈ ವಿಷಯದ ಬಗ್ಗೆ ದುಃಖವಾಗಿತ್ತು  . ಅಸಲಿಗೆ ಈ ಯಾವ ಸಂಗತಿಯನ್ನೂ ಕೂಡಾ ತಿಳಿಯುವ ಗೊಡವೆಗೆ ಹೋಗದ ಸಾದಾತ್ ತನ್ನ ಹೆಂಡತಿಯ ಬಗ್ಗೆ ತನಗೆ ಬೇಕಾದಂತೆ ಕಲ್ಪಿಸಿಕೊಂಡ . ತನ್ನ ಹೆದರಿಕೆ ಹೀಗೆ ನಿಜಸ್ವರೂಪ ಪಡೆಯಬಹುದೆಂಬ  ಆತಂಕ ಅದರ ಬೆನ್ನೆಲ್ಲೇ ಬೀದಾದಿಯ ಮುಂದಿನ ಬದುಕಿನ ವ್ಯವಸ್ಥೆಯ ಬಗ್ಗೆ ಅಪಾರವಾದ ಚಿಂತೆಗೀಡಾದ .ಅಂತೂ ಆಕೆಯನ್ನು ಸಮಾಧಾನ ಪಡೆಸಿ , ಅವಳನ್ನು ನಿಧಾನವಾಗಿ ನಡೆಸಿಕೊಂಡು ಬಂದು ಮಲಗಿಸಿದ ಮೇಲೆ ಕೂಡಾ ಅವನು ಬಹಳ ಹೊತ್ತು ಆಕೆಯ ಕೈಯನ್ನು ಹಿಡಿದುಕೊಂಡು ಕುಳಿತೇ ಇದ್ದ . ಶಮೀಮ್ ಬಾನು  ಆ ಜಾನಮಾಜನ್ನು ಏನು ಮಾಡುವುದೆಂದು ತಿಳಿಯದೆ ಇನ್ನಷ್ಟು ಒಗೆದು ಸಾಧ್ಯವಾದಷ್ಟು ಕಲೆಗಳನ್ನು ಹೋಗಲಾಡಿಸಿ , ತಂತಿಯ ಮೇಲೆ ಹರವಿ ಒಳ ನಡೆದಳು .
  ಜಾನಮಾಜ್ ಪ್ರಕರಣವು ಸುಸೂತ್ರವಾಗಿ ಬಗೆ ಹರಿಯುವ ಯಾವ ಲಕ್ಷಣಗಳೂ ಕಂಡು ಬರಲಿಲ್ಲ . ಬದಲಿಗೆ ಅತ್ಯಂತ ಆಶ್ಚರ್ಯಕರವಾಗಿ ವಿಚಿತ್ರ ತಿರುವನ್ನು ಪಡೆದುಕೊಳ್ಳತೊಡಗಿತು . ಈ ಘಟನೆಯಾದ ಮೇಲೆ ಬೀದಾದಿಯ ದಿನಚರಿಯು ಸಂಪೂರ್ಣವಾಗಿ ಬದಲಾವಣೆಯಾಯಿತು .  ಹೊರಗಡೆ ತಂತಿಯಲ್ಲಿ ತೂಗಾಡುತ್ತಿದ್ದ ತನ್ನ ಜಾನಮಾಜನ್ನು ಅವಳು ಮತ್ತೆ ಮುಟ್ಟಲಿಲ್ಲ . ಅದು ಹಾಗೆಯೇ ತಂತಿಯ ಮೇಲೆ ಬಿಸಿಲಲಿಗೆ ಮೈಯೊಡ್ಡಿಕೊಂಡಿತ್ತು . ನಿಯಮಿತವಾಗಿ ನಮಾಜ್ ಮಾಡುತ್ತಿದ್ದ ಬೀದಾದಿ ಕೆಲವು ದಿನಗಳವರೆಗೆ ನಮಾಜ್ ಮಾಡಲಿಲ್ಲ . ನಮಾಜಿನ ಹೊತ್ತು ಆಗುತ್ತಿದ್ದಂತೆಯೇ ಶಮೀಮ್ ತನ್ನಲ್ಲಿದ್ದ ನಾಲ್ಕಾರು ಜಾನಮಾಜುಗಳ ಪೈಕಿ ಯಾವುದಾದರೊಂದನ್ನು ಅವಳು ಕಾಣುವಂತೆ ಇಡುತ್ತಿದ್ದಳು . ಆದರೆ ಬೀದಾದಿ ಅವುಗಳತ್ತ ತಿರುಗಿಯೂ ನೋಡಲಿಲ್ಲ .
 ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ  ಬೀದಾದಿ ಎಲ್ಲೆಂದರಲ್ಲಿ ಕಣ್ಣೀರು ಹಾಕತೊಡಗಿದಳು ಅವಳ ಮೌನ ರೋದನಕ್ಕೆ ಹೊತ್ತು-ಗೊತ್ತು ನೀತಿ -ನಿಯಮ ಯಾವುದೂ ಅನ್ವಯವಾಗುವಂತಿರಲಿಲ್ಲ .ಅಕಾರಣವಾಗಿ ಕಣ್ಣೀರು ಸುರಿಸುವ ಅವಳ ಈಸ್ವಭಾವದಿಂದ ಮಕ್ಕಳ ಮೇಲೆ ಯಾವ ಪರಿಣಾಮವೂ ಆಗಲಿಲ್ಲ ಆದರೆ , ಶಮೀಮ್ ಬಾನು ಮತ್ತು ಸಾದತ್‍ನ ಮೇಲೆ ಅಗಾಧ ಪರಿಣಾಮವುಂಟಾಯಿತು . ಬೀದಾದಿಯ ದುಃಖಕ್ಕೆ ಮೂಲ ಕಾರಣ ತನ್ನ ಹೆಂಡತಿಯೇ ಎಂದು ಅವನು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದು , ಪ್ರಕ್ರಿಯಾತ್ಮಕವಾಗಿ ತಾನೇನೂ ಮಾಡಲು ಸಾಧ್ಯವಿಲ್ಲದ ದಯನೀಯ ಪರಿಸ್ಥಿತಿಯಲ್ಲಿ  ಅವನು ಇನ್ನಷ್ಟು ಕುಗ್ಗಿ ಹೋದ ; ಮತ್ತು ಅಪಾಯಕರ ಮಟ್ಟಕ್ಕೆ ಮೌನಕ್ಕೆ ಶರಣಾದ ಹಾಗೂ ಎಲ್ಲಾ ತಪ್ಪುಗಳನ್ನೂ ರಿಪೇರಿ ಮಾಡುವ ಸಂಕಲ್ಪದೊಡನೆ ಬೀದಾದಿಯತ್ತ ಹೆಚ್ಚು ಹೆಚ್ಚು ಗಮನ ಕೊಡತೊಡಗಿದ .
 ಶಮೀಮ್ ಬಾನುವಿಗೆ ಅವಳ ಕಣ್ಣೀರಿನಿಂದ ವಿಪರೀತ ಕಿರಿಕಿರಿಯಾಗತೊಡಗಿತು . ಸಂಸಾರ ಅಂದ ಮೇಲೆ ಎಲ್ಲೋ ಒಂದಿಷ್ಟು ಹೆಚ್ಚು ಕಡಿಮೆಯಾಗುತ್ತದೆ ; ಅದನ್ನೇ ಇಷ್ಟೊಂದು ಬೆಳಸುವುದೆಂದರೆ . . . ತಾನು ಹೊಸ ನಮಾಜನ್ನು ನೀಡಿದರೂ ಅದನ್ನು ಒಪ್ಪದ ಈ ಮುದುಕಿ ಕೆಟ್ಟ ಹಟವನ್ನು ಮುಂದುವರೆಸುತ್ತಿದೆ ಹಾಗೂ ತನ್ನ ಗಂಡ ಅದನ್ನು ಬೆಳೆಸುವುದರಲ್ಲು ಮುಖ್ಯ ಪಾತ್ರನ್ನು ವಹಿಸುತ್ತಿದ್ದಾನೆ ಎಂದು ಅವಳು ಕೂಡಾ ತಿಮಾನಕ್ಕೆ ಬಂದಿದ್ದು , ಗಂಡನೊಡನೆ ಮಾತನಾಡುವುದನ್ನು ಬಿಟ್ಟಿದ್ದಳು . ಯಾವ ಜಾನಮಾಜ್ ಆದರೆ ಏನು . . . ಮುಖ್ಯ ನಮಾಜ್ ಮಾಡುವುದಲ್ಲವೇ . . . ಅದನ್ನೇ ಈ ಮುದುಕಿ ಬಿಟ್ಟು ಕೂತಿದೆ ಎಂದು ಅವಳಿಗೆ ಅಸಮಾಧಾನವೂ ಜೊತೆಯಲ್ಲಿ ಬೇಸರ ಮತ್ತು ಮಗನಿಗೆ ಆಕೆಯ ಶಾಪ ಎಲ್ಲಿ ತಟ್ಟುತ್ತದೆಯೋ ಎಂಬ ಆತಂಕಗಳ ನಡುವೆ ಅವಳು ಬೇಯುತ್ತಿದ್ದಳು .   ಯಾವ ಶಾಪವು ಕೂಡಾ ತಗುಲದಂತೆ ಅವಳು  ನಿಯಮಿತವಾಗಿ ನಮಾಜ್ ಮಾಡುತ್ತಾ ಮಗನ ರಕ್ಷಣೆಗಾಗಿ ಪ್ರಾರ್ಥನೆ ಮಾಡತೊಡಗಿದಳು , ಬೆಳಗಿನ ನಮಾಜ್ ಮುಗಿದ ಕೂಡಲೇ ಶ್ರದ್ಧೆಯಿಂದ ಯಾಸೀನ್ ಸೂರಃವನ್ನು ಪಠಿಸಿ ,ಅರ್ಧ ಲೋಟ ನಿರ್ಮಲವಾದ ನೀರಿನ ಮೇಲೆ ಉರುಬಿ ,ಮಗನಿಗೆ ಕುಡಿಸಲಾರಂಭಿಸಿದಳು .ಕುಟುಂಬದಲ್ಲಿ ತೀರಾ ಬಡವರಾಗಿರುವವರನ್ನು ಕಂಡು ಅವರಿಗೆ  ಅಕ್ಕಿ ,ಗೋಧಿ ಬೇಳೆಮೊದಲಾದ ಧಾನ್ಯ, ಮೊಟ್ಟೆ ಮತ್ತು ಹೊಸ ಬಟ್ಟೆ ಬರೆಯನ್ನು ವಿತರಣೆ ಮಾಡಿದಳು .  ಕರಿ ಕೋಳಿಯೊದನ್ನು ತರಿಸಿ ಮಗನಿಗೆ ಗೊತ್ತಾಗದಂತೆ ಅವನ ತಲೆಯ ಮೇಲಿನಿಂದ ನಿವಾಳಿಸಿ ಮನೆಯ ಮೇಲಿನಿಂದ ಜೀವಂತವಾಗಿ ಹಾರಿಸಿದಳು ಅಲ್ಲಿಗೂ ಸಮಾಧಾನವಾಗದೆ , ಮೂರು ದಿನಗಳ ಉಪವಾಸವನ್ನು ಮಾಡಿ , ಮಗನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದಳು .
 ಆದರೆ ಇದ್ಯಾವುದೂ ಕೂಡಾ ತನಗೆ ಸಂಬಂಧಿಸಿದ್ದಲ್ಲವೆಂದು ಬೀದಾದಿ ಅನ್ಯಮನಸ್ಕಳಾಗಿದ್ದು ನಿರಂತರವಾಗಿ ಕಣ್ಣೀರುಗರೆಯುವ ಕಾರ್ಯ ಕ್ರಮವನ್ನು ಮುಂದುವರೆಸಿದ್ದಳು . ಅದೆಷ್ಟು ಮಡುಗಟ್ಟಿತ್ತೋ . . . . ಯಾವ ಯಾವ ನೋವುಗಳ ಋಣತೀರಿಸುತ್ತಿದ್ದಳೋ . . . ವರ್ಷಾಂತರಗಳ ನಿರಾಕರಣೆ ಎಲ್ಲಿ ಹೆಪ್ಪುಗಟ್ಟಿತ್ತೋ . . . ಆಗಾಗ್ಗೆ ನಿಟ್ಟುಸಿರು ಬಿಡುತ್ತಾ ‘ಅಲ್ಲಾಹ್ . . . ಅಲ್ಲಾಹ್  . .ನೀನೇ ನೋಡ್ಕೊಳಪ್ಪ’ ಎಂದು ಅಲ್ಲಾಹನಿಗೆ ನೇರವಾಗಿ  ಅಹವಾಲನ್ನು ಸಲ್ಲಿಸುವ ಹೊಸ ವರಸೆ ಕೂಡಾ ಆರಂಭವಾಯಿತು . ಅಲ್ಲಿಗೆ ಶಮೀಮ್ ಬಾನುವಿಗೆ ಇದ್ದ ಬದ್ದ ಸೈರಣೆಯೂ ಕೂಡಾ ತಪ್ಪಿ ಹೋಯಿತು .
 ಮಕ್ಕಳು ಎಷ್ಟೇ ಪ್ರಯತ್ನ ಪಟ್ಟರೂ  ಬೀ ದಾದಿಯ ದುಃಖವನ್ನು ಶಮನಗೊಳಿಸಲು ಸಾಧ್ಯವಾಗಲಿಲ್ಲ . ಅಜೀಮ್ ತಂಗಿಯರೊಡನೆ ಒಳಸಂಚನ್ನು ಮಾಡಿ , ಆ ಜಾನಮಾಜನ್ನು  ಕೊಂಡೊಯ್ದು ಡ್ರೈ ಕ್ಲೀನಿಂಗ್  ಮಾಡಿಸಿ ತಂದ  .ಕಲೆಗಳೇನೋ ಒಂದಿಷ್ಟು ಮಾಯವಾಗಿದ್ದವು . ಆದರೆ ಅದು ಇನ್ನಷ್ಟು ಹಿಂಜಿದಂತಾಗಿ ಜೂಲು ಜೂಲಾಯಿತು . ಅವನು  ಬೆದರಿ  ಅದರ ಸಹವಾಸ ಬೇಡವೆಂದು ಅದನ್ನು ತಂತಿಯ ಮೇಲೆ ನೇತು ಹಾಕಿದ.
    ಹೀಗೆ ಸುಮಾರು ಹದಿನೈದು ಇಪ್ಪತ್ತು ದಿನಗಳ ಕಾಲ ಯಾವುದೋ ದುರ್ವಿಧಿಯಂತೆ ಆ ಜಾನಮಾಜ್ ಪ್ರಕರಣವು  ಸಾದತ್‍ನ ಕುಟುಂಬವನ್ನು ತನ್ನ ಅನಿಷ್ಟ ಸುಳಿಯಲ್ಲಿ ಸಿಲುಕಿಸಿಕೊಂಡಿತು .ಆದಿನ  . . . ಆಸಿಮಾ ಬೀದಾದಿಯ ಎದುರಿಗೆ ತಿಂಡಿಯ ತಟ್ಟೆಯನ್ನು ನೀರಿನ ಲೋಟವನ್ನು ಇಟ್ಟು ಅಲ್ಲಿಯೇ ನಂತು ಉಪಚರಿಸಿದಳು ತಿಂಡಿಯ ತಟ್ಟೆಯನ್ನು ಕೂಡಾ ಗಮನಿಸದೆ ಬೀದಾದಿ ತನ್ನದೇ ಯಾವುದೋ ಲೋಕದಲ್ಲಿ ಮಗ್ನಳಾಗಿದ್ದಳು . ಆಸಿಮಾ ಒಂದು ಚೂರು ದೋಸೆಯನ್ನು ಮುರಿದು ಆಕೆಯ ಬಾಯಲ್ಲಿಟ್ಟಾಗ ಬೀದಾದಿ ಅದನ್ನು ಥೂ . .  ಥೂ . .. ಎಂದು ಉಗಿದದ್ದೂ ಅಲ್ದೆ , ‘ಅಲ್ಲಾಹ್. . . ಅಲಾಹ್   .. ನೀನೇ ನೋಡ್ಕೊಳಪ್ಪ’ ಎಂಬ ಉದ್ಗಾರವನ್ನು ಹೊರಡಿಸಿದಳು . ಅಡುಗೆ ಮನೆಯಲ್ಲಿ ಮಗುಚುಕಾಯಿಯೊಡನೆ ಸನ್ನದ್ಧಳಾಗಿದ್ದ ಶಮೀಮ್‍ಗೆ ರೇಗಿ ಹೋಯಿತು . ದಡಬಡನೆ ಬಂದವಳೇ ಬೀದಾದಿಯ ಟ್ರಂಕನ್ನು ಒಂದುಕೈಯಲ್ಲಿ ಎತ್ತಿಕೊಂಡು ಬಂದವಳೇಯಾವುದೇ ಮುಲಾಜಿಲ್ಲದೆ ಬೀದಾದಿಯನ್ನು ಕೂಡಾ ಎಳೆದುಕೊಂಡು ಬಾಗಿಲ ಹತ್ತಿರ ಬಂದಳು . ಆಸಿಮಾ ಕೂಡಲೇ ಮಧ್ಯ ಬಂದು ‘  ಅಮ್ಮಿ . . . ಅಮ್ಮಿ… ಬೇಡಾ . .  ಅವರನ್ನು ಬಿಟ್ಟು ಬಿಡಿ ’ ಎಂದು ಗೋಗರೆಯುತ್ತಿದ್ದರೂ ಲೆಕ್ಕಿಸದೆ ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಕೂಗಿ ಕರೆದು , ಬೀದಾದಿಯನ್ನ ಜೊತೆಯಲ್ಲಿ ಟ್ರಂಕನ್ನು ಏರಿಸಿ , ಆಟೋದವನ ಕೈಯಲ್ಲಿ ಹಣವನ್ನು ಇರಿಸಿ ‘ಇವರನ್ನು ಆರಿಫ್‍ನ ಮನೆಗೆ ಬಿಡಪ್ಪಾ ’ಎಂದು ಹೇಳಿದವಳೀ ಒಳ ನಡೆದಳು .
    ಆ ಮನೆಯವರನ್ನು ಬಲ್ಲ     ಪರಿಚಯದ ಆಟೋಚಾಲಕನಾಗಿದ್ದ ಅವನು ಶಮೀಮ್ ಬಾನುವಿನ ಕೋಪೋದ್ರಿಕ್ತ ಮುಖವನ್ನು   ಒಮ್ಮೆ ನೋಡಿ ತನ್ನ ಆಟೋವನ್ನು ಓಡಿಸಿ ಆರಿಫ್‍ನ ಮನೆಯತ್ತ ನಡೆದ .ಹೀಗೆ ಬೀದಾದಿಯನನು ತನ್ನ ಓರಗಿತ್ತಿಯ ಮನೆಗೆ ಸಾಗ ಹಾಕಿದರೂ ಆಕೆಗೆ ನೆಮ್ಮದಿಯಂತೂ ದೂರವೇ ಉಳಿಯಿತು . ವಿನಾ ಕಾರಣ ಮಕ್ಕಳ ಮೇ ಸಿಡುಕಲಾರಂಭಿಸಿದಳು . ಎಂದಿನಂತೆ ಅವಳ ಕೋಪಕ್ಕೆ ಈಡು ಮಾಡಿಕೊಳ್ಳುತ್ತಿದ್ದ ಆಸಿಮಾಗೆ ಯಾವುದೇ ಸಾಂತ್ವನ ಪೂರಿತ ಉಡುಗೊರೆಗಳು ದೊರಕುತ್ತಿರಲಿಲ ಬದಿಗೆ ಇನ್ನಷ್ಟು ಒದೆಗಳು ಬೀಳಲಾರಂಭಿಸಿದವು ಮಕ್ಕಳೆಲ್ಲಾ ಕಂಗಾಲಾದರೂ , ಪರಿಸ್ಥಿತಿಯನ್ನು ಸುಧಾರಿಸಬೇಕೆಂಬ ಸಂಕಲ್ಪವೂ ಮೂಡಿತು . ಮತ್ತು ಅವರೆಲ್ಲರೂ ಸಮಯ ಸಿಕ್ಕಿದಾಗಲೆಲಾ ಆರಿಫ್‍ನ ಮನೆಗೆ ಹೋಗಲಾರಂಬಿಸಿದರು . ಬೀದಾದಿಯೊಡನೆ ಮಾತನಾಡಲು ಪ್ರಯತ್ನ ನಡೆಸಿದರು . ಆಶ್ಚರ್ಯಕರವಾಗಿ ಆಮನೆಯಲಿ ಬೀದಾದಿ ಸ್ವಲ್ಪ ಸುಧಾರಿಸಿದ್ದಾಳೆ ಎಂದು ಅವರೆಲ್ಲರೂ ತೀರ್ಮಾನಕ್ಕೆ ಬಂದರು .ಎಂದಿನಂತೆ ಆರಿಫ್‍ನ ಜೊತೆಯಲ್ಲಿ ಕುಳಿತು ಊಟ ಮಾಡುತ್ತಾಳೆ ಮತ್ತು ಎಂದಿನಂತೆ ನಮಾಜನ್ನು ನಿಯಮಿತವಾಗಿ ಮಾಡುತ್ತಿದ್ದಾಳೆ ಎಂಬುದನ್ನು ಗಮನಿಸಿ. ಒಳಗೊಳಗೇ ಮಸಲತ್ತನ್ನು ಮಾಡಿದರು .
ಸುಮಾರು ಹದಿನೈದು ದಿನಗಳ ನಂತರ , ಅಜೀಮ್ ಆಟೋದಲ್ಲಿ ಬಿದಾಧಿಯನನು ಕೂರಿಸಿ , ತಮ್ಮನೆಗೆ ಕರೆ ತಂದ . ಶಮೀಮ್ ಬಾನು ದುರುಗುಟ್ಟಿ ಅವನನ್ನು ನೋಡಿದಳಷ್ಟೇ . . . ಏನನ್ನೂ ನುಡಿಯಲಿಲ್ಲ .ತಾಯಿಯ  ಮೋರೆಯ ಮೇಲೆ ನೆಮ್ಮದಿಯ ಕುರುಹುಗಳನ್ನು ಕಂಡ ಅಜೀಮ್ ಸದ್ಯ ಬಚಾವಾದೆ ಎಂದು ನಿಸೂರಾದ . ಆಮೇರೆಗೆ ಬೀದಾದಿಯನ್ನು ಮತ್ತು ಆಕೆಯ ಕಬ್ಬಿಣದ ಟ್ರಂಕನ್ನು ಒಳ ಕೋಣೆಗೆ ಸಾಗಿಸಿದ , ಆದರೆ ದುರದೃಷ್ಟವಶಾತ್ , ಆಮನೆಗೆ ಬಂದ ಕೂಡಲೇ ಬೀದಾದಿಯ ದೈನಂದಿನ ಕ್ರಮ ತಪ್ಪತೊಡಗಿತು . ಬೆಳಗಿನ ಜಾವದ ನಮಾಜಿಗೆ ಕುಳಿತವಳು ಮಧ್ಯಾಹ್ನ 12 ಗಂಟೆಯವರೆವಿಗೂ ಕುಇತೇ ಇರುತ್ತಿದ್ದಳು . ಯಾವ ನಮಾಜ್ ಮಾಡುತ್ತಿದ್ದಾಳೆ . . . ಯಾವ ಹೊತ್ತಿನ ನಮಾಜ್.. .. .  . ಯಾವ ಸೂರಃವನ್ನು ಪಠಿಸುತ್ತಿದ್ದೇನೆ  ಎಂಬುದು ಅವಳಿಗೆ ನೆನಪಿನಲ್ಲಿ ಉಳಿಯುತ್ತಿರಲಿಲ್ಲ . ಊಟ ಮಾಡಿದ ಕೂಡಲೇ ‘ಅಲ್ಲಾಹ್ . . ಅಲ್ಲಾಹ್ .  ನನಗೆ ಊಟವನ್ನೇ ಕೊಟ್ಟಿಲ್ಲ .. ನೀನೇ   . .  ನೋಡಿಕೊಳ್ಳಪ್ಪಾ ’ ಎಂದು ನೇರವಾಗಿ ಅಲ್ಲಾಹನಿಗೆ ಅಹವಾಲನ್ನು ಸಲ್ಲಿಸಲಾರಂಭಿಸಿದಳು . ಮತ್ತೆ ತಾಪತ್ರಯ ಶುರುವಾಯಿತು .
          ಇನ್ನು, ಸುಮ್ಮನಿದ್ದರೆ ಆಗದು    ಈ ಸಮಸ್ಯೆಗೆ ಪರಿಹಾರವನ್ನು ಹುಡುಕಲೇ ಬೇಕು ಎಂದು ಅಜೀಮ್ ಆಲೋಚಿಸಿದ. ಆ ದಿನ ಶಮೀಮ್ ಬಾನು ಹೊರಹೋಗಿದ್ದಳು. ಸಾದತ್ ಎಂದಿನಂತೆ ಮನೆಯಿಂದ ಹೊರಗಿದ್ದ. ಅಜೀಮ್ ತನ್ನ ಇಬ್ಬರು ತಂಗಿಯರನ್ನು ಸೇರಿಸಿಕೊಂಡು ಮೀಟಿಂಗ್ ಮಾಡಲು ಆರಂಭಿಸಿದ. ಆದರೆ ಎಂದಿನಂತೆ ಕಿಡಿಗೇಡಿ ಬುದ್ದಿಯ ಸನಾ ತಕರಾರನ್ನು ಆರಂಭಿಸಿದಳು.ಊಟ ತಿಂಡಿ ಇಲ್ಲದ ಮೀಟಿಂಗ್ ಅದೆಂತಹುದು  . . . . .? ಬೀದಿಯ ಕೊನೆಯಲ್ಲಿರುವ ಪಾನಿಪುರಿ ಮಾರುವಾತನಿಂದ ಅವನು ಪಾನಿಪುರಿ ತಂದು ಕೊಟ್ಟರೆ ಮಾತ್ರ ತಾನು ಅವನ ಮೀಟಿಂಗ್‍ನಲ್ಲಿ ಭಾಗವಹಿಸುವುದಾಗಿಯೂ ಇಲ್ಲವಾದಲ್ಲಿ ತಾಯಿಗೆ ಸವಿವರ ವೃತ್ತಾಂತವನ್ನು ಅರಹುವುದಾಗಿಯೂ ಅವಳು ಬ್ಲಾಕ್‍ಮೇಲ್ ತಂತ್ರಕ್ಕೆ ಉದ್ಯುಕ್ತಳಾದಳು. ಸಭೆಯನ್ನು ಪ್ರಾರಂಭವಾಸುವುದಕ್ಕಿಂತ ಮುಂಚೆಯೇ ಬರಖಾಸ್ತುಗೊಳಿಸಿ ಅಜೀಮ್ ಹೊರನಡೆದ. ಮತ್ತು ಚಿಕನ್ ಕಬಾಬ್ ಹಾಗೂ ಪೆಪ್ಸಿ ಬಾಟ್ಲಿಯೊಡನೆ ಮರಳಿ ಬಂದ. ಸನಾ ಸಂತುಷ್ಟಳಾದಳು. ಆಸಿಮಾ ಪ್ಲೇಟಿನಲ್ಲಿ ಚಿಕನ್ ತುಂಡುಗಳನ್ನಿಟ್ಟು ಅವರಿಬ್ಬರಿಗೂ ನೀಡಿ ತಾನೂ ಕೂಡಾ ಚಿಕನ್ನನ್ನು ಬಾಯಿಗಿಡುವಷ್ಟರಲ್ಲಿಯೇ ಎಡತಾಕುತ್ತಾ ಬೀದಾದಿ ಅಲ್ಲಿಗೆ ಬಂದಳು. ಅಜೀಮ್ ನಕ್ಕ. ‘ಓಹೋ ಅಧ್ಯಕ್ಷರೇ ಇಲ್ಲದೆ ಸಭೆ ಹೇಗಾಗುತ್ತದೆ’ ಎಂದು ಸ್ವಲ್ಪ ಸರಿದು ಬೀದಾದಿಯನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡ. ಮತ್ತು ಅವಳಿಗೆ ತಿನ್ನಲು ಚಿಕನ್ ಕೊಡಬಹುದೇ ಬೇಡವೇ ಎಂದು  ಆಲೋಚಿಸುತ್ತಾ ಆಸೀಮಾಳತ್ತ ನೋಟ ಬೀರಿದ. ಅವರಿಬ್ಬರ ಸಂಜ್ಞಾ ಭಾಷೆಯನ್ನು ಗಮನಿಸುತ್ತಿದ್ದ ಸನಾ ಯಾವ ಮುನ್ಸೂಚನೆಯನ್ನೂ ನೀಡದೇ ತನ್ನ ಕೈಯಲ್ಲಿದ್ದ ಗ್ಲಾಸಿನಲ್ಲಿ ನೊರೆ ಏಳುತ್ತಿದ್ದ ಪಾನೀಯವನ್ನು ಬೀದಾದಿಯ ಕೈಗಿತ್ತು’ ಕುಡಿಯಿರಿ.. . .. ಕುಡಿಯಿರಿ’ ಎಂದು ಪ್ರೋತ್ಸಾಹಿಸಿದಳು. ಎಲ್ಲರೂ ನೋಡನೋಡುತ್ತಿದ್ದಂತೆಯೇ ಬೀದಾದಿ ಆ ಪಾನೀಯವನ್ನು ತುಟಿಗಿಟ್ಟಳು. ಮತ್ತು ಅದರ  ಸ್ವಾದವನ್ನು ಆನಂದದಿಂದ ಅನುಭವಿಸುತ್ತಾ ಪೂರ್ಣ ಲೋಟವನ್ನು ಒಂದೇ ಗುಟುಕಿನಲ್ಲಿ ಖಾಲಿ ಮಾಡಿದಳು.
           ತುಟಿಗಳ ಮೇಲೆ ನಾಲಿಗೆಯನ್ನಾಡಿಸುತ್ತಾ ಅಜೀಮ್‍ನ ಲೋಟದತ್ತ ಕಣ್ಣನ್ನು ನೆಟ್ಟು ‘ಅದೇನೂ. . . .’ಎಂದು ರಾಗವಾಗಿ ಕೇಳಿದಳು. ಅಜೀಮ್ ಉತ್ತರಿಸುವುದಕ್ಕಿಂತ ಮುಂಚೆಯೇ ಸನಾ ತುಂಟ ನಗೆ ಬೀರುತ್ತಾ  ‘ ಈಗಾಗಲೇ ಏರಿ ಬಿಟ್ಟಿದೆ. . . . ಅದು ಆಬ್-ಎ-ಕೌಸರ್ ‘ಎಂದಿ ಬಿದ್ದಿ ಬಿದ್ದು ನಕ್ಕಳು .ಉಳಿದವರಿಬ್ಬರಿಗೂ ಅವಳ ಈ ಪರಿಯ ಹಾಸ್ಯ ಒಂದಿಷ್ಟೂ ಇಷ್ಟವಾಗಲಿಲ್ಲ . ಬೀದಾದಿಯ ಮುಖ ಊರಗಲವಾಯಿತು.’ ಆಬೆ ಕೌಸರ್ . .. .ಹೌದಾ? ಅದು ಸ್ವರ್ಗದಲ್ಲಿಯಲ್ಲವಾ ಸಿಗುವುದು ‘ ಎಂದು ಬೀದಾದಿ ತರ್ಕಬದ್ಧವಾಗಿ ಪ್ರಶ್ನಿಸಿದಳು.
     ‘ಹೌದು-ಹೌದು ಇದು ಸ್ವರ್ಗದ ಪಾನೀಯ. ಪುಣ್ಯವಂತರಿಗೆ ಮಾತ್ರ ಸಿಗುವುದು . ಈಗ ನೀವು ಸ್ವರ್ಗದಲ್ಲಿದ್ದೀರಿ. ಮತ್ತೆ ನಾನು ನಿಮ್ಮ  ಸೇವೆಗೆ ಸಿದ್ಧವಿರುವ  ಹೂರ್( ಗಂಧರ್ವ ಕನ್ಯೆ) ’ಎಂದು ಅವಳು ನಾಟಕೀಯವಾಗಿ ಉತ್ತರಿಸಿದಳು. ಈಗ ಬೀದಾದಿಗೆ ನಿಜವಾದ ಸಮಸ್ಯೆ ಆರಂಭವಾಗಿತ್ತು.
‘ ಹಾಗಾದರೆ ನಾನು ಸ್ವರ್ಗದಲ್ಲಿದ್ದರೆ. . . . ಅವರು ಎಲ್ಲಿ? ’ ಎಂದು ವಿಚಾರಮಗ್ನಳಾದಳು . ಸನಾ  ತನ್ನ ಕಿಡಿಗೇಡಿತನವನ್ನು   ಬಿಡದೇ ತನ್ನ ಜಡೆಯಲ್ಲಿದ್ದ ಮಲ್ಲಿಗೆಯ ಮಾಲೆಯನ್ನು ಹರಿದು,  ಬೀದಾದಿಯ ಹಿಂದಿನಿಂದ ಬಂದು ಅವರ ಮಡಿಲಲ್ಲಿ ಬೀಳುವಂತೆ ಮಲ್ಲಿಗೆ ಹೂವನ್ನು ಎಸೆದು
        ‘ನೋಡಿ, ನೋಡಿ ನಿಮ್ಮ ಹಿಂದೆಯೇ ಇದ್ದಾರೆ, ಮಲ್ಲಿಗೆ ಹೂವನ್ನು ಎಸೆಯುತ್ತಿದ್ದಾರೆ. ಆದರೆ ನೀವು ಮಾತ್ರ ಹಿಂದಿರುಗಿ ನೋಡಬಾರದು’ ಎಂದು ಆದೇಶ ಮಾಡಿದಳು. ಬೀದಾದಿಯ ಮೋರೆ ಸಂತಸದಿಂದ ಬಿರಿಯುತ್ತಿತ್ತು. ಆದರೆ ಆಕೆ ಹಿಂದಿರುಗಿ ನೋಡಲಿಲ್ಲ. ತಡವರಿಸುತ್ತಾ ತನ್ನ ಮಡಿಲಲ್ಲಿ ಬಿದ್ದಿದ್ದ ಮಲ್ಲಿಗೆ ಹೂವನ್ನು ಸ್ಪರ್ಷಿಸುತ್ತಿದ್ದಳು. ಕೆಲ ಹೊತ್ತು ಕುಳಿತವಳು ನನಗೆ ಇನ್ನಷ್ಟು ‘ ಆಬ್-ಎ_ಕೌಸರ್ ಬೇಕು ಎಂದಳು ’ ಅವರಿಬ್ಬರನ್ನು ಗಮನಿಸುತ್ತಿದ್ದ ಅಜೀಮ್ ಸನಾಳನ್ನು ತಡೆಯಲೂ ಇಲ್ಲಾ , ಅವಳ ಮೇಲೆ ಕೋಪಿಸಲೂ ಇಲ್ಲ . ಬದಲಿಗೆ ಬೀದಾದಿಗೆ ಅತ್ಯಂತ ಖುಷಿ ಕೊಡುತ್ತಿರುವ ಈ ಪ್ರಸಂಗದಲ್ಲಿ ಬೀದಾದಿ ನಿಜವಾಗಿಯೂ  ಸಂತೋಷವನ್ನು ಅನುಭವಿಸುತ್ತಿದ್ದಾಳೆಯೋ ಅಥವಾ ಆಕೆಯೂ ಸನಾಳಂತೆ ನಾಟಕವಾಡುತ್ತಿದ್ದಾಳೆಯೋ  ಎಂದು ನಿರ್ಧರಿಸಲಾಗದೆ  ತನ್ನ ಲೋಟದಲ್ಲಿ ಉಳಿದಿದ್ದ ಪಾನೀಯವನ್ನು ಅವಳ ಕೈಗಿತ್ತ. ಅವಳು ಲೋಟವನ್ನು ತನ್ನ ಬಾಯಿಗಿಟ್ಟು ಸಂತುಷ್ಟಳಾದಳು.
       ಹೊರಗೆ ಬೆಲ್ ಆದದ್ದೇ ತಡ ಆಸಿಮಾ ತಟ್ಟೆ ಲೋಟಗಳನ್ನು ಎತ್ತಿಕೊಂಡು ಅಡುಗೆ ಮನೆಗೆ ದೌಡಾಯಿಸಿದಳು.  ಅವರೆಲ್ಲರೂ ತಮ್ಮ ಕೈ ಬಾಯನ್ನು ಒರೆಸಿಕೊಂಡು ಕುಳಿತರು. ಅಜೀಮ್ ಕೂಡಾ ಎಚ್ಚರಿಕೆಯಿಂದ ಬಾಗಿಲ ಕಡೆ ಕಣ್ಣು ಹಾಯಿಸಿದ. ಶಮೀಮ್ ಬಾನು ಮನೆಯೊಳಗಡೆ ಪ್ರವೇಶಿಸಿದ್ದರಿಂದ ಅವರ ನಾಟಕಕ್ಕೆ ತೆರೆ ಬಿತ್ತು.
          ಆಬ್-ಎ-ಕೌಸರ್ ಕುಡಿದ ನಂತರ ಬೀದಾದಿಯ ಸುಮಾರು ಸಂಕಷ್ಟಗಳು ದೂರವಾದವು. ಸ್ವರ್ಗದಲ್ಲಿರುವವರಿಗೆ ಯಾವ ಕಷ್ಟಗಳಿರುತ್ತವೆ  ? ಅವಳು ಸುತ್ತ ಮುತ್ತಲು ತನ್ನ ಗಂಡನನ್ನು ಕಾಣುತ್ತಿದ್ದಳು. ಅನುಭವಿಸುತ್ತಿದ್ದಳು. ಮತ್ತು ಸ್ವರ್ಗದರಮನೆಯಲ್ಲಿ ನೆಮ್ಮದಿಯನ್ನು ಕಂಡುಕೊಂಡಿದ್ದಳು. ಅವಳು ಒಮ್ಮೆ ಆ ಪಾನೀಯವನ್ನು ಕುಡಿದ ನಂತರ  ತನ್ನ ಸ್ವರ್ಗ ಲೋಕದಿಂದ ಮರಳಿ ಬರಲೇ ಇಲ್ಲ . ಯಾವ ಮತ್ತು ಕೂಡ ಇಲ್ಲದ ಆಪಾನೀಯವು ಬೀದಾದಿಗೆ ಹೇಗೆ ಮತ್ತನ್ನು ತರಿಸಿದೆ ಎಂದು ಸನಾ ಕಂಗಾಲಾದಳು . ಬೀದಾದಿ ಆಗಾಗ್ಗೆ ‘ ನನ್ನ ಹೂರ್ ಎಲ್ಲಿ? ‘ಎಂದು ಹುಡುಕುವುದು ಯಾರನ್ನು ಎಂಬುದು ಶಮೀಮ್ ಬಾನುವಿಗೆ ತಿಳಿಯಲೇ ಇಲ್ಲ . ತನ್ನ ಕೆಲಸ ಕಾರ್ಯದ ನಿಮಿತ್ತ ಅವು ಹೊರಹೋದಾಗ , ಸನಾ ಹೂರ್‍ನ ರೂಪಧಾರಣೆ ಮಾಡುತ್ತಿದ್ದಳು . ಹಾಗೆ ಅವಳು ಹೂರ್ ಆದಾಗಲೆಲ್ಲ ಕಡ್ಡಾಯವಾಗಿ ಚಮಕಿಯ ಸೀರೆಯನ್ನು ಉಡಬೇಕಿತ್ತು . ಬೀದಾದಿಯ ಹೂರ್‍ನ ಪರಿಕಲ್ಪನೆ ಹಾಗಿತ್ತು . ಇಲ್ಲವಾದಲ್ಲಿ ತನ್ನ ಹೂರನ್ನು ಕಾಣದೆ ಬೀದಾದಿ ಅಸ್ವಸ್ಥಳಾಗಿ ,ವಿಶೇಷವಾಗಿ ಪರಿತಪಿಸುತ್ತಿದ್ದಳು .ಹೀಗೆ ತನ್ನ ಸ್ವರ್ಗದ ಪಾನೀಯದ ವಿಶೇಷ ಅನುಭೂತಿಯಲ್ಲಿ ಮತ್ತು ತನ್ನ ಖಾಸಗಿ ಹೂರ್‍ನ ಓಲೈಕೆಯಲ್ಲಿ ಈ ಪ್ರಪಂಚದ ಎಲ್ಲಾ ನಂಟನ್ನು ಕಳೆದುಕೊಂಡು , ತನ್ನ ಪತಿಯ ಸಾಂಗತ್ಯದಲ್ಲಿ ನೆಮ್ಮದಿಯಾಗಿಬಿಟ್ಟಳು . ತನ್ನಲ್ಲಿ ತಾನೇ ಮಾತನಾಡುತ್ತಾ ನಗುತ್ತಾ ಇರುತ್ತಿದ್ದ ಬೀದಾದಿಯನ್ನು ಕಂಡು ಶಮೀಮ್ ಬಾನು ವ್ಯಥೆ ಪಟ್ಟುಕೊಳ್ಳುತ್ತಿದ್ದರೂ . ಅವಳ ಇನ್ನಿತರೆ ರೇಜಿಗೆಗಳು ಇಲ್ಲವಲ್ಲ ಎಂದು ನೆಮ್ಮದಿಯಾಗಿಟ್ಟಳು .ಮತ್ತೆ ಯಾವತ್ತೂ  ಕೂಡ  ಆರಿಫ್ ಮನೆಗೆ ಕಳುಹಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಸಾದತ್‍ಗೆ  ಕೂಡ ಶಮೀಮ್ ಬಾನು  ಬೀದಾದಿಯನ್ನು ಹೊರ ಹಾಕುತ್ತಿಲ್ಲವಲ್ಲ  ಎಂಬುದು ನೆಮ್ಮದಿಯ ಸಂಗತಿಯಾಗಿತ್ತು .
  ಕಷ್ಟ ಒದಗಿ ಬಂದದ್ದು ಮಾತ್ರ ಅಜೀಮ್‍ಗೆ. ಯಾವುದೇ ಮುನ್ಸೂಚನೆಯನ್ನು ನೀಡದೆ ಬಂದೆರಗಿದ  ಸ್ವರ್ಗದ ನಾಟಕವನ್ನು ಅವನು ಮುಂದುವರೆಸಬೇಕಿತ್ತು.  ಕೋಪತಾಪ ಅಳು, ಮತ್ತು ಹಟಮಾರಿತನ ಬೀದಾದಿಯಿಂದ ದೂರವಾಗಿತ್ತು. ಆದರೆ ಅವಳು ಊಟ-ತಿಂಡಿಯನ್ನು ಮಾತ್ರ ಮತ್ತೆ ಮುಟ್ಟಲಿಲ್ಲ. ಆಬ್-ಎ-ಕೌಸರ್‍ನ ವಿನಃ ಅವಳಿಗೆ ಬೇರೆ ಯಾವ ಊಟೋಪಚಾರದ ಅಗತ್ಯವೂ ಇರಲಿಲ್ಲ. ಅವಳಿಗೆ ಆಬ್ –ಎ-ಕೌಸರ್‍ನ್ನು ಸರಬರಾಜು ಮಾಡುವುದರಲ್ಲಿ ಅಜೀಮ್ ಸೋತು ಹೋದ. ಅವಳಿಗೆ ಬೇಕೆನಿಸಿದಾಗಲೆಲ್ಲಾ ಅವಳು ಸ್ವರ್ಗದ ಪಾನೀಯಕ್ಕೆ ಬೇಡಿಕೆ ಸಲ್ಲಿಸಲಾರಂಭಿಸಿದಳು. ಎಳೆನೀರು, ಪಾನಕ , ಅಥವಾ ಇನ್ಯಾವುದೇ ಪಾನೀಯವನ್ನು ಕೊಟ್ಟರೂ ಮುಲಾಜಿಲ್ಲದೇ ಎಸೆದು ಬಿಡುತ್ತಿದ್ದಳು. ಅವಳ ನಾಲಿಗೆಗೆ ಒಗ್ಗಿ ಹೋಗಿದ್ದು, ವಿಶೇಷ ಆನಂದಾನುಭವವನ್ನು ನೀಡುತ್ತಿದ್ದ ಪಾನೀಯದ ಹಿಂದ ಅಜೀಮ್‍ನ ಪಾಕೆಟ್ ಮನಿ ಎಲ್ಲವೂ ಖಾಲಿಯಾಗುತ್ತಿತ್ತು. ಸಾದತ್ ಮತ್ತು ಶಮೀಮ್ ಬಾನು ಎದುರಿಗೂ ಆಕೆ ನಿರಂತರವಾಗಿ ಆಬ್ –ಎ-ಕೌಸರ್‍ನ ಬಗ್ಗೆಯೇ ಮಾತಾಡುತ್ತಿದ್ದಳು. ಅವರಿಬ್ಬರೂ ಈಕೆಗೆ ಸಾಕಷ್ಟು ಬುದ್ದಿ ಭ್ರಮಣೆಯಾಗಿದೆ ಎಂದು ತೀರ್ಮಾನಿಸಿದರು.
         ಪೇಚಿಗೆ ಬಿದ್ದ ಅಜೀಮ್ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ. ದಿನಸಿ ಅಂಗಡಿಯ ಮನೆ ಲೆಕ್ಕದಲ್ಲಿ ಒಂದಿಷ್ಟು ಸುಳ್ಳು ಲೆಕ್ಕ ಬರೆಸಿದ. ಕೊನೆಗೆ ಬೀದಾದಿಯ ವರಾತ ಹೆಚ್ಚಿದಾಗ ಆರಿಫ್‍ನ ಬಳಿ ಹೋಗಿ ಶರಣಾದ. ಆರಿಫ್ ನಕ್ಕು  ನಕ್ಕು ಸಾಕಾಗಿ, ಅವನ ಬೆನ್ನಿಗೆ ಎರಡೇಟು ಬಿಗಿದರೂ ದಿನವೊಂದಕ್ಕೆ ಒಂದು ಬಾಟಲಿ ಪಾನೀಯವು ಅವನಿಗೆ ಸಿಗುವಂತೆ ವ್ಯವಸ್ಥೆ ಮಾಡಿದ. ಸ್ವರ್ಗದ ಪಾನೀಯದ ಹಿನ್ನೆಲೆಯಲ್ಲಿ ಮನೆಯಲ್ಲಿ ಸ್ವಲ್ಪ ನೆಮ್ಮದಿ ಮೂಡಿದಂತಾಯಿತು. ಬರಿ ಪಾನೀಯವನ್ನೇ ಕುಡಿದು, ಬೀದಾದಿ ಸತ್ತರೆ ಏನು ಮಾಡುವುದು ಎಂದು ತೀವ್ರ ಚಿಂತಿತನಾಗಿದ್ದ ಅಜೀಮ್‍ನ ಭಯವನ್ನು ಸುಳ್ಳು ಮಾಡುವಂತೆ ಬೀದಾದಿ ಕಳೆದ ಆರು ತಿಂಗಳಿನಿಂದ ಊಟೋಪಚಾರವಿಲ್ಲದೇ ಬದುಕುತ್ತಿದ್ದಾಳೆ. ಶಮೀಮ್ ಬಾನುವಿಗೆ ಆಶ್ಚರ್ಯದ ಮೇಲೆ ಆಶ್ಚರ್ಯ! ಅನ್ನಾಹಾರವಿಲ್ಲದೇ ಈ ಮುದುಕಿ ಬರೀ ನೀರಿನ ಮೇಲೆ ಬದುಕಿರುವುದಾದರೂ ಹೇಗೆ. . .. ಎಂಬುದು. ಈ ರೀತಿ ಪವಾಡವನ್ನು ಕಂಡ ಶಮೀಮ್ ಬಾನು ಮತ್ತೆ ಅವಳನ್ನು ಆರಿಫ್‍ನ ಮನೆಗೆ ಸಾಗಿಸುವ ಪ್ರಯತ್ನ ಮಾಡಲಿಲ್ಲ. ಸಾದತ್ ಕೂಡಾ ನೆಮ್ಮದಿಯ ನಿಟ್ಟುಸಿರನ್ನು ಬಿಡುತ್ತಾ ಹಿಂದೆ ನಡೆದ  ಜಾನಮಾಜ್ ಪ್ರಕರಣದ ಆಘಾತವನ್ನು ಮರೆಯುವ ಪ್ರಯತ್ನ ಮಾಡುತ್ತಾ ಹೆಂಡತಿಯ ಬಗ್ಗೆ ಆಲೋಚಿಸುತ್ತಲೇ ´’ಪಾಪ ಶಮೀಮ್ ಒಳ್ಳೆಯವಳೇ, ಏನೋ ಈ ಮೆನೋಪಾಸ್ ಎಂಬ ಜಿನ್ ಮೆಟ್ಟಿ ಒಮ್ಮೊಮ್ಮೆ ಹೀಗಾಡ್ತಾಳೆ  ‘ಎಂಬ ಅನುಕೂಲಸಿಂಧು ತೀರ್ಮಾನಕ್ಕೆ ಬಂದ .ಆದರೆ ಆರಿಫ್ ಮಾತ್ರ ಬೀದಾದಿ ಯ ಸಾವನ್ನು ಒಮ್ಮೆ ಬಯಸುತ್ತಾ . . . ಆ ಸಾವು  ಪೌಷ್ಟಿಕಾಂಶದ ಕೊರತೆಯಿಂದ ಮಾತ್ರ ಸಂಭವಿಸಬಾರದು . . . ಸಹಜ ಸಾವಾಗಿದ್ದರೆ ಮಾತ್ರ ತನ್ನ ಆತ್ಮದ ಗ್ಲಾನಿಯಿಂದ ತಾನು ಬಚಾವಾಗಬಹುದು ಇಲ್ಲವಾದರೆ ತಾನೇ ಕೊಲೆಗಾರನಾಗುವವನೇನೊ ಎಂಬ ಆತಂಕದಲ್ಲಿ. . . . . .